ಕನ್ನಡ ಸುದ್ದಿ  /  Photo Gallery  /  Cricket News Rcb Vs Pbks Ipl 2024 Live Streaming How To Watch Royal Challengers Bengaluru Vs Punjab Kings Match Jra

ಆರ್‌ಸಿಬಿ vs ಪಂಜಾಬ್‌ ಐಪಿಎಲ್‌ ಹಣಾಹಣಿ ಯಾವಾಗ; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ಹೇಗೆ?

  • ಐಪಿಎಲ್‌ 2024ರ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಅತ್ತ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಶಿಖರ್‌ ಧವನ್‌ ಪಡೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವಿಗೆ ಎದುರು ನೋಡುತ್ತಿದೆ.

ಮಾರ್ಚ್ 25ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಾಫ್‌ ಡುಪ್ಲೆಸಿಸ್‌ ಪಡೆಯು ಪಂಜಾಬ್‌ ತಂಡವನ್ನು ಎದುರಿಸುತ್ತಿದೆ. ತವರಿನಲ್ಲಿ ಆರ್‌ಸಿಬಿಗೆ ಈ ಬಾರಿ ಇದು ಮೊದಲ ಪಂದ್ಯವಾಗಿದೆ.
icon

(1 / 6)

ಮಾರ್ಚ್ 25ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಾಫ್‌ ಡುಪ್ಲೆಸಿಸ್‌ ಪಡೆಯು ಪಂಜಾಬ್‌ ತಂಡವನ್ನು ಎದುರಿಸುತ್ತಿದೆ. ತವರಿನಲ್ಲಿ ಆರ್‌ಸಿಬಿಗೆ ಈ ಬಾರಿ ಇದು ಮೊದಲ ಪಂದ್ಯವಾಗಿದೆ.

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಮಾರ್ಚ್ 25ರ ಸೋಮವಾರ 7:30ಕ್ಕೆ ಪಂದ್ಯ ನಡೆಯಲಿದೆ.
icon

(2 / 6)

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಮಾರ್ಚ್ 25ರ ಸೋಮವಾರ 7:30ಕ್ಕೆ ಪಂದ್ಯ ನಡೆಯಲಿದೆ.(HT_PRINT)

ಭಾರತದಲ್ಲಿ ಈ ಪಂದ್ಯ ಸೇರಿದಂತೆ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
icon

(3 / 6)

ಭಾರತದಲ್ಲಿ ಈ ಪಂದ್ಯ ಸೇರಿದಂತೆ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.(PTI)

ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯದ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಪಂದ್ಯಾವಳಿಯನ್ನು ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ವೀಕ್ಷಿಸಬಹುದು.
icon

(4 / 6)

ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯದ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಪಂದ್ಯಾವಳಿಯನ್ನು ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ವೀಕ್ಷಿಸಬಹುದು.(AFP)

ಆಸ್ಟ್ರೇಲಿಯಾದಲ್ಲಿ, ಫಾಕ್ಸ್ ಕ್ರಿಕೆಟ್ ಚಾನೆಲ್‌ನಲ್ಲಿ ಐಪಿಎಲ್ 2024ರ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಕಾಯೋ ಸ್ಪೋರ್ಟ್ಸ್ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
icon

(5 / 6)

ಆಸ್ಟ್ರೇಲಿಯಾದಲ್ಲಿ, ಫಾಕ್ಸ್ ಕ್ರಿಕೆಟ್ ಚಾನೆಲ್‌ನಲ್ಲಿ ಐಪಿಎಲ್ 2024ರ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಕಾಯೋ ಸ್ಪೋರ್ಟ್ಸ್ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.(AFP)

ಪಾಕಿಸ್ತಾನದಲ್ಲಿ ಐಪಿಎಲ್‌ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು Tapmad TV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಮಾಡಲಾಗುತ್ತಿದೆ. ಇದೇ ವೇಳೆ Yupp TVಯಲ್ಲಿ ವೀಕ್ಷಿಸಬಹುದು. ಬಾಂಗ್ಲಾದೇಶದಲ್ಲಿ ಗಾಜಿ ಟಿವಿ, ಶ್ರೀಲಂಕಾ ಮತ್ತು ನೇಪಾಳದಲ್ಲಿ Yupp TVಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
icon

(6 / 6)

ಪಾಕಿಸ್ತಾನದಲ್ಲಿ ಐಪಿಎಲ್‌ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು Tapmad TV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಮಾಡಲಾಗುತ್ತಿದೆ. ಇದೇ ವೇಳೆ Yupp TVಯಲ್ಲಿ ವೀಕ್ಷಿಸಬಹುದು. ಬಾಂಗ್ಲಾದೇಶದಲ್ಲಿ ಗಾಜಿ ಟಿವಿ, ಶ್ರೀಲಂಕಾ ಮತ್ತು ನೇಪಾಳದಲ್ಲಿ Yupp TVಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ.(PTI)


ಇತರ ಗ್ಯಾಲರಿಗಳು