ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ಸೂರ್ಯಕುಮಾರ್, ಇಶಾನ್ ಕಿಶನ್ ದಾಖಲೆ ಮುರಿದ ರಿಯಾನ್ ಪರಾಗ್
- Riyan Parag Record: ಪಂಜಾಬ್ ಕಿಂಗ್ಸ್ ವಿರುದ್ಧ 48 ರನ್ ಗಳಿಸುವ ಮೂಲಕ ಐಪಿಎಲ್ 2024 ರಲ್ಲಿ 500 ರನ್ ಗಡಿ ದಾಟಿದ ಮೊದಲ ಅನ್ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ಪಾತ್ರರಾಗಿದ್ದಾರೆ. ಆ ಮೂಲಕ ಸೂರ್ಯಕುಮಾರ್ ದಾಖಲೆ ಮುರಿದಿದ್ದಾರೆ.

(1 / 5)
ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳಿಂದ ಸೋತರೂ ರಿಯಾನ್ ಪರಾಗ್ ಅವರು ಐಪಿಎಲ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ರಿಯಾನ್ ಎರಡು ರನ್ಗಳ ಅಂತರದಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ರಿಯಾನ್ 34 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 48 ರನ್ ಗಳಿಸಿ ಔಟಾದರು.
(2 / 5)
ಈ 48 ರನ್ಗಳೊಂದಿಗೆ ರಿಯಾನ್ ಐಪಿಎಲ್ 2024ರಲ್ಲಿ 500 ರನ್ಗಳ ಗಡಿ ದಾಟಿದ್ದಾರೆ. 13 ಪಂದ್ಯಗಳಲ್ಲಿ 531 ರನ್ ಗಳಿಸಿದ್ದು ನಾಲ್ಕು ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ದಾಖಲೆಯನ್ನು ಮುರಿದಿದ್ದಾರೆ.
(3 / 5)
ಐಪಿಎಲ್ 2024 ರಲ್ಲಿ 500 ರನ್ ಗಳಿಸಿದ ಮೊದಲ ಅನ್ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಈ ಸಾಧನೆ ಮಾಡಿದ್ದರು. ಅನ್ಕ್ಯಾಪ್ಡ್ ಆಟಗಾರನಾಗಿ, ಸೂರ್ಯ 2018ರಲ್ಲಿ 500 ರನ್, 2020 ರಲ್ಲಿ ಇಶಾನ್ ಮತ್ತು 2023 ರಲ್ಲಿ ಯಶಸ್ವಿ ರನ್ ಗಡಿ ದಾಟಿದ್ದರು.
(4 / 5)
ಅನ್ಕ್ಯಾಪ್ಡ್ ಆಟಗಾರನಾಗಿ ಅತ್ಯಧಿಕ ರನ್ ಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಯಶಸ್ವಿ ಜೈಸ್ವಾಲ್ 625 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಪರಾಗ್ 531 ರನ್ ಸಿಡಿಸಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಇಶಾನ್ (516) ಮತ್ತು ಸೂರ್ಯ (512) ದಾಖಲೆ ಉಡೀಸ್ ಮಾಡಿದ್ದಾರೆ.
ಇತರ ಗ್ಯಾಲರಿಗಳು