ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್

ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್

  • Rishabh Pant Record: ಟಿ20 ವಿಶ್ವಕಪ್​​ 2024ರಲ್ಲಿ ಪಾಕಿಸ್ತಾನ ವಿರುದ್ಧ 42 ರನ್​ಗಳ ಅಮೋಘ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್​, ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.

ಟಿ20 ವಿಶ್ವಕಪ್​​ 2024ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 6 ರನ್​ಗಳ ಗೆಲುವು ಸಾಧಿಸಿತು. ಪಂದ್ಯ ಗೆಲ್ಲಲು ಬೌಲರ್​​ಗಳು ಎಷ್ಟು ಪ್ರಮುಖ ಪಾತ್ರವಹಿಸಿದ್ದರೋ ರಿಷಭ್ ಪಂತ್ ಕೂಡ ಅಷ್ಟೇ ಮೇಜರ್​ ರೋಲ್ ಪ್ಲೇ ಮಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರೂ ಪಂತ್ ಏಕಾಂಗಿಯಾಗಿ ಹೋರಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
icon

(1 / 5)

31 ಎಸೆತಗಳಲ್ಲಿ 6 ಬೌಂಡರಿಗಳ ಸೌಜನ್ಯದಿಂದ 42 ರನ್​​​ಗಳ ಅಮೋಘ ಇನ್ನಿಂಗ್ಸ್ ಆಡಿದ ಪಂತ್, ತಂಡವನ್ನು 100ರ ರನ್ ಗಡಿ ದಾಟಲು ನೆರವಾದರು. ಅಕ್ಷರ್ ಪಟೇಲ್ 20 ರನ್ ಗಳಿಸಿ 2ನೇ ಗರಿಷ್ಠ ಸ್ಕೋರರ್​ ಆದರು. ರೋಹಿತ್ 13 ರನ್ ಸಿಡಿಸಿ ಔಟಾದರು. ಈ ಮೂವರನ್ನು ಹೊರತುಪಡಿಸಿ, ಉಳಿದವರು ಎರಡಂಕಿ ತಲುಪಲು ಸಹ ಸಾಧ್ಯವಾಗಲಿಲ್ಲ.
icon

(2 / 5)

ಪಂತ್ ಅವರ ಅದ್ಭುತ ಆಟದ ನೆರವಿನಿಂದ ಭಾರತ 119 ರನ್ ಗಳಿಸಿತ್ತು. ಇದು ಟೀಂ ಇಂಡಿಯಾ 6 ರನ್​​ಗಳಿಂದ ಗೆಲ್ಲಲು ಸಾಧ್ಯವಾಯಿತು. ಇದೇ ವೇಳೆ ಪಂತ್ ಒಂದು ವಿಶಿಷ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ರೋಹಿತ್​ ಶರ್ಮಾ ಅವರ ದಾಖಲೆ ಸರಿಗಟ್ಟಿದ್ದಾರೆ.
icon

(3 / 5)

ಟಿ20 ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧ ಜಂಟಿಯಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್​​ ಪಂದ್ಯಗಳಲ್ಲಿ ಪಂತ್ ಗಳಿಸಿದ ಮೊತ್ತ 81 ರನ್ ಆಗಿದೆ. ರೋಹಿತ್ ಕೂಡ ಇಷ್ಟೇ ರನ್ ಸಿಡಿಸಿರುವುದು ವಿಶೇಷ.
icon

(4 / 5)

ಆದರೆ ಟಿ20 ವಿಶ್ವಕಪ್​ನಲ್ಲಿ ರೋಹಿತ್, ಪಂತ್​​​ಗಿಂತ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹಿಟ್​ಮ್ಯಾನ್ 7 ಪಂದ್ಯಗಳ 6 ಇನ್ನಿಂಗ್ಸ್​​​ಗಳಲ್ಲಿ 81 ರನ್ ಸಿಡಿಸಿದ್ದಾರೆ. ಪಂತ್ 2 ಇನ್ನಿಂಗ್ಸ್​​​ಗಳಲ್ಲಿ 81 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, 6 ಇನ್ನಿಂಗ್ಸ್​​ಗಳಲ್ಲಿ 312 ರನ್ ಗಳಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು