ಕನ್ನಡ ಸುದ್ದಿ  /  Photo Gallery  /  Cricket News Rohit Sharma Unique Record As India Win All 12 Tests After Rohit Sharma Score Century Ind Vs Eng Jra

12 ಸೆಂಚುರಿ, 12 ಗೆಲುವು; ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದೆ ಭಾರತ!

  • Rohit Sharma: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿದ ಎಲ್ಲಾ ಟೆಸ್ಟ್‌ ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ. ಈವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್‌ 12 ಶತಕಗಳನ್ನು ಗಳಿಸಿದ್ದು, ಆ ಎಲ್ಲಾ 12 ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ. ಇಂಥಾ ದಾಖಲೆ ಇರುವ ವಿಶ್ವದ ಏಕೈಕ ಆಟಗಾರ ರೋಹಿತ್ ಶರ್ಮಾ.

ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದರೆ, ಆ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದೇ ಅರ್ಥ. ಇದು ಅಚ್ಚರಿಯೆನಿಸಿದರೂ ಸತ್ಯ. ರೋಹಿತ್ ಶರ್ಮಾ ಈವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 12 ಶತಕಗಳನ್ನು ಗಳಿಸಿದ್ದಾರೆ. ಭಾರತ ತಂಡವು ಈ ಎಲ್ಲಾ 12 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
icon

(1 / 5)

ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದರೆ, ಆ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದೇ ಅರ್ಥ. ಇದು ಅಚ್ಚರಿಯೆನಿಸಿದರೂ ಸತ್ಯ. ರೋಹಿತ್ ಶರ್ಮಾ ಈವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 12 ಶತಕಗಳನ್ನು ಗಳಿಸಿದ್ದಾರೆ. ಭಾರತ ತಂಡವು ಈ ಎಲ್ಲಾ 12 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.(Reuters)

ಗೆದ್ದ ಎಲ್ಲಾ 12 ಟೆಸ್ಟ್ ಪಂದ್ಯಗಳಲ್ಲಿಯೂ ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್.‌ ಅಥವಾ ಶತಕ ಸಿಡಿಸಿದ ಎಲ್ಲಾ 12 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಏಕೈಕ ಆಟಗಾರ ಹಿಟ್‌ಮ್ಯಾನ್.‌ ಇಷ್ಟು ಸಂಖ್ಯೆಯಲ್ಲಿ ಶತಕಗಳನ್ನು ಬಾರಿಸಿ ದೇಶವನ್ನು ಗೆಲ್ಲಿಸಿದ ಆಟಗಾರ ಬೇರೊಬ್ಬರಿಲ್ಲ.
icon

(2 / 5)

ಗೆದ್ದ ಎಲ್ಲಾ 12 ಟೆಸ್ಟ್ ಪಂದ್ಯಗಳಲ್ಲಿಯೂ ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್.‌ ಅಥವಾ ಶತಕ ಸಿಡಿಸಿದ ಎಲ್ಲಾ 12 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಏಕೈಕ ಆಟಗಾರ ಹಿಟ್‌ಮ್ಯಾನ್.‌ ಇಷ್ಟು ಸಂಖ್ಯೆಯಲ್ಲಿ ಶತಕಗಳನ್ನು ಬಾರಿಸಿ ದೇಶವನ್ನು ಗೆಲ್ಲಿಸಿದ ಆಟಗಾರ ಬೇರೊಬ್ಬರಿಲ್ಲ.(AFP)

ರೋಹಿತ್‌ ಹೊರತುಪಡಿಸಿದರೆ, ಆಸ್ಟ್ರೇಲಿಯಾದ ಮೈಕಲ್ ಹಸ್ಸಿ ಸಿಡಿಸಿದ ಮೊದಲ ಎಂಟು ಟೆಸ್ಟ್ ಶತಕಗಳ ಪಂದ್ಯದಲ್ಲಿ ಆಸೀಸ್‌ ಗೆದ್ದಿದೆ. ಲಿಂಡ್ಸೆ ಹ್ಯಾಸೆಟ್ ಗಳಿಸಿದ ಮೊದಲ ಏಳು ಟೆಸ್ಟ್ ಶತಕಗಳ ಪಂದ್ಯದಲ್ಲಿ ಅವರ ತಂಡ ಗೆದ್ದುಕೊಂಡಿದೆ. ಉಳಿದಂತೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮೊದಲ ಏಳು ಶತಕಗಳನ್ನು ಸಿಡಿಸಿದ ಪಂದ್ಯಗಳಲ್ಲಿ ದೇಶ ಗೆದ್ದಿದೆ. ಆದರೆ ರೋಹಿತ್ ಅವರಂತೆ ಹತ್ತಕ್ಕೂ ಹೆಚ್ಚು ಶತಕಗಳನ್ನು ಸಿಡಿಸಿ ತಂಡವನ್ನು ಯಾರೂ ಗೆಲ್ಲಿಸಿಲ್ಲ.
icon

(3 / 5)

ರೋಹಿತ್‌ ಹೊರತುಪಡಿಸಿದರೆ, ಆಸ್ಟ್ರೇಲಿಯಾದ ಮೈಕಲ್ ಹಸ್ಸಿ ಸಿಡಿಸಿದ ಮೊದಲ ಎಂಟು ಟೆಸ್ಟ್ ಶತಕಗಳ ಪಂದ್ಯದಲ್ಲಿ ಆಸೀಸ್‌ ಗೆದ್ದಿದೆ. ಲಿಂಡ್ಸೆ ಹ್ಯಾಸೆಟ್ ಗಳಿಸಿದ ಮೊದಲ ಏಳು ಟೆಸ್ಟ್ ಶತಕಗಳ ಪಂದ್ಯದಲ್ಲಿ ಅವರ ತಂಡ ಗೆದ್ದುಕೊಂಡಿದೆ. ಉಳಿದಂತೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮೊದಲ ಏಳು ಶತಕಗಳನ್ನು ಸಿಡಿಸಿದ ಪಂದ್ಯಗಳಲ್ಲಿ ದೇಶ ಗೆದ್ದಿದೆ. ಆದರೆ ರೋಹಿತ್ ಅವರಂತೆ ಹತ್ತಕ್ಕೂ ಹೆಚ್ಚು ಶತಕಗಳನ್ನು ಸಿಡಿಸಿ ತಂಡವನ್ನು ಯಾರೂ ಗೆಲ್ಲಿಸಿಲ್ಲ.(AFP)

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಎರಡು ಶತಕಗಳನ್ನು ಬಾರಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅವರು ಶತಕ ಗಳಿಸಿದ್ದರು. ಆ ಟೆಸ್ಟ್‌ನಲ್ಲಿ ರೋಹಿತ್ 131 ರನ್ ಗಳಿಸಿದ್ದರು. ಧರ್ಮಶಾಲಾದಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿಯೂ ಹಿಟ್‌ಮ್ಯಾನ್ ಮತ್ತೆ 103 ರನ್ ಗಳಿಸಿದರು. ಈ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ.
icon

(4 / 5)

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಎರಡು ಶತಕಗಳನ್ನು ಬಾರಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅವರು ಶತಕ ಗಳಿಸಿದ್ದರು. ಆ ಟೆಸ್ಟ್‌ನಲ್ಲಿ ರೋಹಿತ್ 131 ರನ್ ಗಳಿಸಿದ್ದರು. ಧರ್ಮಶಾಲಾದಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿಯೂ ಹಿಟ್‌ಮ್ಯಾನ್ ಮತ್ತೆ 103 ರನ್ ಗಳಿಸಿದರು. ಈ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ.(PTI)

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 43 ಶತಕಗಳನ್ನು ಬಾರಿಸಿದ್ದಾರೆ.
icon

(5 / 5)

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 43 ಶತಕಗಳನ್ನು ಬಾರಿಸಿದ್ದಾರೆ.(AP)


IPL_Entry_Point

ಇತರ ಗ್ಯಾಲರಿಗಳು