ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದ ಆರ್​ಸಿಬಿ; ಮುಂಬೈ ಇಂಡಿಯನ್ಸ್ ಬಳಿಕ ಈ ಸಾಧನೆ ಮಾಡಿದ 2ನೇ ತಂಡ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದ ಆರ್​ಸಿಬಿ; ಮುಂಬೈ ಇಂಡಿಯನ್ಸ್ ಬಳಿಕ ಈ ಸಾಧನೆ ಮಾಡಿದ 2ನೇ ತಂಡ

ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದ ಆರ್​ಸಿಬಿ; ಮುಂಬೈ ಇಂಡಿಯನ್ಸ್ ಬಳಿಕ ಈ ಸಾಧನೆ ಮಾಡಿದ 2ನೇ ತಂಡ

  • Royal Challengers Bengaluru : ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಮೈಲಿಗಲ್ಲು ತಲುಪಿದೆ. ಮುಂಬೈ ಇಂಡಿಯನ್ಸ್ ನಂತರ ಈ ಸಾಧನೆ ಮಾಡಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಆರ್​​ಸಿಬಿ ಪಾತ್ರವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಏಪ್ರಿಲ್ 25ರ ಗುರುವಾರ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಈ ಐತಿಹಾಸಿಕ ಸಾಧನೆ ಮಾಡಿದೆ. ಎಸ್​ಆರ್​ಹೆಚ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಐಪಿಎಲ್​​ನಲ್ಲಿ 250 ಪಂದ್ಯಗಳನ್ನು ಆರ್​​ಸಿಬಿ ಪೂರ್ಣಗೊಳಿಸಿದೆ.
icon

(1 / 5)

ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಫ್ರಾಂಚೈಸಿ ತಂಡ ಎಂಬ ಹೆಗ್ಗಳಿಕೆಗೆ ಆರ್​ಸಿಬಿ ಪಾತ್ರವಾಗಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಮೊದಲ ತಂಡವಾಗಿದ್ದು, 2008ರಿಂದ ಲೀಗ್ ಆರಂಭವಾದಾಗಿನಿಂದ ಮುಂಬೈ 255 ಪಂದ್ಯಗಳನ್ನಾಡಿದೆ.
icon

(2 / 5)

ಬೆಂಗಳೂರು ಆಡಿರುವ 250 ಪಂದ್ಯಗಳಲ್ಲಿ 118ರಲ್ಲಿ ಗೆಲುವು ಸಾಧಿಸಿದೆ. 128 ಪಂದ್ಯಗಳನ್ನು ಸೋತಿದೆ. ಇದಲ್ಲದೆ, ನಾಲ್ಕು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಆರ್​ಸಿಬಿ ಗೆಲುವಿನ ಶೇಕಡಾವಾರು 47ರಷ್ಟಿದೆ.
icon

(3 / 5)

2009, 2011 ಹಾಗೂ 2016ರಲ್ಲಿ ಬೆಂಗಳೂರು ತಂಡ ಫೈನಲ್ ತಲುಪಿತ್ತು. ಆದಾಗ್ಯೂ, ಇನ್ನೂ ಟ್ರೋಫಿ ಗೆದ್ದಿಲ್ಲ. 2009ರ ಫೈನಲ್​​ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಆರ್​ಸಿಬಿ 6 ರನ್​​ಗಳಿಂದ ಸೋತಿತ್ತು. 2011ರ ಫೈನಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್​​ಗಳಿಂದ ಸೋತಿತ್ತು. 2016ರ ಫೈನಲ್​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್​​​ಗಳ ಸೋಲು ಅನುಭವಿಸಿತ್ತು.
icon

(4 / 5)

ಈ ಮೂರು ಫೈನಲ್​ಗಳು ಅಲ್ಲದೆ, ಆರ್​​ಸಿಬಿ 2010, 2015, 2020, 2021 ಮತ್ತು 2022ರಲ್ಲಿ ಇನ್ನೂ ಐದು ಬಾರಿ ಪ್ಲೇಆಫ್​ ಪ್ರವೇಶಿಸಿದೆ. ಇದೀಗ 250ನೇ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ.
icon

(5 / 5)

ಇತರ ಗ್ಯಾಲರಿಗಳು