ಪಾಕಿಸ್ತಾನ ವಿರುದ್ಧ 3 ವಿಕೆಟ್ ಉರುಳಿಸಿ ಏಕದಿನ ಕ್ರಿಕೆಟ್ನಲ್ಲಿ 21 ವರ್ಷಗಳ ದಾಖಲೆ ಮುರಿದ ಸೋಫಿ ಎಕ್ಲೆಸ್ಟನ್
- Sophie Ecclestone: ಇಂಗ್ಲೆಂಡ್ ಮಹಿಳಾ ತಂಡದ ಸ್ಪಿನ್ನರ್ ಸೋಫಿ ಎಕ್ಲೆಸ್ಟನ್ ಏಕದಿನ ಕ್ರಿಕೆಟ್ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಇದರೊಂದಿಗೆ 21 ವರ್ಷಗಳ ಹಿಂದೆ ಕ್ಯಾಥರೀನ್ ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ.
- Sophie Ecclestone: ಇಂಗ್ಲೆಂಡ್ ಮಹಿಳಾ ತಂಡದ ಸ್ಪಿನ್ನರ್ ಸೋಫಿ ಎಕ್ಲೆಸ್ಟನ್ ಏಕದಿನ ಕ್ರಿಕೆಟ್ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಇದರೊಂದಿಗೆ 21 ವರ್ಷಗಳ ಹಿಂದೆ ಕ್ಯಾಥರೀನ್ ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ.
(1 / 5)
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಪಡೆದ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಎಕ್ಲೆಸ್ಟನ್ 4.1 ಓವರ್ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರು.
(2 / 5)
ಈ ಮೂಲಕ ಸೋಫಿ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಕೇವಲ 64 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಇದಕ್ಕೂ ಮುನ್ನ 2003ರಲ್ಲಿ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ 64 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದರು. ಆದಾಗ್ಯೂ, ಬೌಲಿಂಗ್ ಇನ್ನಿಂಗ್ಸ್ಗಳ ಸಂಖ್ಯೆಯಲ್ಲಿ ಸೋಫಿ ಕ್ಯಾಥರೀನ್ ಅವರ ದಾಖಲೆಯನ್ನು ಮೀರಿಸಿದ್ದಾರೆ.
(3 / 5)
ಸೋಫಿ 63 ಇನ್ನಿಂಗ್ಸ್ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರೆ, ಕ್ಯಾಥರೀನ್ 64 ಇನ್ನಿಂಗ್ಸ್ಗಳಲ್ಲಿ 100 ಏಕದಿನ ವಿಕೆಟ್ಗಳನ್ನು ಪೂರೈಸಿದ್ದರು. ಇದರೊಂದಿಗೆ ಸೋಫಿ ಎಕ್ಲೆಸ್ಟನ್ 21 ವರ್ಷಗಳ ಹಿಂದೆ ಕ್ಯಾಥರೀನ್ ಅವರ ದಾಖಲೆಯನ್ನು ಮೀರಿಸಿದ್ದಾರೆ.
(4 / 5)
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ನಟಾಲಿ ಸೀವರ್ 117 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಸಹಿತ 124 ರನ್ ಸಿಡಿಸಿದರು. ಡ್ಯಾನಿ ವ್ಯಾಟ್ 42 ಎಸೆತಗಳಲ್ಲಿ 44 ರನ್ ಗಳಿಸಿದರು. ಆಲಿಸ್ ಕ್ಯಾಪ್ಸೆ 39 ರನ್ ಗಳಿಸಿದರು. ಮೈಯಾ ಬೌಚಿಯರ್ 34 ರನ್ ಗಳಿಸಿದರು. ಪಾಕಿಸ್ತಾನ ಪರ ಉಮ್ಮೆ-ಎ-ಹನಿ 2 ವಿಕೆಟ್ ಪಡೆದರು.
(5 / 5)
ಗುರಿ ಬೆನ್ನಟ್ಟಿದ ಪಾಕಿಸ್ತಾನ 29.1 ಓವರ್ಗಳಲ್ಲಿ 124 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಇಂಗ್ಲೆಂಡ್ 178 ರನ್ ಗಳಿಂದ ಗೆದ್ದುಕೊಂಡಿತು. ಪಾಕಿಸ್ತಾನ ಪರ ಮುನೀಬಾ ಅಲಿ 47 ರನ್ ಸಿಡಿಸಿದ್ದೇ ಗರಿಷ್ಠ ಸ್ಕೋರ್. ಸೋಫಿ 3 ವಿಕೆಟ್ ಪಡೆದರೆ, ಲಾರೆನ್ ಬೆಲ್ ಹಾಗೂ ನಟಾಲಿ ಸೀವರ್ ತಲಾ 2 ವಿಕೆಟ್ ಪಡೆದರು. ಏಕದಿನ ಸರಣಿಯನ್ನು 0-2 ರಿಂದ ವೈಟ್ ವಾಶ್ ಮಾಡಿಕೊಂಡಿತು,
ಇತರ ಗ್ಯಾಲರಿಗಳು