ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿದ ಫಾಫ್ ಡು ಪ್ಲೆಸಿಸ್; ಅಭಿಮಾನಿಗಳ ಮನ ಗೆದ್ದ ಆರ್​ಸಿಬಿ ನಾಯಕ

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿದ ಫಾಫ್ ಡು ಪ್ಲೆಸಿಸ್; ಅಭಿಮಾನಿಗಳ ಮನ ಗೆದ್ದ ಆರ್​ಸಿಬಿ ನಾಯಕ

  • Faf Du Plessis: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ತಾನು ಗೆದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಯಶ್ ದಯಾಳ್​ಗೆ ಅರ್ಪಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಪ್ಲೇಆಫ್​ ಡಿಸೈಡರ್​​ನ ರೋಚಕ ಫೈಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 27 ರನ್​​ಗಳಿಂದ ಅಮೋಘ ಗೆಲುವು ಸಾಧಿಸಿತು. ಸತತ 6 ಸೋಲುಗಳಿಂದ 6 ಗೆಲುವುಗಳ ತನಕ ಪ್ಲೇ ಆಫ್​​ ಪ್ರವೇಶಿಸುವ ಮೂಲಕ ಅಸಾಧ್ಯವನ್ನೂ ಸಾಧಿಸಿ ತೋರಿಸಿದೆ.
icon

(1 / 7)

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಪ್ಲೇಆಫ್​ ಡಿಸೈಡರ್​​ನ ರೋಚಕ ಫೈಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 27 ರನ್​​ಗಳಿಂದ ಅಮೋಘ ಗೆಲುವು ಸಾಧಿಸಿತು. ಸತತ 6 ಸೋಲುಗಳಿಂದ 6 ಗೆಲುವುಗಳ ತನಕ ಪ್ಲೇ ಆಫ್​​ ಪ್ರವೇಶಿಸುವ ಮೂಲಕ ಅಸಾಧ್ಯವನ್ನೂ ಸಾಧಿಸಿ ತೋರಿಸಿದೆ.(PTI)

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಸಿಎಸ್​ಕೆ ಬೌಲರ್​​ಗಳ ಮತ್ತು ಮಳೆಯ ಸವಾಲನ್ನು ದಿಟ್ಟವಾಗಿ ಎದುರಿಸಿ ಸ್ಕೋರ್ ಬೋರ್ಡ್​​ನಲ್ಲಿ ಬೃಹತ್​ ಮೊತ್ತ ಪೇರಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47),  ರಜತ್ ಪಾಟೀದಾರ್ (41)​, ಕ್ಯಾಮರೂನ್ ಗ್ರೀನ್ (38*) ಅವರ ಆಟದಿಂದ ನಿಗದಿತ 20 ಓವರ್​​​ಗಳಲ್ಲಿ 5 ವಿಕೆಟ್​ಗೆ 218 ರನ್​ ಗಳಿಸಿತು.
icon

(2 / 7)

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಸಿಎಸ್​ಕೆ ಬೌಲರ್​​ಗಳ ಮತ್ತು ಮಳೆಯ ಸವಾಲನ್ನು ದಿಟ್ಟವಾಗಿ ಎದುರಿಸಿ ಸ್ಕೋರ್ ಬೋರ್ಡ್​​ನಲ್ಲಿ ಬೃಹತ್​ ಮೊತ್ತ ಪೇರಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47),  ರಜತ್ ಪಾಟೀದಾರ್ (41)​, ಕ್ಯಾಮರೂನ್ ಗ್ರೀನ್ (38*) ಅವರ ಆಟದಿಂದ ನಿಗದಿತ 20 ಓವರ್​​​ಗಳಲ್ಲಿ 5 ವಿಕೆಟ್​ಗೆ 218 ರನ್​ ಗಳಿಸಿತು.(PTI)

ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಪ್ರತಿರೋಧ ತೋರಿದರೂ ಸೋಲಿಗೆ ಶರಣಾಗಬೇಕಾಯಿತು. ಸಿಎಸ್​ಕೆ ಪ್ಲೇಆಫ್ ಪ್ರವೇಶಿಸಲು 218ರ ಬದಲಿಗೆ 201 ರನ್ ಗಳಿಸಿದ್ದರೂ ಸಾಕಾಗಿತ್ತು. ಆದರೆ, 191 ರನ್​ಗಳಿಗೆ ಇನ್ನಿಂಗ್ಸ್​ ಕೊನೆಗೊಳಿಸಿತು. ಇದರೊಂದಿಗೆ ಟೂರ್ನಿಯಿಂದಲೂ ಹೊರ ಬಿತ್ತು. ಪಂದ್ಯದ ನಂತರ ಫಾಫ್ ಡು ಪ್ಲೆಸಿಸ್  ನಡೆ ಎಲ್ಲರ ಹೃದಯ ಗೆದ್ದಿದೆ.
icon

(3 / 7)

ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಪ್ರತಿರೋಧ ತೋರಿದರೂ ಸೋಲಿಗೆ ಶರಣಾಗಬೇಕಾಯಿತು. ಸಿಎಸ್​ಕೆ ಪ್ಲೇಆಫ್ ಪ್ರವೇಶಿಸಲು 218ರ ಬದಲಿಗೆ 201 ರನ್ ಗಳಿಸಿದ್ದರೂ ಸಾಕಾಗಿತ್ತು. ಆದರೆ, 191 ರನ್​ಗಳಿಗೆ ಇನ್ನಿಂಗ್ಸ್​ ಕೊನೆಗೊಳಿಸಿತು. ಇದರೊಂದಿಗೆ ಟೂರ್ನಿಯಿಂದಲೂ ಹೊರ ಬಿತ್ತು. ಪಂದ್ಯದ ನಂತರ ಫಾಫ್ ಡು ಪ್ಲೆಸಿಸ್  ನಡೆ ಎಲ್ಲರ ಹೃದಯ ಗೆದ್ದಿದೆ.(PTI)

ಭರ್ಜರಿ ಅರ್ಧಶತಕ ಸಿಡಿಸಿದ (54) ಮತ್ತು ಫೀಲ್ಡಿಂಗ್​​​ನಲ್ಲೂ ಭಯಾನಕ 2 ಕ್ಯಾಚ್ ಪಡೆದ ಫಾಫ್ ಡು ಪ್ಲೆಸಿಸ್, ಒತ್ತಡದಲ್ಲೂ ನಾಯಕನಾಗಿ ಅದ್ಭುತವಾಗಿ ನಿಭಾಯಿಸಿದ ರೀತಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತನಗೆ ಬಂದಿದ್ದ ಈ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
icon

(4 / 7)

ಭರ್ಜರಿ ಅರ್ಧಶತಕ ಸಿಡಿಸಿದ (54) ಮತ್ತು ಫೀಲ್ಡಿಂಗ್​​​ನಲ್ಲೂ ಭಯಾನಕ 2 ಕ್ಯಾಚ್ ಪಡೆದ ಫಾಫ್ ಡು ಪ್ಲೆಸಿಸ್, ಒತ್ತಡದಲ್ಲೂ ನಾಯಕನಾಗಿ ಅದ್ಭುತವಾಗಿ ನಿಭಾಯಿಸಿದ ರೀತಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತನಗೆ ಬಂದಿದ್ದ ಈ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.(PTI)

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಫಾಫ್, ನಾನು ಈ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಯಶ್ ದಯಾಳ್ ಅವರಿಗೆ ಅರ್ಪಿಸುತ್ತೇನೆ. ಅವರು ಕೊನೆಯ ಓವರ್​​ನಲ್ಲಿ ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾಗಿತ್ತು. ಅದಕ್ಕೆ ಅವರು ಅರ್ಹರು ಎಂದು ಫಾಫ್ ಹೇಳಿದ್ದಾರೆ.
icon

(5 / 7)

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಫಾಫ್, ನಾನು ಈ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಯಶ್ ದಯಾಳ್ ಅವರಿಗೆ ಅರ್ಪಿಸುತ್ತೇನೆ. ಅವರು ಕೊನೆಯ ಓವರ್​​ನಲ್ಲಿ ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾಗಿತ್ತು. ಅದಕ್ಕೆ ಅವರು ಅರ್ಹರು ಎಂದು ಫಾಫ್ ಹೇಳಿದ್ದಾರೆ.(PTI)

ಈ ಪಿಚ್​​ನಲ್ಲಿ ಪೇಸ್​ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಕೌಶಲ್ಯಗಳ ಮೇಲೆ ನಂಬಿಕೆ ಇಡಿ. ಅದನ್ನು ಆನಂದಿಸಿ. ಇದಕ್ಕಾಗಿ ನೀವು ತರಬೇತಿ ಪಡೆದಿದ್ದೀರಿ ಎಂದು ಯಶ್​ಗೆ ಸಲಹೆ ನೀಡಿದ ಫಾಫ್, ಮೊದಲ ಎಸೆತದಲ್ಲಿ ಯಾರ್ಕರ್ ಕೆಲಸ ಮಾಡಲಿಲ್ಲ. ಅದಕ್ಕೆ ದಯಾಳ್​ ವೇಗಕ್ಕೆ ಮರಳಿದರು. ಅದು ನಂಬಲಾಗದಷ್ಟು ಚೆನ್ನಾಗಿ ಕೆಲಸ ಮಾಡಿತು ಎಂದು ಹೇಳಿದ್ದಾರೆ.
icon

(6 / 7)

ಈ ಪಿಚ್​​ನಲ್ಲಿ ಪೇಸ್​ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಕೌಶಲ್ಯಗಳ ಮೇಲೆ ನಂಬಿಕೆ ಇಡಿ. ಅದನ್ನು ಆನಂದಿಸಿ. ಇದಕ್ಕಾಗಿ ನೀವು ತರಬೇತಿ ಪಡೆದಿದ್ದೀರಿ ಎಂದು ಯಶ್​ಗೆ ಸಲಹೆ ನೀಡಿದ ಫಾಫ್, ಮೊದಲ ಎಸೆತದಲ್ಲಿ ಯಾರ್ಕರ್ ಕೆಲಸ ಮಾಡಲಿಲ್ಲ. ಅದಕ್ಕೆ ದಯಾಳ್​ ವೇಗಕ್ಕೆ ಮರಳಿದರು. ಅದು ನಂಬಲಾಗದಷ್ಟು ಚೆನ್ನಾಗಿ ಕೆಲಸ ಮಾಡಿತು ಎಂದು ಹೇಳಿದ್ದಾರೆ.(ANI)

ಅಂತಿಮ ಓವರ್​​ನಲ್ಲಿ ಯಶ್ ದಯಾಳ್ 17 ರನ್​​​​ಗಳನ್ನು ಡಿಫೆಂಡ್ ಮಾಡಿಕೊಂಡರು. ಕ್ರೀಸ್​ನಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರಂತಹ ಅನುಭವಿಗಳೇ ಇದ್ದರೂ 17 ರನ್​ಗಳನ್ನು ರಕ್ಷಿಸಿಕೊಂಡ ಯಶ್ ದಯಾಳ್ ಹೀರೋ ಆಗಿ ಹೊಮ್ಮಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸುವುದಾಗಿ ಫಾಫ್ ಹೇಳಿದ್ದಾರೆ.
icon

(7 / 7)

ಅಂತಿಮ ಓವರ್​​ನಲ್ಲಿ ಯಶ್ ದಯಾಳ್ 17 ರನ್​​​​ಗಳನ್ನು ಡಿಫೆಂಡ್ ಮಾಡಿಕೊಂಡರು. ಕ್ರೀಸ್​ನಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರಂತಹ ಅನುಭವಿಗಳೇ ಇದ್ದರೂ 17 ರನ್​ಗಳನ್ನು ರಕ್ಷಿಸಿಕೊಂಡ ಯಶ್ ದಯಾಳ್ ಹೀರೋ ಆಗಿ ಹೊಮ್ಮಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸುವುದಾಗಿ ಫಾಫ್ ಹೇಳಿದ್ದಾರೆ.


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು