ದಾಖಲೆಯ ಅರ್ಧಶತಕ; ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ
- Rohit Sharma: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ, ಹಲವು ದಾಖಲೆ ನಿರ್ಮಿಸಿದರು. ಕ್ರಿಕೆಟ್ ದಿಗ್ಗಕ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ, ರಾಹುಲ್ ದ್ರಾವಿಡ್ ದಾಖಲೆಯನ್ನು ಕೂಡಾ ಹಿಟ್‌ಮ್ಯಾನ್ ಮುರಿದಿದ್ದಾರೆ.
- Rohit Sharma: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ, ಹಲವು ದಾಖಲೆ ನಿರ್ಮಿಸಿದರು. ಕ್ರಿಕೆಟ್ ದಿಗ್ಗಕ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ, ರಾಹುಲ್ ದ್ರಾವಿಡ್ ದಾಖಲೆಯನ್ನು ಕೂಡಾ ಹಿಟ್‌ಮ್ಯಾನ್ ಮುರಿದಿದ್ದಾರೆ.
(1 / 7)
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಬಾರಿಸಿದರು. 44 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 64 ರನ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆ ನಿರ್ಮಿಸಿದ್ದಾರೆ.(AFP)
(2 / 7)
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿಯೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ (50+) ಗಳಿಸಿದ ಭಾರತೀಯ ಆರಂಭಿಕ ಬ್ಯಾಟರ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ. ಹಿಟ್‌ಮ್ಯಾನ್ ಭಾರತದ ಪರ ಆರಂಭಿಕನಾಗಿ ಇಲ್ಲಿಯವರೆಗೆ ಬರೋಬ್ಬರಿ 121 ಸಂದರ್ಭಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.(PTI)
(3 / 7)
ಸಚಿನ್ ತೆಂಡೂಲ್ಕರ್ ಭಾರತ ಪರ ಆರಂಭಿಕರಾಗಿ 120 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಹಿಟ್‌ಮ್ಯಾನ್ ಆ ದಾಖಲೆಯನ್ನು ಮೀರಿಸಿದ್ದಾರೆ. 342 ಇನ್ನಿಂಗ್ಸ್‌ಗಳಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿರುವ ಸಚಿನ್, 120 ಬಾರಿ 50 ಪ್ಲಸ್ ಸ್ಕೋರ್ ಕಲೆ ಹಾಕಿದ್ದಾರೆ. ರೋಹಿತ್ ಶರ್ಮಾ 121 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರೋಹಿತ್ 43 ಶತಕಗಳು ಮತ್ತು 78 ಅರ್ಧಶತಕಗಳನ್ನು ಸಿಡಿಸಿದ್ದಾರೆ.(AP)
(4 / 7)
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಆರಂಭಿಕರಾಗಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 146 ಬಾರಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ 144 ಬಾರಿ, ಸನತ್ ಜಯಸೂರ್ಯ 136, ಡೆಸ್ಮಂಡ್ ಹೇನ್ಸ್ 131 ಮತ್ತು ಗ್ರೇಮ್ ಸ್ಮಿತ್ 125 ನಂತರದ ಸ್ಥಾನಗಳಲ್ಲಿದ್ದಾರೆ. ರೋಹಿತ್ ಶರ್ಮಾ ಒಟ್ಟಾರೆ ಆರನೇ ಸ್ಥಾನಕ್ಕೇರಿದ್ದಾರೆ.(AFP)
(5 / 7)
ರೋಹಿತ್ ಶರ್ಮಾ ಈವರೆಗೆ ಆಡಿದ 264 ಏಕದಿನ ಪಂದ್ಯಗಳಲ್ಲಿ, 49.23ರ ಸರಾಸರಿಯಲ್ಲಿ 10,831 ರನ್ ಗಳಿಸಿದ್ದಾರೆ. 92.29ರ ಸ್ಟ್ರೈಕ್ ರೇಟ್ನೊಂದಿಗೆ, 31 ಶತಕಗಳು ಮತ್ತು 57 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 264 ರನ್. ಇದರೊಂದಿಗೆ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(AFP)
(6 / 7)
ಏಕದಿನ ಪಂದ್ಯದ ಮೊದಲ 10 ಓವರ್‌ಗಳಲ್ಲಿ ರೋಹಿತ್ ಅವರ ನಾಲ್ಕನೇ ಅರ್ಧಶತಕವಾಗಿದೆ. ಏಕದಿನ ಪಂದ್ಯಗಳ ಮೊದಲ 10 ಓವರ್‌ಗಳಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ. ರೋಹಿತ್ ಈಗ ಅವರ ಬಳಿ ಸಾಗುತ್ತಿದ್ದಾರೆ.(AP)
ಇತರ ಗ್ಯಾಲರಿಗಳು