ಓಮನ್ ವಿರುದ್ಧ ವಿಶ್ವದಾಖಲೆಯ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಕನಸು ಜೀವಂತವಾಗಿರಿಸಿದ ಇಂಗ್ಲೆಂಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಓಮನ್ ವಿರುದ್ಧ ವಿಶ್ವದಾಖಲೆಯ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಕನಸು ಜೀವಂತವಾಗಿರಿಸಿದ ಇಂಗ್ಲೆಂಡ್

ಓಮನ್ ವಿರುದ್ಧ ವಿಶ್ವದಾಖಲೆಯ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಕನಸು ಜೀವಂತವಾಗಿರಿಸಿದ ಇಂಗ್ಲೆಂಡ್

  • T20 World Cup 2024: ಓಮನ್ ತಂಡದ ವಿರುದ್ಧ ವಿಶ್ವದಾಖಲೆಯ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ, ಟಿ20 ವಿಶ್ವಕಪ್ 2024 ಸೂಪರ್-8 ಕನಸು ಜೀವಂತವಾಗಿರಿಸಿದೆ.

ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಗುಂಪು ಹಂತದ 28ನೇ ಪಂದ್ಯದಲ್ಲಿ ದುರ್ಬಲ ಓಮನ್ ವಿರುದ್ಧ ಬಲಿಷ್ಠ ಇಂಗ್ಲೆಂಡ್ 8 ವಿಕೆಟ್​​ಗಳ ಗೆಲುವು ದಾಖಲಿಸಿ ಸೂಪರ್​-8 ಆಸೆ ಜೀವಂತವಾಗಿಟ್ಟುಕೊಂಡಿದೆ.
icon

(1 / 9)

(PTI)

ಓಮನ್ ವಿರುದ್ಧ ಕೇವಲ 3.1 ಓವರ್​​​ನಲ್ಲೇ ಗೆಲುವು ಸಾಧಿಸಿದ ಆಂಗ್ಲರು ವಿಶ್ವ ಕ್ರಿಕೆಟ್​​ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತಿ ದೊಡ್ಡ ಮಾರ್ಜಿನ್​ನಲ್ಲಿ ಗೆಲುವು ಸಾಧಿಸಿದೆ.
icon

(2 / 9)

ಇಂಗ್ಲೆಂಡ್​ 101 ಎಸೆತಗಳ ಅಂತರದಲ್ಲಿ ಜಯಿಸಿದೆ. ಈ ಹಿಂದೆ ಶ್ರೀಲಂಕಾ, ನೆದರ್ಲೆಂಡ್ಸ್ ಎದುರು 90 ಎಸೆತಗಳ ಅಂತರದಿಂದ ಗೆದ್ದಿದ್ದೇ ಇದುವರೆಗಿನ (2014) ದೊಡ್ಡ ಮಾರ್ಜಿನ್ ಗೆಲುವಾಗಿತ್ತು.
icon

(3 / 9)

ಆಂಟಿಗುವಾದ ಸರ್​ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಓಮನ್ 13.2 ಓವರ್​​ಗಳಲ್ಲಿ ಕೇವಲ 47 ರನ್​ಗಳಿಗೆ ಆಲೌಟ್ ಆಯಿತು.
icon

(4 / 9)

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, 3.1 ಓವರ್​​ನಲ್ಲೇ ಗೆದ್ದು ಬೀಗಿತು. ಇದರೊಂದಿಗೆ ಮೈನಸ್​​ನಲ್ಲಿ ರನ್​ರೇಟ್​ ಪ್ಲಸ್ ಆಗಿದೆ. ಈ ಪಂದ್ಯಕ್ಕೂ ಮುನ್ನ -1.800 ರನ್ ರೇಟ್ ಇತ್ತು. ಈಗ +3.081 ರನ್ ರೇಟ್ ಆಗಿದೆ.
icon

(5 / 9)

ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಈಗಾಗಲೇ ಅಗ್ರಸ್ಥಾನದೊಂದಿಗೆ ಸೂಪರ್​-8 ಪ್ರವೇಶಿಸಿದೆ. ಇದೀಗ ಉಳಿದೊಂದು ಸ್ಥಾನಕ್ಕೆ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ.
icon

(6 / 9)

ಸ್ಕಾಟ್ಲೆಂಡ್ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. ಇನ್ನೊಂದು ಪಂದ್ಯ ರದ್ದಾಗಿದೆ. ಹೀಗಾಗಿ 5 ಅಂಕ ಪಡೆದಿದೆ. ಉಳಿದ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆದ್ದರೆ ಸೂಪರ್​-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.
icon

(7 / 9)

ಸ್ಕಾಟ್ಲೆಂಡ್ ಸೋತರೆ, ಆಗ ತಾನು ಸೂಪರ್-8 ಪ್ರವೇಶಿಸಲು ಇಂಗ್ಲೆಂಡ್ ಸೋಲುವುದಕ್ಕೆ ಪ್ರಾರ್ಥಿಸಬೇಕು. ಆದರೆ, ಇಂಗ್ಲೆಂಡ್​ ಪಾಲಿಗೆ ಸ್ಕಾಟ್ಲೆಂಡ್ ಸೋಲಬೇಕು. ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು. ಏಕೆಂದರೆ ರನ್​ರೇಟ್ ಸ್ಕಾಟ್ಲೆಂಡ್​ಗಿಂತ ಉತ್ತಮವಾಗಿದೆ.
icon

(8 / 9)

ಪ್ರಸ್ತುತ ಇಂಗ್ಲೆಂಡ್ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಸೋಲು, 1 ಗೆಲುವು, 1 ಪಂದ್ಯ ರದ್ದಾಗಿದೆ. ಹೀಗಾಗಿ 3 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.
icon

(9 / 9)

ಇತರ ಗ್ಯಾಲರಿಗಳು