ಆರ್ಸಿಬಿ vs ಡಿಸಿ ನಿರ್ಣಾಯಕ ಪಂದ್ಯ; ಮಾಡು ಇಲ್ಲವೇ ಮಡಿ ಪಂದ್ಯಕ್ಕಿದೆ ಮಳೆಯ ಭೀತಿ, ಹವಾಮಾನ ಇಲಾಖೆ ಹೇಳಿದ್ದೇನು?
- RCB vs DC : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಆರ್ಸಿಬಿ ಕಥೆ ಏನು?
- RCB vs DC : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಆರ್ಸಿಬಿ ಕಥೆ ಏನು?
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
17ನೇ ಆವೃತ್ತಿಯ ಐಪಿಎಲ್ನ 62ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಈ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
(AFP)(2 / 7)
ಐಪಿಎಲ್ನ ಮೊದಲಾರ್ಧದ 7 ಪಂದ್ಯಗಳಲ್ಲಿ 6 ಸೋತಿದ್ದ ಆರ್ಸಿಬಿ, ದ್ವಿತಿಯಾರ್ಧದ 5 ಪಂದ್ಯಗಳಲ್ಲಿ 4 ಜಯಿಸಿದೆ. ಇದರೊಂದಿಗೆ ಪ್ಲೇಆಫ್ ಕನಸು ಕಾಣಲಾರಂಭಿಸಿದೆ.
(AFP)(3 / 7)
ಆದರೆ, ಡೆಲ್ಲಿ ಪಂದ್ಯಕ್ಕೂ ಮುನ್ನ ಆರ್ಸಿಬಿ ಆತಂಕಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದ ಜೋರು ಮಳೆ ಸುರಿಯುತ್ತಿದ್ದು, ಇವತ್ತಿನ ಪಂದ್ಯಕ್ಕೂ (ಮೇ 12) ವರುಣ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.
(AFP)(4 / 7)
ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
(ANI)(5 / 7)
ಹಗಲಿನಲ್ಲಿ ಬಿಸಿಲು ಕಾಣಿಸಿಕೊಳ್ಳಲಿದ್ದು, ಸಂಜೆ ವೇಳೆ ಮಳೆ ಕಾಣಿಸಿಕೊಳ್ಳಲಿದೆ. ಅಲ್ಲದೆ, ರಾತ್ರಿ 11ರ ನಂತರ ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
(PTI)(6 / 7)
ಸಂಜೆ ಶೇ 25ರಷ್ಟು, ರಾತ್ರಿ 11ರ ನಂತರ 55ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ಲೇಆಫ್ ಕನಸು ಕಾಣುತ್ತಿರುವ ಆರ್ಸಿಬಿಗೆ ಮಳೆ ತೊಂದರೆ ನೀಡುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
(PTI)ಇತರ ಗ್ಯಾಲರಿಗಳು