ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ಫಲಿತಾಂಶ ಏನಾಗಲಿದೆ: ಜ್ಯೋತಿಷಿ ಭವಿಷ್ಯ ಹೀಗಿದೆ ನೋಡಿ

ಭಾರತ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ಫಲಿತಾಂಶ ಏನಾಗಲಿದೆ: ಜ್ಯೋತಿಷಿ ಭವಿಷ್ಯ ಹೀಗಿದೆ ನೋಡಿ

  • ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಹೃದಯ ವಿದ್ರಾವಕ ಸೋಲು ಕಂಡ ನಂತರ, ಟೀಮ್‌ ಇಂಡಿಯಾ ಜೂನ್‌ 29ರ ಶನಿವಾರ ಐಸಿಸಿ ಟ್ರೋಫಿ ಬರ ನೀಗಿಸುವ ಪ್ರಯತ್ನಕ್ಕಿಳಿಯಲಿದೆ. ಇಂದು ಭಾರತ ವಿಶ್ವಕಪ್ ಗೆಲ್ಲುತ್ತಾ? ಈ ಕುರಿತು ಜ್ಯೋತಿಷಿಗಳು ಏನು ಹೇಳುತ್ತಾರೆ?

ಪಂದ್ಯದ ಕುರಿತು ಮಾತನಾಡಿದ ಜ್ಯೋತಿಷಿ ಸುಮಿತ್ ಕುಮಾರ್, "ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಬಹುದು. ದಕ್ಷಿಣ ಆಫ್ರಿಕಾದ ಆಟಗಾರರಿಗಿಂತ ಭಾರತೀಯ ಆಟಗಾರರು ಹೆಚ್ಚು ನಿರ್ಭೀತರಾಗಿರುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
icon

(1 / 5)

ಪಂದ್ಯದ ಕುರಿತು ಮಾತನಾಡಿದ ಜ್ಯೋತಿಷಿ ಸುಮಿತ್ ಕುಮಾರ್, "ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಬಹುದು. ದಕ್ಷಿಣ ಆಫ್ರಿಕಾದ ಆಟಗಾರರಿಗಿಂತ ಭಾರತೀಯ ಆಟಗಾರರು ಹೆಚ್ಚು ನಿರ್ಭೀತರಾಗಿರುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.(PTI)

ವಿಶ್ವಕಪ್ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯಾವ ಚೆಂಡುಗಳು ಮುಖ್ಯವಾಗಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ಅವರ ಪ್ರಕಾರ, 1.2ನೇ ಓವರ್‌, 2.5 ಓವರ್‌, 5.1 ಓವರ್‌, 9.3 ಓವರ್, 10.4 ಓವರ್, 12ನೇ ಓವರ್, 12.1 ಓವರ್, 12.6 ಓವರ್‌, 13.5 ಓವರ್, 14.4 ಓವರ್, 14.6 ಓವರ್, (15 ನೇ ಓವರ್ನ ಕೊನೆಯ ಎಸೆತ), 15.6 ಓವರ್, 15.1 ಓವರ್ ಮುಖ್ಯ ಎಸೆತವಾಗಲಿದೆ.
icon

(2 / 5)

ವಿಶ್ವಕಪ್ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯಾವ ಚೆಂಡುಗಳು ಮುಖ್ಯವಾಗಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ಅವರ ಪ್ರಕಾರ, 1.2ನೇ ಓವರ್‌, 2.5 ಓವರ್‌, 5.1 ಓವರ್‌, 9.3 ಓವರ್, 10.4 ಓವರ್, 12ನೇ ಓವರ್, 12.1 ಓವರ್, 12.6 ಓವರ್‌, 13.5 ಓವರ್, 14.4 ಓವರ್, 14.6 ಓವರ್, (15 ನೇ ಓವರ್ನ ಕೊನೆಯ ಎಸೆತ), 15.6 ಓವರ್, 15.1 ಓವರ್ ಮುಖ್ಯ ಎಸೆತವಾಗಲಿದೆ.(AFP)

ದಕ್ಷಿಣ ಆಫ್ರಿಕಾದ ಆಟಗಾರರಾದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಟ್ರಿಸ್ಟಾನ್ ಸ್ಟಬ್ಸ್, ತಬ್ರೈಜ್ ಶಮ್ಸಿ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಅವರೊಂದಿಗೆ ಜಾಗರೂಕರಾಗಿರಬೇಕು. ವಿಶೇಷವಾಗಿ ಮಿಲ್ಲರ್ ಮೇಲೆ. ಮಿಲ್ಲರ್ ಅವರಂಥ ಆಟಗಾರರು ಫೈನಲ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ.
icon

(3 / 5)

ದಕ್ಷಿಣ ಆಫ್ರಿಕಾದ ಆಟಗಾರರಾದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಟ್ರಿಸ್ಟಾನ್ ಸ್ಟಬ್ಸ್, ತಬ್ರೈಜ್ ಶಮ್ಸಿ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಅವರೊಂದಿಗೆ ಜಾಗರೂಕರಾಗಿರಬೇಕು. ವಿಶೇಷವಾಗಿ ಮಿಲ್ಲರ್ ಮೇಲೆ. ಮಿಲ್ಲರ್ ಅವರಂಥ ಆಟಗಾರರು ಫೈನಲ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ.(AP)

ಈ ಮಧ್ಯೆ, ಭಾರತವು ಟಿ20 ವಿಶ್ವಕಪ್ ಗೆಲ್ಲಬೇಕೆಂದು ಕನಸು ಕಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ರೋಹಿತ್ ಶರ್ಮಾ ಟ್ರೋಫಿ ಎತ್ತುವ ಕನಸು ಕಂಡಿದ್ದರು. ವಿರಾಟ್ ಕೊಹ್ಲಿ ರೋಹಿತ್ ಅವರೊಂದಿಗೆ ಉತ್ತಮ ಜೊತೆಯಾಟ ಆಡುತ್ತಾರೆ. ಇವರಿಬ್ಬರೂ ಶತಕದ ಜೊತೆಯಾಟವಾಡುತ್ತಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 200ಕ್ಕೂ ಹೆಚ್ಚು ರನ್ ಗಳಿಸಿದರೆ, ಒತ್ತಡಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ 100 ರನ್‌ಗಳಿಗೆ ಆಲೌಟ್ ಆಗುತ್ತೆ ಎಂದು ಜ್ಯೋತಿಷಿ ಹೇಳಿದ್ದಾರೆ.
icon

(4 / 5)

ಈ ಮಧ್ಯೆ, ಭಾರತವು ಟಿ20 ವಿಶ್ವಕಪ್ ಗೆಲ್ಲಬೇಕೆಂದು ಕನಸು ಕಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ರೋಹಿತ್ ಶರ್ಮಾ ಟ್ರೋಫಿ ಎತ್ತುವ ಕನಸು ಕಂಡಿದ್ದರು. ವಿರಾಟ್ ಕೊಹ್ಲಿ ರೋಹಿತ್ ಅವರೊಂದಿಗೆ ಉತ್ತಮ ಜೊತೆಯಾಟ ಆಡುತ್ತಾರೆ. ಇವರಿಬ್ಬರೂ ಶತಕದ ಜೊತೆಯಾಟವಾಡುತ್ತಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 200ಕ್ಕೂ ಹೆಚ್ಚು ರನ್ ಗಳಿಸಿದರೆ, ಒತ್ತಡಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ 100 ರನ್‌ಗಳಿಗೆ ಆಲೌಟ್ ಆಗುತ್ತೆ ಎಂದು ಜ್ಯೋತಿಷಿ ಹೇಳಿದ್ದಾರೆ.(AP)

ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಜ್ಯೋತಿಷಿ ಪಂದ್ಯದ ಫಲಿತಾಂಶವನ್ನು ನೇರವಾಗಿ ಊಹಿಸಲಿಲ್ಲ. ಆದರೆ, ಫೈನಲ್‌ ಪಂದ್ಯವು ರೋಹಿತ್, ವಿರಾಟ್, ಜಸ್ಪ್ರೀತ್ ಬುಮ್ರಾ, ರಾಹುಲ್ ದ್ರಾವಿಡ್ ಅವರ ಕೈಯಲ್ಲಿರಲಿದೆ ಎಂದು ಅವರು ಸೂಚಿಸಿದ್ದಾರೆ. 11 ವರ್ಷಗಳ ನಂತರ ಮತ್ತೊಂದು ಐಸಿಸಿ ಟ್ರೋಫಿಯನ್ನು ಭಾರತ ಎದುರು ನೋಡುತ್ತಿದೆ.
icon

(5 / 5)

ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಜ್ಯೋತಿಷಿ ಪಂದ್ಯದ ಫಲಿತಾಂಶವನ್ನು ನೇರವಾಗಿ ಊಹಿಸಲಿಲ್ಲ. ಆದರೆ, ಫೈನಲ್‌ ಪಂದ್ಯವು ರೋಹಿತ್, ವಿರಾಟ್, ಜಸ್ಪ್ರೀತ್ ಬುಮ್ರಾ, ರಾಹುಲ್ ದ್ರಾವಿಡ್ ಅವರ ಕೈಯಲ್ಲಿರಲಿದೆ ಎಂದು ಅವರು ಸೂಚಿಸಿದ್ದಾರೆ. 11 ವರ್ಷಗಳ ನಂತರ ಮತ್ತೊಂದು ಐಸಿಸಿ ಟ್ರೋಫಿಯನ್ನು ಭಾರತ ಎದುರು ನೋಡುತ್ತಿದೆ.(AP)


ಇತರ ಗ್ಯಾಲರಿಗಳು