ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಇನ್: ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ಸಂಭಾವ್ಯ ತಂಡ, ಇದೇ ತಂಡ ಬಹುತೇಕ ಅಂತಿಮ
- India T20 World Cup Squad : ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ 2024 ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತದ ಸಂಭಾವ್ಯ ತಂಡ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
- India T20 World Cup Squad : ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ 2024 ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತದ ಸಂಭಾವ್ಯ ತಂಡ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
(1 / 10)
2024ರ ಟಿ20 ವಿಶ್ವಕಪ್ ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಬಹು ನಿರೀಕ್ಷಿತ ಮೆಗಾ ಟೂರ್ನಿಗೆ ಮೇ 1 ರಂದು 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಭಾರತೀಯ ಅಭಿಮಾನಿಗಳು ತಂಡದ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐನಿಂದ ಅಧಿಕೃತ ಪದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
(2 / 10)
ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಇತ್ತೀಚೆಗೆ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದು, ಬಹುತೇಕ ತಂಡವನ್ನು ಅಂತಿಮಗೊಳಿಸಿದ್ದಾರೆ. ಏಪ್ರಿಲ್ 27ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಪಂದ್ಯದ ನಂತರ ಈ ಭೇಟಿ ನಡೆದಿತ್ತು.
(3 / 10)
ಈಗಾಗಲೇ ಅನೇಕ ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ ಕೆಲವು ಖಾಲಿ ಸ್ಲಾಟ್‌ಗಳು ಸಹ ಇವೆ. ರಿಷಭ್ ಪಂತ್ ಅವರು ಮರಳಲು ಸಜ್ಜಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಭಾರತಕ್ಕೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಮೇ 1 ರಂದು ಪ್ರಕಟಗೊಳ್ಳುವ ತಂಡ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
(4 / 10)
ಆದರೆ, ಒಂದೊಂದು ಸ್ಥಾನಕ್ಕೂ ಅನೇಕರು ಪೈಪೋಟಿ ನಡೆಸುತ್ತಿದ್ದಾರೆ. ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
(5 / 10)
ಆರಂಭಿಕರು: ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ ಇನ್ನಿಂಗ್ಸ್ ಕೂಡ ಆರಂಭಿಸಲಿದ್ದಾರೆ. ಆದರೆ ಮತ್ತೊಂದು ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ನಡುವೆ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಋತುರಾಜ್ ಗಾಯಕ್ವಾಡ್ ಕೂಡ ಸ್ಥಾನಕ್ಕಾಗಿ ಕಣದಲ್ಲಿದ್ದಾರೆ.
(6 / 10)
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 3 ಮತ್ತು 4ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ವಿರಾಟ್ ಸ್ಥಾನದ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅವರು ಐಪಿಎಲ್‌ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 500 ರನ್ ಗಳಿಸಿ ಆರೆಂಜ್ ಹೋಲ್ಡರ್ ಆಗಿದ್ದಾರೆ. ರಿಂಕು ಸಿಂಗ್ ತಂಡದಲ್ಲಿ ಆಯ್ಕೆಯಾಗಿರುವುದು ಖಚಿತವಾಗಿದೆ.
(7 / 10)
ವಿಕೆಟ್ ಕೀಪರ್ಗಳು: ರಿಷಭ್ ಪಂತ್ ಐಪಿಎಲ್ 2024 ರಲ್ಲಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದು, ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸಂಜು ಸ್ಯಾಮ್ಸನ್ ತಂಡದಲ್ಲಿ 2ನೇ ವಿಕೆಟ್ ಕೀಪರ್ ಆಗುವ ಸಾಧ್ಯತೆ ಇದೆ. ಆದರೆ ರೇಸ್ನಲ್ಲಿರುವ ಕೆಎಲ್ ರಾಹುಲ್ ಆಯ್ಕೆ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
(8 / 10)
ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಂಡದ ಭಾಗವಾಗಿರುವುದು ಖಚಿತವಾಗಿದೆ. ಶಿವಂ ದುಬೆ ಸ್ಥಾನ ಪಡೆಯುವ ಮತ್ತೊಬ್ಬ ಆಲ್ರೌಂಡರ್. ಐಪಿಎಲ್ 2024 ರಲ್ಲಿ ದುಬೆ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಫಿನಿಶಿಂಗ್ ಕೌಶಲ್ಯಗಳಿಂದ ಅವರು ವಿಶ್ವಕಪ್ ಟಿಕೆಟ್ ಪಡೆಯಬಹುದು.
(9 / 10)
ಬೌಲರ್ಗಳು: ಜಸ್ಪ್ರೀತ್ ಬುಮ್ರಾ ಭಾರತದ ವೇಗಿ ದಾಳಿಯನ್ನು ಮುನ್ನಡೆಸಲಿದ್ದಾರೆ. ಭಾರತಕ್ಕೆ ಕಂಬ್ಯಾಕ್ ಮಾಡಿದ ನಂತರ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ತಂಡದಲ್ಲಿ ಇನ್ನಿಬ್ಬರು ವೇಗಿಗಳಾಗುವ ನಿರೀಕ್ಷೆಯಿದೆ. ಕುಲ್ದೀಪ್ ಯಾದವ್ ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿರಬಹುದು.
ಇತರ ಗ್ಯಾಲರಿಗಳು