ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
- Suryakumar Yadav Virat Kohli: ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
- Suryakumar Yadav Virat Kohli: ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
(1 / 5)
ಟಿ20 ವಿಶ್ವಕಪ್ 2024 ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 47 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಭಾರತ 181 ರನ್ ಗಳಿಸಿದರೆ, ಆಫ್ಘನ್ 134 ರನ್ ಗಳಿಸಲಷ್ಟೇ ಶಕ್ತವಾಯಿತು.
(2 / 5)
ಪಂದ್ಯದಲ್ಲಿ ಭಾರತದ ಪರ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸಂಕಷ್ಟದಲ್ಲಿದ್ದ ಅವಧಿಯಲ್ಲಿ ಅಬ್ಬರಿಸಿದ ಸ್ಕೈ 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಗಳಿಸಿದರು.
(3 / 5)
ಅದ್ಭುತ ಪ್ರದರ್ಶನದ ಪರಿಣಾಮ ಸೂರ್ಯಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಟೀಮ್ ಇಂಡಿಯಾ ಸೂಪರ್ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
(4 / 5)
ಈ ಪ್ರಶಸ್ತಿಯೊಂದಿಗೆ ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅಧಿಕ ಪ್ಲೇಯರ್ ಆಫ್ ದಿ ಅವಾರ್ಡ್ ಆಟಗಾರರ ಪೈಕಿ ಕೊಹ್ಲಿ ಜತೆಗೆ ಸೂರ್ಯಕುಮಾರ್ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಇಬ್ಬರು ಸಹ ತಲಾ 15 ಬಾರಿ ಟಿ20ಐನಲ್ಲಿ ಪಂದ್ಯಶ್ರೇಷ್ಠ ಗೆದ್ದಿದ್ದಾರೆ.
ಇತರ ಗ್ಯಾಲರಿಗಳು