ಟಿ20 ವಿಶ್ವಕಪ್ 2024 ಆರಂಭಕ್ಕೆ ದಿನಗಣನೆ; ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿ ಹೇಗಿದೆ ನೋಡಿ
- India T20 World Cup Fixtures : ಬಹುನಿರೀಕ್ಷಿತ ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ಗುಂಪು ಹಂತದಲ್ಲಿ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿ ಹೇಗಿದೆ? ಯಾವಾಗ-ಎಲ್ಲಿ-ಯಾರ ವಿರುದ್ಧ ಮೈದಾನಕ್ಕಿಳಿಯಲಿದೆ ಎಂಬುದರ ವಿವರ ಇಲ್ಲಿದೆ.
- India T20 World Cup Fixtures : ಬಹುನಿರೀಕ್ಷಿತ ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ಗುಂಪು ಹಂತದಲ್ಲಿ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿ ಹೇಗಿದೆ? ಯಾವಾಗ-ಎಲ್ಲಿ-ಯಾರ ವಿರುದ್ಧ ಮೈದಾನಕ್ಕಿಳಿಯಲಿದೆ ಎಂಬುದರ ವಿವರ ಇಲ್ಲಿದೆ.
(1 / 5)
India T20 World Cup Fixtures: ಟಿ20 ವಿಶ್ವಕಪ್ ಟೂರ್ನಿ ಆಡಲು ಅಮೆರಿಕ ತಲುಪಿರುವ ಭಾರತ ತಂಡ, ನ್ಯೂಯಾರ್ಕ್ನಲ್ಲಿ ಅಭ್ಯಾಸ ಆರಂಭಿಸಿದೆ. ವಿಶ್ವಕಪ್ನ 'ಎ' ಗುಂಪಿನಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ತಂಡವು ಗ್ರೂಪ್ ಲೀಲ್ನಲ್ಲಿ ಪಾಕಿಸ್ತಾನ, ಅಮೆರಿಕ, ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಸೆಣಸಲಿದೆ. ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಜಂಟಿಯಾಗಿ ನಡೆದರೂ, ಟೀಮ್ ಇಂಡಿಯಾ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಯುಎಸ್ಎನಲ್ಲೇ ಆಡಲಿದೆ. ಟೂರ್ನಿಗೂ ಮುನ್ನ ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ ನೋಡೋಣ.
(2 / 5)
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಟಿ20 ವಿಶ್ವಕಪ್ ಅಭಿಯಾನವನ್ನು ಐರಿಶ್ ವಿರುದ್ಧದ ಹೋರಾಟದೊಂದಿಗೆ ಪ್ರಾರಂಭಿಸಲಿದೆ. ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಈ ಪಂದ್ಯ ನಡೆಯಲಿದೆ. ಕೆಲವು ದಿನಗಳ ಹಿಂದಷ್ಟೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಐರ್ಲೆಂಡ್ ಭಾರತಕ್ಕೂ ಪೈಪೋಟಿ ನೀಡುವ ನಿರೀಕ್ಷೆ ಇದೆ.
(3 / 5)
ಭಾರತ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಟಿ20 ವಿಶ್ವಕಪ್ ಬ್ಲಾಕ್ಬಸ್ಟರ್ ಭಾರತ-ಪಾಕಿಸ್ತಾನ ಪಂದ್ಯ ಜೂನ್ 9 ರಂದು ನಡೆಯಲಿದೆ. ಎರಡು ನೆರೆಯ ದೇಶಗಳು ಒಂದೇ ಗುಂಪಿನಲ್ಲಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪಂದ್ಯ ನ್ಯೂಯಾರ್ಕ್ನಲ್ಲೇ ನಡೆಯಲಿದೆ.
(4 / 5)
ರೋಹಿತ್ ಶರ್ಮಾ ಪಡೆ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ. ಜೂನ್ 12ರಂದು ಅಮೆರಿಕ ವಿರುದ್ಧ ಟಿ20 ಇತಿಹಾಸದಲ್ಲಿ ಮೊದಲ ಪಂದ್ಯ ಆಡಲಿದೆ. ಈ ಪಂದ್ಯವೂ ನ್ಯೂಯಾರ್ಕ್ನಲ್ಲೇ ನಡೆಯಲಿದೆ. ವಿಶ್ವಕಪ್ನಲ್ಲಿ ಯುಎಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ, ವಿಶ್ವಕಪ್ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.
ಇತರ ಗ್ಯಾಲರಿಗಳು