ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಪ್ಲೇಆಫ್​ಗೂ ಮುನ್ನ ನೈಟ್​ ರೈಡರ್ಸ್ ಸೇರಿದ ಶಕೀಬ್ ಅಲ್ ಹಸನ್; ಆದರೆ ಇಲ್ಲೊಂದಿದೆ ಟ್ವಿಸ್ಟ್

ಐಪಿಎಲ್ ಪ್ಲೇಆಫ್​ಗೂ ಮುನ್ನ ನೈಟ್​ ರೈಡರ್ಸ್ ಸೇರಿದ ಶಕೀಬ್ ಅಲ್ ಹಸನ್; ಆದರೆ ಇಲ್ಲೊಂದಿದೆ ಟ್ವಿಸ್ಟ್

  • Shakib Al Hasan: ಐಪಿಎಲ್​ ಪ್ಲೇಆಫ್​​ಗೂ ಮುನ್ನ ಬಾಂಗ್ಲಾದೇಶದ ಸ್ಟಾರ್​ ಆಲ್​ರೌಂಡರ್​ ಶಕೀಬ್ ಅಲ್ ಹಸನ್ ಅವರು ಶಾರೂಖ್ ಖಾನ್ ಒಡೆತನದ ಫ್ರಾಂಚೈಸಿಯನ್ನು ಮತ್ತೊಮ್ಮೆ ಸೇರಿಕೊಂಡಿದ್ದಾರೆ.

ನೈಟ್ ರೈಡರ್ಸ್ ತಂಡದ ಜೊತೆಗೆ ಶಕೀಬ್ ಅಲ್ ಹಸನ್ ಅವರು ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ಬಾಂಗ್ಲಾದೇಶದ ಸ್ಟಾರ್ ಆಲ್​​ರೌಂಡರ್​ ಕೋಲ್ಕತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಇದೀಗ 2024ರ ಐಪಿಎಲ್ ಪ್ಲೇಆಫ್​ಗೂ ಮುನ್ನ ಶಕೀಬ್, ಶಾರುಖ್ ಖಾನ್ ಒಡೆತನದ ಫ್ರಾಂಚೈಸಿಯನ್ನು ಮತ್ತೊಮ್ಮೆ ಸೇರಿದ್ದಾರೆ.
icon

(1 / 6)

ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅವರು ಕಣಕ್ಕಿಳಿಯಲು ಸಜ್ಜಾಗಿರುವುದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವಲ್ಲ. ಶಾರುಖ್ ಅವರ ಮತ್ತೊಂದು ಫ್ರಾಂಚೈಸಿ ತಂಡ ಲಾಸ್ ಏಂಜಲೀಸ್ ನೈಟ್ ರೈಡರ್ಸ್​​ ಪರ. ಮೇಜರ್ ಲೀಗ್ ಕ್ರಿಕೆಟ್​ಗ ಹೊಸ ಆವೃತ್ತಿಗೂ ಮುನ್ನ ವಿದೇಶಿ ಕ್ರಿಕೆಟಿಗರ ಕೋಟಾದಲ್ಲಿ ಶಕೀಬ್​​ರನ್ನು ನೈಟ್ ರೈಡರ್ಸ್ ಆಯ್ಕೆ ಮಾಡಿದೆ. ಶಕೀಬ್ ತಮ್ಮ ಹಳೆಯ ಕೆಕೆಆರ್ ಸಹ ಆಟಗಾರರಾದ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
icon

(2 / 6)

ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಸ್ಟಾರ್ ಕ್ರಿಕೆಟಿಗರಾದ ಸುನಿಲ್ ನರೈನ್, ಆಂಡ್ರೆ ರಸೆಲ್, ಜೇಸನ್ ರಾಯ್, ಸ್ಪೆನ್ಸರ್ ಜಾನ್ಸನ್, ಉನ್ಮುಕ್ತ್ ಚಂದ್, ಅಲಿ ಖಾನ್​ ಅವರನ್ನು ಉಳಿಸಿಕೊಂಡಿದೆ. ಡೆರಾನ್ ಡೇವಿಸ್, ಮ್ಯಾಥ್ಯೂ ಟ್ರೊಂಪ್ ಮತ್ತು ಆದಿತ್ಯ ಗಣೇಶ್ ಅವರು ಸಹ ತಂಡದ ಭಾಗವಾಗಿದ್ದಾರೆ.
icon

(3 / 6)

ಶಕೀಬ್ ಅಲ್ ಹಸನ್ ಐಪಿಎಲ್​ನಲ್ಲಿ ಒಟ್ಟು 71 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 19.83ರ ಬ್ಯಾಟಿಂಗ್ ಸರಾಸರಿಯಲ್ಲಿ 793 ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ಗಳಿಸಿದ್ದು, ಬೌಲಿಂಗ್​​​ನಲ್ಲಿ 63 ವಿಕೆಟ್ ಪಡೆದಿದ್ದಾರೆ.
icon

(4 / 6)

ಶಕೀಬ್ ಬಾಂಗ್ಲಾದೇಶ ಪರ 67 ಟೆಸ್ಟ್, 247 ಏಕದಿನ ಮತ್ತು 119 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​​​ನಲ್ಲಿ 4505 ರನ್, ಏಕದಿನದಲ್ಲಿ 7570 ರನ್ ಮತ್ತು ಟಿ20 ಕ್ರಿಕೆಟ್​​​​ನಲ್ಲಿ 2404 ರನ್ ಗಳಿಸಿದ್ದಾರೆ. ಕ್ರಮವಾಗಿ 237, 317, 145 ವಿಕೆಟ್ ಕಿತ್ತಿದ್ದಾರೆ.
icon

(5 / 6)

ಶಕೀಬ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಒಟ್ಟು 430 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಬ್ಯಾಟ್​ನಿಂದ 7231 ರನ್ ಗಳಿಸಿದ್ದಾರೆ. 31 ಅರ್ಧಶತಕ ಗಳಿಸಿದ್ದಾರೆ. ಚೆಂಡಿನೊಂದಿಗೆ 487 ವಿಕೆಟ್ ಪಡೆದಿದ್ದಾರೆ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು