Top Bat Sponsorship: ವಿರಾಟ್ ಕೊಹ್ಲಿ ಬ್ಯಾಟ್ ಸ್ಪಾನ್ಸರ್‌ಶಿಪ್‌ಗೆ 100 ಕೋಟಿ ರೂಪಾಯಿ; ಟಾಪ್ 5 ಬ್ಯಾಟ್ಸಮನ್‌ಗಳು ಇವರೇ
ವಿರಾಟ್ ಕೊಹ್ಲಿ ಬ್ಯಾಟ್ ಪ್ರಾಯೋಜಕಕತ್ವದಿಂದಲೇ 100 ಕೋಟಿ ರೂಪಾಯಿ ಪಡೆಯುತ್ತಾರೆ. ವಿಶ್ವದ ಟಾಪ್ ಬ್ಯಾಟ್ಸಮನ್‌ಗಳು ತಮ್ಮ ಬ್ಯಾಟ್ ಸ್ಪಾನ್ಸರ್‌ಶಿಪ್‌ಗಾಗಿ ದೊಡ್ಡ ಮಟ್ಟದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಐವರು ಟಾಪ್ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.
(1 / 6)
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಪ್ರಸಿದ್ಧ ಟೈರ್ ಮಾರಾಟ ಸಂಸ್ಥೆ ಎಂಆರ್‌ಎಫ್ ಜೊತೆಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ 2025 ರವರೆಗೆ ಇರಲಿದೆ. ಬ್ಯಾಟ್ ಪ್ರಾಯೋಜಕತ್ವದಿಂದಲೇ ಅವರು ವರ್ಷಕ್ಕೆ 12.5 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
(2 / 6)
ವಿರಾಟ್ ಕೊಹ್ಲಿ ಅವರಿಗಿಂತ ಮುನ್ನ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಬ್ಯಾಟ್ ಸ್ಪಾನ್ಸ್‌ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದರು. ಸಚಿನ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ವರ್ಷಗಳ ಕಾಲ ಬ್ಯಾಟ್ ಪ್ರಾಯೋಜಕತ್ವ ಒಪ್ಪಂದವನ್ನು ಎಂಆರ್‌ಎಫ್ ಜೊತೆ ಮಾಡಿಕೊಂಡಿದ್ದರು. ಇದರಿಂದ ವರ್ಷಕ್ಕೆ 8 ಕೋಟಿ ರೂಪಾಯಿ ಗಳಿಸುತ್ತಿದ್ದರು.
(3 / 6)
ಸದ್ಯ ಬ್ಯಾಟ್ ಸ್ಪಾನ್ಸರ್‌ಶಿಪ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರ ನಂತರದ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದ್ದಾರೆ. ಸಿಯೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವರ್ಷಕ್ಕೆ 4 ಕೋಟಿ ರೂಪಾಯಿ ಪಡೆಯುತ್ತಾರೆ.
(4 / 6)
4ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್, ಮಾಜಿ ನಾಯಕ ಸ್ವೀವ್ ಸ್ಮಿತ್ ಇದ್ದಾರೆ. ಈತ ನ್ಯೂ ಬ್ಯಾಲೆನ್ಸ್ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ವಾರ್ಷಿಕವಾಗಿ ಬ್ಯಾಟ್ ಸ್ಪಾನ್ಸರ್‌ಶಿಪ್‌ನಿಂದ 2.45 ಕೋಟಿ ರೂಪಾಯಿ ಗಳಿಸುತ್ತಾರೆ.
(5 / 6)
ಬ್ಯಾಟ್ ಸ್ಪಾನ್ಸರ್‌ಶಿಪ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 5ನೇ ಸ್ಥಾನದಲ್ಲಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಸ್ಪಾರ್ಟನ್ ಸಂಸ್ಥೆಯೊಂದಿಗೆ ಬ್ಯಾಟ್ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ವಾರ್ಷಿಕ 2.2 ಕೋಟಿ ರೂಪಾಯಿ ಪಡೆಯುತ್ತಾರೆ.
ಇತರ ಗ್ಯಾಲರಿಗಳು