ನಿಧಾನಗತಿಯ ಓವರ್ ರೇಟ್; ಎಂಐ ನಾಯಕ ಹಾರ್ದಿಕ್ ಪಾಂಡ್ಯಗೆ 1 ಪಂದ್ಯ ನಿಷೇಧ ಶಿಕ್ಷೆ; ಮುಂದಿನ ಆವೃತ್ತಿಗೆ ಅನ್ವಯ
- ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಕನಿಷ್ಠ ಓವರ್ ದರವನ್ನು ಕಾಯ್ದುಕೊಳ್ಳಲು ವಿಫಲವಾಗಿರುವುದು ಇದು 3ನೇ ಬಾರಿ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಲೀಗ್‌ನ ಕೊನೆಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಹಿನ್ನೆಲೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯರನ್ನು 1 ಪಂದ್ಯದಿಂದ ನಿಷೇಧಿಸಲಾಗಿದೆ.
- ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಕನಿಷ್ಠ ಓವರ್ ದರವನ್ನು ಕಾಯ್ದುಕೊಳ್ಳಲು ವಿಫಲವಾಗಿರುವುದು ಇದು 3ನೇ ಬಾರಿ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಲೀಗ್‌ನ ಕೊನೆಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಹಿನ್ನೆಲೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯರನ್ನು 1 ಪಂದ್ಯದಿಂದ ನಿಷೇಧಿಸಲಾಗಿದೆ.
(1 / 8)
ಮೇ 17ರ ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತು. ಇದರ ಜೊತೆಗೆ ನಿಧಾನಗತಿಯ ಓವರ್ ರೇಟ್ ಹೊಂದಿದ ಪರಿಣಾಮ ಪಂದ್ಯದ ನಾಯಕನಿಗೆ ಬಿಸಿಸಿಐ ಶಿಕ್ಷೆ ವಿಧಿಸಿದೆ.
(AFP)(2 / 8)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್‌ಗಾಗಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಗೆ 1 ಪಂದ್ಯದ ನಿಷೇಧದ ಶಿಕ್ಷೆ ವಿಧಿಸಲಾಗಿದೆ.
(AFP)(3 / 8)
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ 1 ಐಪಿಎಲ್ ಪಂದ್ಯಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ 2025ರ ಐಪಿಎಲ್ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ತಂಡದ ಮೊದಲ ಪಂದ್ಯವನ್ನು ಆಡುವಂತಿಲ್ಲ. ಎಂಐನ ಲೀಗ್‌ನಿಂದ ಔಟ್ ಆಗಿರುವ ಹಿನ್ನೆಲೆಯಲ್ಲಿ ನಿಷೇಧದ ಶಿಕ್ಷೆ ಮುಂದಿನ ವರ್ಷದ ಆವೃತ್ತಿಗೆ ಅನ್ವಯಿಸಲಿದೆ.
(AFP)(4 / 8)
2024ರ ಐಪಿಎಲ್ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆಲುವು ಸಾಧಿಸಿತ್ತು. ಅಂಕಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನದೊಂದಿಗೆ ಲೀಗ್ ಮುಗಿಸಿದೆ.
(AFP)(5 / 8)
ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನಿತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಸಿ ಹಾರ್ದಿಕ್ ಪಾಂಡ್ಯ ಅವರವನ್ನು ಎಂಐ ತಂಡದ ನಾಯಕರನ್ನಾಗಿ ಮಾಡಿತ್ತು.
(PTI)(6 / 8)
2024ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ವಿಫಲರಾಗಿದ್ದಾರೆ. ಆದರೆ ಪಾಂಡ್ಯ ಅವರ ಕಳಪೆ ಪ್ರದರ್ಶನದ ನಡುವೆಯೂ ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
(PTI)(7 / 8)
ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಕೆಲ ಆಟಗಾರರು, ತಂಡದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ರೋಹಿತ್ ಹಾಗೂ ಹಾರ್ದಿಕ್ ಬಣಗಳಾಗಿ ಇಬ್ಭಾಗವಾಗಿದೆ ಎಂದು ವರದಿಯಾಗಿತ್ತು.
(AP)ಇತರ ಗ್ಯಾಲರಿಗಳು