Kannada News  /  Photo Gallery  /  Cricket News Smriti Mandhana Dating With Bollywood Singer Palash Muchhal Fans Were Heartbroken To See Lovebirds Prs

Smriti Mandhana Dating: ಬಾಲಿವುಡ್ ಗಾಯಕನ ಜೊತೆ ಸ್ಮೃತಿ ಮಂಧಾನ ಡೇಟಿಂಗ್; ಲವ್ ​ಬರ್ಡ್ಸ್​​ ನೋಡಿ ಹೃದಯ ಚೂರಾಯಿತೆಂದ ಫ್ಯಾನ್ಸ್​

26 May 2023, 6:00 IST Prasanna Kumar P N
26 May 2023, 6:00 , IST

  • ಸ್ಮೃತಿ ಮಂಧಾನ ಬಾಲಿವುಡ್​ ಯುವ ಗಾಯಕನ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಗಾಯಕ ತನ್ನ ಕೈಯಲ್ಲಿ SM18 ಎಂದು ಅಚ್ಚೆ ಹಾಕಿಸಿಕೊಂಡಿದ್ದಾರೆ. ಸ್ಮೃತಿ ಮಂಧಾನ ಮತ್ತು 18 ಎಂಬುದು ಅವರ ಹೆಸರು ಮತ್ತು ಜೆರ್ಸಿ ನಂಬರ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ವುಮೆನ್ ಸ್ಮೃತಿ ಮಂಧಾನ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. 'ನ್ಯಾಷನಲ್ ಕ್ರಶ್' ಖ್ಯಾತಿಯ ಸ್ಮೃತಿ ಮಂಧಾನ ಪ್ರೀತಿಯಲ್ಲಿ ಬಿದ್ದಳಾ? ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

(1 / 11)

ಸ್ಮೃತಿ ಮಂಧಾನ ಬಾಲಿವುಡ್‌ನ ಜನಪ್ರಿಯ ಗಾಯಕ ಪಾಲಕ್ ಮುಚ್ಚಲ್ ಅವರ ಸಹೋದರನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿದೆ.

(2 / 11)

ಇತ್ತೀಚೆಗೆ ಅವರು ಬಾಲಿವುಡ್ ನಿರ್ದೇಶಕ, ಸಂಯೋಜಕ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರೊಂದಿಗಿನ ಬರ್ತ್ ​​ಡೇ ಕುರಿತ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

(3 / 11)

ಈ ಫೋಟೋಗಳು ಹೊರಬಂದಾಗಿನಿಂದ ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಪಲಾಶ್ ಬಾಲಿವುಡ್ ಗಾಯಕ ಪಾಲಕ್ ಮುಚಲ್ ಅವರ ಸಹೋದರ.

(4 / 11)

ಇತ್ತೀಚೆಗೆ, ಸ್ಮೃತಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪಲಾಶ್ ಮುಚ್ಚಲ್ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಒಳ್ಳೆಯ ಹೃದಯ ಇರುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಸ್ಮೃತಿ ಕ್ಯಾಪ್ಶನ್​ ಬರೆದಿದ್ದಾರೆ.

(5 / 11)

ಈ ಫೋಟೋಗಳಲ್ಲಿ ಸ್ಮೃತಿ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರೆ, ಪಲಾಶ್ ಮುಚ್ಚಲ್ ಕಪ್ಪು ಪ್ಯಾಂಟ್ ಮತ್ತು ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

(6 / 11)

ಈ ಪೋಸ್ಟ್ ವೈರಲ್ ಆದ ತಕ್ಷಣ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ಇಬ್ಬರು ಲವ್​ಬರ್ಡ್ಸ್​ ಎಂದು ಕರೆಯುತ್ತಿದ್ದಾರೆ. ಇದಲ್ಲದೇ ಇವರಿಬ್ಬರು ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗಳು ಹಲವು.

(7 / 11)

ನಿಮ್ಮಿಬ್ಬರ ಮದುವೆಗಾಗಿ ಕಾಯುತ್ತಿದ್ದೇನೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನನ್ನ ಹೃದಯ ಬ್ರೇಕ್​ ಮಾಡಿದೆ' ಎಂದು ಮತ್ತೊಬ್ಬರು ಬರೆದಿದ್ದಾರೆ. 

(8 / 11)

ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸ್ಮೃತಿ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಪಾಲಕ್‌ನ ಚಿತ್ರಗಳು ವೈರಲ್ ಆಗಿದ್ದವು. ಈ ಫೋಟೋಗಳಲ್ಲಿ ಪಲಾಶ್, ಸ್ಮೃತಿಗೆ ಕೇಕ್ ತಿನ್ನಿಸುತ್ತಿರುವುದನ್ನು ಕಾಣಬಹುದು.

(9 / 11)

ಇದರ ಹೊರತಾಗಿ ಸ್ಮೃತಿ ಪಲಾಶ್ ಮುಚ್ಚಲ್ ಅವರ ಸಹೋದರಿ ಪಾಲಕ್ ಮುಚ್ಚಲ್, ಅವರ ಇಡೀ ಕುಟುಂಬವು ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ.

(10 / 11)

ಪಲಾಶ್ 'ಡಿಶ್ಕಿಯಾನ್' ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಅಮಿತಾಬ್ ಬಚ್ಚನ್ ಅಭಿನಯದ 'ಭೂತನಾಥ್ ರಿಟರ್ನ್ಸ್' ಚಿತ್ರದ ಪ್ರಸಿದ್ಧ ಹಾಡು 'ಪಾರ್ಟಿ ತೋ ಮುಂಕಿ ಹೈ' ಅನ್ನು ಸಹ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ‘ಅರ್ಧ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು.

(11 / 11)

ಇತರ ಗ್ಯಾಲರಿಗಳು