ಆರ್ಸಿಬಿ ಸೋಲಿಸಿದ ತಂಡವೇ ರಿಟೈನ್; ಎಸ್ಆರ್ಹೆಚ್ ವಿರುದ್ಧದ ಕ್ವಾಲಿಫೈಯರ್-2 ಕದನಕ್ಕೆ ಆರ್ಆರ್ ಆಡುವ 11ರ ಬಳಗ
- RR Playing XI vs SRH : ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಲು ಸಜ್ಜಾಗಿದ್ದು, ಎಸ್ಆರ್ಹೆಚ್ ವಿರುದ್ಧದ ಕ್ವಾಲಿಫೈಯರ್-2 ಕದನಕ್ಕೆ ಖಡಕ್ ಪ್ಲೇಯಿಂಗ್ XI ಕಣಕ್ಕಿಳಿಸಲು ಸಿದ್ಧಗೊಂಡಿದೆ.
- RR Playing XI vs SRH : ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಲು ಸಜ್ಜಾಗಿದ್ದು, ಎಸ್ಆರ್ಹೆಚ್ ವಿರುದ್ಧದ ಕ್ವಾಲಿಫೈಯರ್-2 ಕದನಕ್ಕೆ ಖಡಕ್ ಪ್ಲೇಯಿಂಗ್ XI ಕಣಕ್ಕಿಳಿಸಲು ಸಿದ್ಧಗೊಂಡಿದೆ.
(1 / 5)
ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ರಾಜಸ್ಥಾನ್ ರಾಯಲ್ಸ್ ಹಾಗೂ ಕ್ವಾಲಿಫೈಯರ್ -1ರಲ್ಲಿ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡಗಳು 2ನೇ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಲು ಸಜ್ಜಾಗಿವೆ. ಇಲ್ಲಿ ಗೆದ್ದ ತಂಡವು ಫೈನಲ್ ಟಿಕೆಟ್ ಖಚಿತಪಡಿಸಲುಕೊಳ್ಳಲಿದೆ.
(Rajasthan Royals-X)(2 / 5)
ಮೇ 24ರ ಶುಕ್ರವಾರ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಫೈನಲ್ ಪ್ರವೇಶಿಸಿದ್ದು, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಕಾದಾಡಲು ಎದುರು ನೋಡುತ್ತಿದೆ. ಫೈನಲ್ ಕೂಡ ಇದೇ ಮೈದಾನದಲ್ಲೇ ಜರುಗಲಿದೆ.
(AFP)(3 / 5)
ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಎಸ್ಆರ್ಹೆಚ್ 10 ಗೆಲುವು, ಆರ್ಆರ್ 9 ಗೆಲುವು ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದು, ಸಂಜು ಪಡೆ 1 ರನ್ ಅಂತರದಿಂದ ಸೋಲು ಕಂಡಿತ್ತು. ಈಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
(ANI)(4 / 5)
ಆರ್ಸಿಬಿ ವಿರುದ್ಧದ ಕದನಕ್ಕೂ ಮುನ್ನ ಐದು ಪಂದ್ಯಗಳಲ್ಲಿ (ಒಂದು ಪಂದ್ಯ ಮಳೆಯಿಂದ ರದ್ದು) ಸೋಲು ಕಂಡಿದ್ದ ಆರ್ಆರ್ ಈಗ ಲಯಕ್ಕೆ ಮರಳಿದೆ. ಹಾಗಾಗಿ ಮಹತ್ವದ ಪಂದ್ಯಕ್ಕೂ ಅದೇ ಪ್ಲೇಯಿಂಗ್ XI ಕಣಕ್ಕಿಳಿಸಲು ಚಿಂತಿಸಿದೆ. ಆದರೆ ಜೋಸ್ ಬಟ್ಲರ್ ಅಲಭ್ಯತೆ ತಂಡಕ್ಕೆ ಕಾಡುತ್ತಿದೆ. ಶಿಮ್ರಾನ್ ಹೆಟ್ಮೆಯರ್ ಫಾರ್ಮ್ ಮರಳಿದ್ದಾರೆ.
(ANI)ಇತರ ಗ್ಯಾಲರಿಗಳು