ದೇವಸ್ಥಾನದ ಗಂಟೆಯಂತಾಗಿದೆ ಆರ್ಸಿಬಿ ರೆಕಾರ್ಡ್; ಇದೇ ಐಪಿಎಲ್ನಲ್ಲಿ 4ನೇ ಬಾರಿಗೆ ಬೆಂಗಳೂರು ದಾಖಲೆ ಬ್ರೇಕ್
- Sunrisers Hyderabad : ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಡಿಸಿದ್ದ 263 ರನ್ಗಳ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಮೂರನೇ ಬಾರಿಗೆ ಬ್ರೇಕ್ ಮಾಡಿದೆ.
- Sunrisers Hyderabad : ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಡಿಸಿದ್ದ 263 ರನ್ಗಳ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಮೂರನೇ ಬಾರಿಗೆ ಬ್ರೇಕ್ ಮಾಡಿದೆ.
(1 / 5)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಡಿಸಿದ್ದ 263 ರನ್ಗಳ ದಾಖಲೆಯನ್ನು ದೇವಸ್ಥಾನದ ಗಂಟೆ ಮಾಡಿಕೊಂಡಿದ್ದಾರೆ. ಇದೇ ಐಪಿಎಲ್ನಲ್ಲಿ ನಾಲ್ಕನೇ ಬಾರಿಗೆ ಮುರಿಯಲಾಗಿದೆ. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡವೇ ಮೂರು ಬಾರಿ ಬ್ರೇಕ್ ಮಾಡಿದೆ.(ANI )
(2 / 5)
17ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತೊಮ್ಮೆ ಆರ್ಭಟಿಸಿದ ಸನ್ರೈಸರ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಇದರೊಂದಿಗೆ 263 ರನ್ಗಳ ದಾಖಲೆಯನ್ನು ಮುರಿದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ಸ್ಕೋರ್ ದಾಖಲಿಸಿತು.(ANI )
(3 / 5)
2013ರ ಐಪಿಎಲ್ನಲ್ಲಿ ಏಪ್ರಿಲ್ 23ರಂದು ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ, 263 ರನ್ ಬಾರಿಸಿತ್ತು. ಕ್ರಿಸ್ಗೇಲ್ 175 ರನ್ ಬಾರಿಸಿದ್ದರು. 11 ವರ್ಷಗಳಿಂದ ಈ ದಾಖಲೆ ಸುರಕ್ಷಿತವಾಗಿತ್ತು. ಆದರೆ ಪ್ರಸಕ್ತ ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡವು ಮೂರು ಬಾರಿ ಮತ್ತು ಕೆಕೆಆರ್ ಒಂದು ಬಾರಿ ಈ ದಾಖಲೆಯನ್ನು ಮುರಿದಿದೆ.(PTI)
(4 / 5)
ಮುಂಬೈ ಇಂಡಿಯನ್ಸ್ ವಿರುದ್ಧ ಮಾರ್ಚ್ 27ರಂದು 277 ರನ್ ಬಾರಿಸಿದ್ದ ಎಸ್ಆರ್ಹೆಚ್, ಏಪ್ರಿಲ್ 15ರಂದು ಆರ್ಸಿಬಿ ವಿರುದ್ಧ 287 ರನ್ ಸಿಡಿಸಿತ್ತು. ಇದೀಗ ಇಂದು (ಏಪ್ರಿಲ್ 20) ಡೆಲ್ಲಿ ಕ್ಯಾಪಿಟಲ್ ಎದುರು 266 ರನ್ ಗಳಿಸಿದೆ. ಇನ್ನು ಏಪ್ರಿಲ್ 3ರಂದು ಡೆಲ್ಲಿ ವಿರುದ್ಧ ಕೆಕೆಆರ್ 272 ರನ್ ಬಾರಿಸಿ ಆರ್ಸಿಬಿಯ 263 ರನ್ಗಳ ದಾಖಲೆ ಮುರಿದಿತ್ತು.(AFP)
ಇತರ ಗ್ಯಾಲರಿಗಳು