ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿವೃತ್ತಿಯಾಗಿ 10 ವರ್ಷವಾದರೂ ಕುಗ್ಗುತ್ತಿಲ್ಲ ಸಚಿನ್ ತೆಂಡೂಲ್ಕರ್ ಬ್ರಾಂಡ್; ನಿಮಿಷ, ದಿನ, ತಿಂಗಳು, ವರ್ಷಕ್ಕೆಷ್ಟು ಸಂಪಾದನೆ?

ನಿವೃತ್ತಿಯಾಗಿ 10 ವರ್ಷವಾದರೂ ಕುಗ್ಗುತ್ತಿಲ್ಲ ಸಚಿನ್ ತೆಂಡೂಲ್ಕರ್ ಬ್ರಾಂಡ್; ನಿಮಿಷ, ದಿನ, ತಿಂಗಳು, ವರ್ಷಕ್ಕೆಷ್ಟು ಸಂಪಾದನೆ?

Sachin Tendulakar Birthday : ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು (ಏಪ್ರಿಲ್ 24) ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಮೈದಾನವನ್ನು ತೊರೆದು 10 ವರ್ಷಗಳಾದರೂ ಸಚಿನ್ ಕ್ರೇಜ್, ಬ್ರಾಂಡ್ ಮೌಲ್ಯ ಕೊಂಚವೂ ಕುಸಿದಿಲ್ಲ. ನಿವೃತ್ತಿಯ ನಂತರ ಅವರ ಆದಾಯ ಮತ್ತು ಒಟ್ಟು ಸಂಪತ್ತನ್ನು ತಿಳಿದುಕೊಳ್ಳೋಣ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಸಂಪತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚಾಗಿದೆ. ಸಚಿನ್ ಒಟ್ಟು ಸಂಪತ್ತು 1,400 ಕೋಟಿ ರೂ.ಗೂ ಅಧಿಕ. ಜಾಹೀರಾತು, ಸಾಮಾಜಿಕ ಮಾಧ್ಯಮ, ಆಹಾರ ಉದ್ಯಮ ಸೇರಿ ಹಲವು ಮೂಲಗಳಿಂದ ಆದಾಯ ಹರಿದು ಬರುತ್ತಿದೆ. ಅನೇಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಅದರಿಂದಲೂ ಕೋಟಿಗಟ್ಟಲೆ ದುಡಿಯುತ್ತಿದ್ದಾರೆ.
icon

(1 / 7)

ಹಲವು ವೆಬ್​ಸೈಟ್​ಗಳ ಪ್ರಕಾರ, ಸಚಿನ್ ಅವರ ಮಾಸಿಕ ಆದಾಯ 4 ಕೋಟಿ ರೂಪಾಯಿಗಿಂತಲೂ ಅಧಿಕ. ಅವರ ವಾರ್ಷಿಕ ಆದಾಯ 55 ಕೋಟಿ ರೂ.ಗಿಂತ ಹೆಚ್ಚಾಗಿದೆ. ಅಪೊಲೊ ಟೈರ್ಸ್, ಐಟಿಸಿ ಸಾವ್ಲಾನ್, ಜಿಯೋ ಸಿನೆಮಾ, ಸ್ಪಿನಿ ಮತ್ತು ಎಡ್ಜ್ ಫೆಡರಲ್ ಲೈಫ್ ಇನ್ಶೂರೆನ್ಸ್​ನಂತಹ ಪ್ರಸಿದ್ಧ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
icon

(2 / 7)

ಸಚಿನ್ ಅವರ ಬ್ರಾಂಡ್ ಮೌಲ್ಯವು 2019ರಲ್ಲಿ ಶೇಕಡಾ 15.8ರಷ್ಟು ಏರಿತ್ತು. ಡಫ್ & ಫೆಲ್ಫ್ಸ್​ನ 2019ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ನಿವೃತ್ತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಚಿನ್ ಒಟ್ಟು ಸಂಪತ್ತು 2020ರಲ್ಲಿ 834 ಕೋಟಿ ರೂ.ಗಳಿಂದ 2021ರಲ್ಲಿ 1,080 ಕೋಟಿ ರೂ.ಗೆ ಏರಿತ್ತು.
icon

(3 / 7)

ಬಿಎಂಡಬ್ಲ್ಯು ಸೇರಿ ದೊಡ್ಡ ಕಂಪನಿಗಳ ಜಾಹೀರಾತುಗಳಿಂದ ಸಚಿನ್ ತೆಂಡೂಲ್ಕರ್ 20-22 ಕೋಟಿ ರೂ.ಗಳನ್ನು ಗಳಿಸುತ್ತಾರೆ. 2016ರಲ್ಲಿ ಜವಳಿ ಉದ್ಯಮ ಪ್ರವೇಶಿಸಿದ ಮಾಸ್ಟರ್ ಬ್ಲಾಸ್ಟರ್, ಟ್ರೂ ಬ್ಲೂ ಬ್ರಾಂಡ್ ಮೂಲಕ ಬಟ್ಟೆ ವ್ಯವಹಾರ ನಡೆಸುದ್ದಾರೆ. ಲಿಟಲ್ ಮಾಸ್ಟರ್ 2019ರಲ್ಲಿ ಟ್ರೂ ಬ್ಲೂ ಅನ್ನು ಯುಎಸ್ ಮತ್ತು ಯುಕೆಗೆ ವಿಸ್ತರಿಸಿದ್ದರು.
icon

(4 / 7)

ಸಚಿನ್ ಆಹಾರ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಅವರು ರೆಸ್ಟೋರೆಂಟ್​ಗಳನ್ನು ಹೊಂದಿದ್ದಾರೆ. ಅಲ್ಲದೆ, ಮನರಂಜನೆ ಮತ್ತು ತಂತ್ರಜ್ಞಾನ ಕಂಪನಿಗಳಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಸಚಿನ್ ಮುಂಬೈನ ಬಾಂದ್ರಾದಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. 2000ರಲ್ಲಿ 39 ಕೋಟಿ ರೂ.ಗೆ ಬಂಗಲೆ ಖರೀದಿಸಿದ್ದರು.
icon

(5 / 7)

ಸಚಿನ್ ಇಂಗ್ಲೆಂಡ್​ನ ಲಂಡನ್​​ನಲ್ಲೂ ಮನೆ ಹೊಂದಿದ್ದಾರೆ. ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿರುವ ಸಚಿನ್ ಬಳಿ 20 ಕೋಟಿಗೂ ಅಧಿಕ ಮೌಲ್ಯದ 10 ಕಾರುಗಳ ಸಂಗ್ರಹವಿದೆ. ತಿಂಗಳಿಗೆ 4 ಕೋಟಿ ರೂ.ಗಳಂತೆ ದಿನಕ್ಕೆ 13.33 ಲಕ್ಷ ರೂ. ಗಳಿಸುತ್ತಾರೆ ಮತ್ತು ನಿಮಿಷಕ್ಕೆ 55,000-56,000 ರೂ. ಗಳಿಸುತ್ತಾರೆ.
icon

(6 / 7)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು