ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹುಟ್ಟುಹಬ್ಬ; ಆರ್‌ಸಿಬಿ ಲಕ್ಕೀ ಚಾರ್ಮ್‌, ಭಾರತದ ಉದಯೋನ್ಮುಖ ಪ್ರತಿಭೆಯ ದಾಖಲೆಗಳ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹುಟ್ಟುಹಬ್ಬ; ಆರ್‌ಸಿಬಿ ಲಕ್ಕೀ ಚಾರ್ಮ್‌, ಭಾರತದ ಉದಯೋನ್ಮುಖ ಪ್ರತಿಭೆಯ ದಾಖಲೆಗಳ ಚಿತ್ರನೋಟ

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹುಟ್ಟುಹಬ್ಬ; ಆರ್‌ಸಿಬಿ ಲಕ್ಕೀ ಚಾರ್ಮ್‌, ಭಾರತದ ಉದಯೋನ್ಮುಖ ಪ್ರತಿಭೆಯ ದಾಖಲೆಗಳ ಚಿತ್ರನೋಟ

  • ಆರ್‌ಸಿಬಿ ತಂಡದ ಚಿನಕುರುಳಿ, ಕನ್ನಡಿಗರ ಪ್ರೀತಿಯ ಟಗರು ಪುಟ್ಟಿ, ಭಾರತ ವನಿತೆಯರ ಕ್ರಿಕೆಟ್‌ ತಂಡ ಉದಯೋನ್ಮುಖ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡಬ್ಲ್ಯುಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ಸ್‌ ಬೆಂಗಳೂರು ಪರ ಆಡಿ ಮಿಂಚಿದ ಈ ಕನ್ನಡತಿ, ಕೆಲವೇ ತಿಂಗಳುಗಳಲ್ಲಿ ಭಾರತ ತಂಡಕ್ಕೆ ಕಾಲಿಟ್ಟು ಮಿಂಚಿದರು. ಇವರ ಸಾಧನೆಗಳ ನೋಟ ಇಲ್ಲಿದೆ.

ಆರ್‌ಸಿಬಿ ತಂಡದ ಚಿನಕುರುಳಿ, ಕನ್ನಡಿಗರ ಪ್ರೀತಿಯ ಟಗರು ಪುಟ್ಟಿ, ಭಾರತ ವನಿತೆಯರ ಕ್ರಿಕೆಟ್‌ ತಂಡ ಉದಯೋನ್ಮುಖ ಆಟಗಾರ್ತಿ ಶರೇಯಾಂಕ ಪಾಟೀಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡಬ್ಲ್ಯುಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ಸ್‌ ಬೆಂಗಳೂರು ಪರ ಆಡಿ ಮಿಂಚಿದ ಈ ಕನ್ನಡತಿ, ಕೆಲವೇ ತಿಂಗಳುಗಳಲ್ಲಿ ಭಾರತ ತಂಡಕ್ಕೆ ಕಾಲಿಟ್ಟು ಮಿಂಚಿದರು. ಇವರ ಸಾಧನೆಗಳ ನೋಟ ಇಲ್ಲಿದೆ.  
icon

(1 / 8)

ಭಾರತದ ವನಿತೆಯರ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಹುಟ್ಟಿದ್ದು 2002ರ ಜುಲೈ 31ರಂದು. ಬೆಂಗಳೂರಿನಲ್ಲಿ ಹುಟ್ಟಿದ ಇವರು, ಓದುತ್ತಿರುವುದು ಕೂಡಾ ಕರ್ನಾಟಕದ ರಾಜಧಾನಿಯಲ್ಲೇ.
icon

(2 / 8)

ಡಬ್ಲ್ಯುಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ಪರ ಶ್ರೇಯಾಂಕಾ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ. ಪರ್ಪಲ್‌ ಕ್ಯಾಪ್‌ ಗೆದ್ದ ಅವರು, ಎಮರ್ಜಿಂಗ್‌ ಪ್ಲೇಯರ್‌ ಆಗಿ ಹೊರಹೊಮ್ಮಿದರು.
icon

(3 / 8)

ವನಿತೆಯರ ಸಿಪಿಎಲ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆ ಶ್ರೇಯಾಂಕಾ ಅವರದ್ದು. 2023ರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದರು.
icon

(4 / 8)

2023ರಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಇದರಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಶ್ರೇಯಾಂಕಾ‌, ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
icon

(5 / 8)

2024ರ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ವನಿತೆಯರ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಕನ್ನಡತಿ ಶ್ರೇಯಾಂಕಾ ಫೈನಲ್ ಪಂದ್ಯದಲ್ಲಿ 4 ವಿಕೆಟ್ ಪಡೆದು ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
icon

(6 / 8)

ಪಂದ್ಯಾವಳಿಯುದ್ದಕ್ಕೂ ಆಡಿದ 8 ಇನ್ನಿಂಗ್ಸ್‌ಗಳಿಂದ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದರು.
icon

(7 / 8)

ಈ ಬಾರಿ ನಡೆದ ವನಿತೆಯರ ಏಷ್ಯಾಕಪ್‌ಗೆ ಆಯ್ಕೆಯಾಗಿದ್ದ ಶ್ರೇಯಾಂಕಾ, ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದರು. ಇದೀಗ ಅವರ ಗುರಿ ಮುಂದಿನ ವಿಶ್ವಕಪ್.‌ ವನಿತೆಯರ ವಿಶ್ವಕಪ್‌ನಲ್ಲಿ ಸ್ಥಾನ ಪಡೆದು, ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಶ್ರೇಯಾಂಕಾ ಇದ್ದಾರೆ.
icon

(8 / 8)

ಇತರ ಗ್ಯಾಲರಿಗಳು