ಕನ್ನಡ ಸುದ್ದಿ  /  Photo Gallery  /  Cricket News Ravindra Jadeja Rivaba Solanki Love Story Cricketer Married Rich Daughter In 2016 Now Jaddu Wife Mla Prs

Jadeja Love Story: ಬೆಳೆದಿದ್ದು ಬಡತನ ಕುಟುಂಬದಿಂದ, ವಿವಾಹವಾಗಿದ್ದು ಆಗರ್ಭ ಶ್ರೀಮಂತನ ಮಗಳನ್ನು; ಇದು ಜಡೇಜಾ-ರಿವಾಬಾ ಲವ್​​ಸ್ಟೋರಿ

  • ಐಪಿಎಲ್​​ನಲ್ಲಿ ಸಿಎಸ್​ಕೆ ಚಾಂಪಿಯನ್​ ಆಗುತ್ತಿದ್ದಂತೆ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು, ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು. ಸೀರೆಯುಟ್ಟಿದ್ದ ರಿವಾಬಾರನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದರು. ಶ್ರೀಮಂತರಾದರೂ ಸಂಸ್ಕೃತಿ ಮರೆತಿಲ್ಲ ಎಂದು ಕೊಂಡಾಡಿದ್ದರು. ಜಡ್ಡು-ರಿವಾಬಾರದ್ದು ಪ್ರೇಮವಿವಾಹ ಎಂದು ನಿಮಗೆ ಗೊತ್ತಾ?

16ನೇ ಆವೃತ್ತಿಯ ಐಪಿಎಲ್​ ಮುಗೀತು. ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ರೋಚಕ ಗೆಲುವು ತಂದುಕೊಟ್ಟರು. ಚೆನ್ನೈ ಸೂಪರ್ ಕಿಂಗ್ಸ್​​ 5ನೇ ಬಾರಿ ಟ್ರೋಫಿಗೂ ಮುತ್ತಿಕ್ಕಿತು.
icon

(1 / 10)

16ನೇ ಆವೃತ್ತಿಯ ಐಪಿಎಲ್​ ಮುಗೀತು. ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ರೋಚಕ ಗೆಲುವು ತಂದುಕೊಟ್ಟರು. ಚೆನ್ನೈ ಸೂಪರ್ ಕಿಂಗ್ಸ್​​ 5ನೇ ಬಾರಿ ಟ್ರೋಫಿಗೂ ಮುತ್ತಿಕ್ಕಿತು.(CSK Twitter)

ಫೈನಲ್​​ ಗೆದ್ದ ಬಳಿಕ ಚೆನ್ನೈ​ ತಂಡದ ಆಟಗಾರರು, ಟ್ರೋಫಿಯೊಂದಿಗೆ ಫೋಸ್​​ ಕೊಟ್ಟು ಸಂಭ್ರಮಿಸಿದರು. ಟ್ರೋಫಿ ಜೊತೆಗೆ ಧೋನಿ ಜೊತೆ ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು. ಜಡೇಜಾ ಕೂಡ ಧೋನಿ ಜೊತೆ ಫೋಟೋ ತೆಗೆಸಿಕೊಂಡರು. ಜೊತೆಯಲ್ಲಿ ಪತ್ನಿ ರಿವಾಬಾ ಸಹ ಇದ್ದರು.
icon

(2 / 10)

ಜಡೇಜಾ ಮತ್ತು ಅವರ ಪತ್ನಿ ರಿವಾಬಾ ಜಡೇಜಾ ಇಬ್ಬರು ಸಹ ಪ್ರೇಮ ವಿವಾಹ ಆಗಿದ್ದರು ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ಬಡತನದಿಂದ ಬಂದ ಜಡ್ಡು, ಈಗ ಟೀಮ್​ ಇಂಡಿಯಾ ಮೇಜರ್​ ಪ್ಲೇಯರ್​. ಅವರ ಪತ್ನಿ ಅಪ್ಸರೆ, ಹಾಗೇ ಫೇಮಸ್ ಪೊಲಿಟಿಷಿಯನ್!
icon

(3 / 10)

ಬಡತನದ ಕುಟುಂಬ. ಸಣ್ಣ ಕ್ವಾಟ್ರಸ್​ನಲ್ಲಿ 5 ಜನ ವಾಸ. ಖಾಸಗಿ ಕಂಪನಿಯಲ್ಲಿ ಅಪ್ಪ ಅನಿರುದ್ಧ್​ ಜಡೇಜಾ ವಾಚ್​ಮನ್. ಸರ್ಕಾರಿ ಆಸ್ಪತ್ರೆಯಲ್ಲಿ ಅಮ್ಮ ಲತಾ ನರ್ಸ್​. ಅಪ್ಪ ಭಾರಿ ಶಿಸ್ತು. ಜಡೇಜಾಗೆ ಕ್ರಿಕೆಟ್​​​ ಸೇರುವ ಬಯಕೆ. ಆದರೆ ಅಪ್ಪನಿಗೆ ಸೇನೆಗೆ ಆಸೆ.
icon

(4 / 10)

ಆದರೆ ಅಮ್ಮನ ನೆರವಿನಿಂದ ಜಡ್ಡು​​​​​, ಅಪ್ಪನಿಗೆ ತಿಳಿಯದಂತೆ ಕ್ರಿಕೆಟ್​ ಆಡ್ತಿದ್ದ. ಜಡ್ಡು ತನ್ನ 15 ವರ್ಷದ ಅಮ್ಮ ರಸ್ತೆ ಅಪಘಾತದಲ್ಲಿ ಕಣ್ಣು ಮುಚ್ಚುತ್ತಾರೆ. ತಾಯಿಯ ಉದ್ಯೋಗ ಪಡೆದಿದ್ದ ಅಕ್ಕ ನೈನಾ, ತಮ್ಮನ ನೆರವಿಗೆ ನಿಂತು ಮತ್ತೆ ಕ್ರಿಕೆಟ್​ ಆಡುವಂತೆ ಪ್ರೋತ್ಸಾಹಿಸಿದ್ದರು.
icon

(5 / 10)

ಬಾಲ್ಯದಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದ ಜಡೇಜಾ, ಇಂದು ವಿಶ್ವಕ್ರಿಕೆಟ್​​ನಲ್ಲಿ ಸೂಪರ್​​​ಸ್ಟಾರ್. ಇದೆಲ್ಲಾ ಸುಲಭಕ್ಕೆ ಸಿಕ್ಕದ್ದಲ್ಲ. ಬಡತನ, ನೋವು, ಹತಾಶೆ, ಅವಮಾನ ಎಲ್ಲವನ್ನೂ ಮೆಟ್ಟಿ ನಿಂತು ದೊಡ್ಡ ಕ್ರಿಕೆಟರ್​ ಆದ. 2008ರಲ್ಲಿ ಅಂಡರ್​​​-19 ವಿಶ್ವಕಪ್​​​ ಆಡಿದ ಬಳಿಕ ಜಡ್ಡು, ಅದೃಷ್ಟ ಬದಲಾಯಿತು. ಅದೇ ವರ್ಷ ಐಪಿಟಲ್​ಗೆ ಕಾಲಿಟ್ಟರು.
icon

(6 / 10)

ವಿಶ್ವದ ಸೂಪರ್ ಸ್ಟಾರ್​ ಆದ ಕ್ರಿಕೆಟರ್​​ಗೆ​ ಸಿಕ್ಕಿದ್ದು, ಉದ್ಯಮಿ, ಆಗರ್ಭ ಶ್ರೀಮಂತನ ಮಗಳು. ಆಕೆಯ ಹೆಸರು ರಿವಾಬಾ ಸೋಲಂಕಿ. ವಿಶೇಷ ಅಂದರೆ ಈಕೆ ಜಡೇಜಾ ಸಹೋದರಿ ನೈನಾ ಸ್ನೇಹಿತೆ. ಒಂದು ಪಾರ್ಟಿಯಲ್ಲಿ ರಿವಾಬಾರನ್ನು ನೈನಾ, ಜಡೇಜಾಗೆ ಪರಿಚಯಿಸಿದ್ರು.
icon

(7 / 10)

ಮನೆಯಲ್ಲಿ ಮದುವೆಗೆ ಒಪ್ಪದಿದ್ದ ಜಡೇಜಾ, ರಿವಾಬಾ ಅವರ ಸ್ನೇಹ ಬೆಳೆದಂತೆ ವಿವಾಹಕ್ಕೆ ಒಪ್ಪುತ್ತಾರೆ. ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದ ಮೊದಲ ನೋಟದಲ್ಲೇ ಪ್ರೀತಿಯಾಗುತ್ತದೆ. ಪರಸ್ಪರ ಡೇಟಿಂಗ್​ ಮಾಡಿದರು. ಕೊನೆಗೆ ಜಡ್ಡುಸ್ ಫುಡ್ ಫೀಲ್ಡ್‌ನಲ್ಲಿ 2016ರ ಫೆಬ್ರವರಿ 5ರಂದು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡರು. 
icon

(8 / 10)

ಎಂಗೇಜ್​ಮೆಂಟ್​ ಆದ ಎರಡು ತಿಂಗಳ ನಂತರ ಅಂದರೆ 2016ರ ಏಪ್ರಿಲ್ 17ರಂದು ವಿವಾಹವಾದರು. ಅದ್ಧೂರಿ ಮದುವೆ ನಡೆಯಿತು. ಈ ದಂಪತಿಗೆ ನಿಧ್ಯಾನ ಎಂಬ ಮುದ್ದಿನ ಹೆಣ್ಣು ಮಗು ಇದೆ. ಮದುವೆಗೆ ಮುನ್ನವೇ ಜಡ್ಡುಗೆ ಮಾವ ಹರ್ದೇವ್ ಸಿಂಗ್ ಸೋಲಂಕಿ ಅವರು 1 ಕೋಟಿ ಮೌಲ್ಯದ ಆಡಿ ಕ್ಯೂ7 ಕಾರನ್ನು ಉಡಗೊರೆ ನೀಡಿದ್ದರು.
icon

(9 / 10)

ಮಾವ ಹರ್ದೇವ್ ಅವರಿಗೆ 2 ಖಾಸಗಿ ಶಾಲೆಗಳು, ಹೋಟೆಲ್ ಇದೆ. ರಿವಾಬಾ ಸೋಲಂಕಿ, 2019ರಲ್ಲಿ ಬಿಜೆಪಿ ಸೇರಿದ್ದರು. ಎಂಜಿನಿಯರ್​ ಕೂಡ ಆಗಿದ್ದರು. ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಕೂಡ ಆಗಿದ್ದರು. ಈಗ ಶಾಸಕಿ ಕೂಡ ಹೌದು. ಅಂದು ಏನೂ ಇಲ್ಲದೆ ಕಠಿಣ ಪರಿಶ್ರಮದೊಂದಿಗೆ ಇಂದು ಎಲ್ಲವನ್ನೂ ಗಳಿಸಿದ ಜಡ್ಡು, ಭಾರತದ ಶ್ರೀಮಂತರ ಪೈಕಿ ಒಬ್ಬರು.
icon

(10 / 10)

IPL_Entry_Point

ಇತರ ಗ್ಯಾಲರಿಗಳು