ಒಂದು ಪಂದ್ಯ, 38 ಸಿಕ್ಸರ್; ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮುಂಬೈ-ಎಸ್‌ಆರ್‌ಎಚ್ ವಿಶೇಷ ದಾಖಲೆ
- ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಯ್ತು. ಉಭಯ ತಂಡಗಳಿಂದ ದಾಖಲೆಯ ಮೊತ್ತ ದಾಖಲಾಯ್ತು. ಒಟ್ಟು 523 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಒಟ್ಟಾದ ಐಪಿಎಲ್ ಪಂದ್ಯ ಎಂಬ ರೆಕಾರ್ಡ್ ನಿರ್ಮಾಣವಾಯ್ತು ಇದರೊಂದಿಗೆ ಸಿಕ್ಸರ್‌ನಲ್ಲೂ ದಾಖಲೆ ನಿರ್ಮಾಣವಾಗಿದೆ.

(1 / 6)
ಪಂದ್ಯದಲ್ಲಿ ಉಭಯ ತಂಡಗಳಿಂದ ಬರೋಬ್ಬರಿ 38 ಸಿಕ್ಸರ್‌ಗಳು ಸಿಡಿದವು. ಇದರಲ್ಲಿ ಮುಂಬೈ ತಂಡವೊಂದೇ 20 ಸಿಕ್ಸರ್ ಸಿಡಿಸಿತು. ಉಳಿದಂತೆ ಹೈದರಾಬಾದ್ ತಂಡ 18 ಸಿಕ್ಸರ್ ಬಾರಿಸಿತು.(AFP)
(2 / 6)
ಮುಂಬೈ ಸಿಡಿಸಿದ 20 ಸಿಕ್ಸರ್, ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಸಿಕ್ಸರ್ ದಾಖಲೆಯಾಗಿದೆ. ಈ ಹಿಂದೆ ಪುಣೆ ವಾರಿಯರ್ಸ್ ವಿರುದ್ಧ ಬಾರಿಸಿದ 21 ಸಿಕ್ಸರ್ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅಧಿಕ ಸಿಕ್ಸರ್ ದಾಖಲೆಯಾಗಿದೆ.(AFP)
(3 / 6)
ಪಂದ್ಯದಲ್ಲಿ ದಾಖಲಾದ 38 ಸಿಕ್ಸರ್, ಟಿ20 ಕ್ರಿಕೆಟ್‌ನಲ್ಲೇ ದಾಖಲೆ ನಿರ್ಮಿಸಿದೆ. ಪುರುಷರ ಚುಟುಕು ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಸಿಕ್ಸರ್ ಇದಾಗಿದೆ. ಈ ಹಿಂದೆ 2018ರ ಎಪಿಎಲ್ ಟೂರ್ನಿಯಲ್ಲಿ ಬಾಲ್ಖ್ ಲೆಜೆಂಡ್ಸ್ ಮತ್ತು ಕಾಬೂಲ್ ಜ್ವಾನನ್ ಪಂದ್ಯದಲ್ಲಿ 37 ಸಿಕ್ಸ್ ಸಿಡಿದಿತ್ತು.(AFP)
(4 / 6)
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, 2023ರಲ್ಲಿ 35 ಸಿಕ್ಸ್ ಬಾರಿಸಿದ ದಾಖಲೆ ಇದೆ. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಸಿಕ್ಸರ್‌ಗಳು ಸಿಡಿದಿದ್ದವು.(AFP)
(5 / 6)
ಮುಂಬೈ ಇಂಡಿಯನ್ಸ್ ಗಳಿಸಿದ 246 ರನ್, ಐಪಿಎಲ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಈವರೆಗಿನ ಅತಿ ಹೆಚ್ಚು ಮೊತ್ತವಾಗಿದೆ.(ANI)
ಇತರ ಗ್ಯಾಲರಿಗಳು