ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಪಾರ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗರು; ರೋಹಿತ್, ಸಚಿನ್, ಧೋನಿ ದಂಪತಿಯ ಅದ್ಧೂರಿ ಲುಕ್
- ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಿತು. ಅದ್ಧೂರಿ ಪಾರ್ಟಿಯಲ್ಲಿ ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗರು ಸೇರಿದಂತೆ ವಿದೇಶಿ ತಂಡಗಳ ಕ್ರಿಕೆಟಿಗರು ಕೂಡಾ ಭಾಗವಹಿಸಿದ್ದರು. ಎಂಎಸ್ ಧೋನಿ, ಸಚಿನ್, ಜಹೀರ್ ಖಾನ್, ರೋಹಿತ್ ಶರ್ಮಾ ದಂಪತಿ ಸೇರಿ ಹಲವರು ಗಮನ ಸೆಳೆದರು.
- ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಿತು. ಅದ್ಧೂರಿ ಪಾರ್ಟಿಯಲ್ಲಿ ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗರು ಸೇರಿದಂತೆ ವಿದೇಶಿ ತಂಡಗಳ ಕ್ರಿಕೆಟಿಗರು ಕೂಡಾ ಭಾಗವಹಿಸಿದ್ದರು. ಎಂಎಸ್ ಧೋನಿ, ಸಚಿನ್, ಜಹೀರ್ ಖಾನ್, ರೋಹಿತ್ ಶರ್ಮಾ ದಂಪತಿ ಸೇರಿ ಹಲವರು ಗಮನ ಸೆಳೆದರು.
(1 / 12)
ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ದೇಶ ಮತ್ತು ವಿದೇಶಗಳ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್‌ನ ಸೂಪರ್ ಸ್ಟಾರ್‌ಗಳು ಕೂಡಾ ಸೇರಿದ್ದಾರೆ.
(ANI)(2 / 12)
ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದರಲ್ಲೂ ಧೋನಿ ಮತ್ತು ರೋಹಿತ್ ಶರ್ಮಾ ದಂಪತಿ ಹೆಚ್ಚು ಗಮನ ಸೆಳೆದರು.
(ANI)(4 / 12)
ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜಹೀರ್ ಖಾನ್ ಕಪ್ಪು ಸೂಟ್ ಧರಿಸಿದ್ದರೆ, ಅವರ ಪತ್ನಿ ಸಾಗರಿಕಾ ಘಾಟ್ಗೆ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು.
(ANI)(5 / 12)
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ತಮ್ಮ ಪತ್ನಿ ರಿತಿಕಾ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ANI)(6 / 12)
ದಿಗ್ಗಜ ಕ್ರಿಕೆಟ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕಪ್ಪು ಥೀಮ್ ಉಡುಪಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
(ANI)(7 / 12)
ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಕೂಡ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು. ಬ್ರಾವೋ ಭಾರತೀಯ ಶೈಲಿಯ ಉಡುಪು ಧರಿಸಿದ್ದರು.
(ANI)(8 / 12)
ಬ್ಯಾಡ್ಮಿಂಟನ್ ಸ್ಟಾರ್ ಜೋಡಿಗಳಾದ ಸೈನಾ ನೆಹ್ವಾಲ್ ಹಾಗೂ ಪಿ ಕಶ್ಯಪ್, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಉಪಸ್ಥಿತರಿದ್ದರು.
(ANI)(10 / 12)
ನ್ಯೂಜಿಲ್ಯಾಂಡ್ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಪತ್ನಿಯೊಂದಿಗೆ ಜಾಮ್‌ನಗದಲ್ಲಿ ಹಾಜರಿದ್ದರು. ಬೋಲ್ಟ್ ಹಾಗೂ ಅವರ ಪತ್ನಿ ಅದ್ಧೂರಿ ಉಡುಪಿನಲ್ಲಿ ಭಾಗವಹಿಸಿದ್ದರು.
(ANI)ಇತರ ಗ್ಯಾಲರಿಗಳು