ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sachin Tendulkar Net Worth: ನಿವೃತ್ತಿಯಾಗಿ 10 ವರ್ಷವಾದ್ರೂ ಕುಗ್ಗಿಲ್ಲ ಸಚಿನ್​​ರ​ ವಾರ್ಷಿಕ ಆದಾಯ; ಪ್ರತಿ ನಿಮಿಷಕ್ಕೆ ಎಷ್ಟು ಗೊತ್ತೇ?

Sachin Tendulkar Net Worth: ನಿವೃತ್ತಿಯಾಗಿ 10 ವರ್ಷವಾದ್ರೂ ಕುಗ್ಗಿಲ್ಲ ಸಚಿನ್​​ರ​ ವಾರ್ಷಿಕ ಆದಾಯ; ಪ್ರತಿ ನಿಮಿಷಕ್ಕೆ ಎಷ್ಟು ಗೊತ್ತೇ?

  • ಕ್ರಿಕೆಟ್​ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್​ ತೆಂಡೂಲ್ಕರ್​​, ಕ್ರಿಕೆಟ್​ ನಿವೃತ್ತಿ ಘೋಷಿಸಿ 10 ವರ್ಷಗಳಾಗಿವೆ. ಆದರೂ ಅವರ ಬ್ರ್ಯಾಂಡ್​ ವ್ಯಾಲ್ಯೂ ಕುಸಿದಿಲ್ಲ ಎಂಬುದು ವಿಶೇಷ. ಅದರಲ್ಲೂ ಸಚಿನ್​​ ಪ್ರತಿ ನಿಮಿಷಕ್ಕೆ, ಪ್ರತಿ ದಿನಕ್ಕೆ, ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ? ಕೇಳಿದ್ರೆ ನಿಮಗೂ ಶಾಕ್​ ಆಗೋದು ಗ್ಯಾರಂಟಿ.

ಭಾರತದ ದಿಗ್ಗಜ ಕ್ರಿಕೆಟಿಗ ತೆಂಡೂಲ್ಕರ್ ಅವರು ಭಾರತದ ಶ್ರೀಮಂತ ಕ್ರಿಕೆಟಿಗ. ಅವರ ನಿವ್ವಳ ಆಸ್ತಿ ಮೌಲ್ಯ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತಲೂ ಹೆಚ್ಚಾಗಿದೆ. ಸೋಷಿಯಲ್​ ಮೀಡಿಯಾದಲ್ಲೂ ಹಣ ಸಂಪಾದಿಸುತ್ತಿರುವ ಸಚಿನ್​, ಹಲವಾರು ಕಂಪನಿಗಳ ರಾಯಭಾರಿಯೂ ಆಗಿದ್ದಾರೆ.
icon

(1 / 6)

ಗಳಿಸುವ ಆದಾಯದ ವಿಷಯದಲ್ಲೂ ಸಚಿನ್​ ತೆಂಡೂಲ್ಕರ್ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿ 10ವರ್ಷಗಳೇ ಕಳೆದರೂ ಅವರ ಬ್ರ್ಯಾಂಡ್​ ವ್ಯಾಲ್ಯೂ ಇನ್ನೂ ಕುಸಿದಿಲ್ಲ ಎಂಬುದು ವಿಶೇಷ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾದ ತೆಂಡೂಲ್ಕರ್ ಒಟ್ಟು ಆಸ್ತಿ 1,350 ಕೋಟಿ ರೂಪಾಯಿ ಇದೆ. ಜಾಗತಿಕ ಶ್ರೀಮಂತ ಕ್ರಿಕೆಟಿರ್​ಗಳಲ್ಲಿ ಒಬ್ಬರು.
icon

(2 / 6)

2019ರ ಅವಧಿಯಲ್ಲಿ ಮಾಸ್ಟರ್​ ಬ್ಲಾಸ್ಟರ್ ಬ್ರ್ಯಾಂಡ್ ಮೌಲ್ಯವು ಶೇ.15.8ರಷ್ಟು ಏರಿಕೆ ಕಂಡಿತ್ತು. ಈ ಮೂಲಕ 2019ರ ಡಫ್ ಮತ್ತು ಫೆಲ್ಪ್ಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಏಕೈಕ ನಿವೃತ್ತ ಸೆಲೆಬ್ರಿಟಿ ಎನಿಸಿದ್ದರು. 2020ರಲ್ಲಿ ತೆಂಡೂಲ್ಕರ್​​ರ ನಿವ್ವಳ ಮೌಲ್ಯ 834 ಕೋಟಿ ಇತ್ತು. 2021ರಲ್ಲಿ 1,080 ಕೋಟಿ, ಪ್ರಸ್ತುತ 1,350 ಕೋಟಿಗೆ ತಲುಪಿದೆ.
icon

(3 / 6)

ಬಿಎಂಡಬ್ಲ್ಯೂ ಸೇರಿದಂತೆ ಪ್ರಮುಖ ಪ್ರತಿಷ್ಠಿತ ಕಂಪನಿಗಳ ರಾಯಭಾರಿಯೂ ಆಗಿರುವ ಸಚಿನ್​ ತೆಂಡೂಲ್ಕರ್​, ಇದರಿಂದಲೇ 20 ರಿಂದ 22 ಕೋಟಿ ಸಂಪಾದಿಸುತ್ತಾರೆ. 2016ರಲ್ಲಿ ಬಟ್ಟೆ ಉದ್ಯಮಕ್ಕೂ ಕಾಲಿಟ್ಟಿದ್ದರು ಎಂಬುದು ವಿಶೇಷ. ಟ್ರೂ ಬ್ಲೂ ಬ್ರ್ಯಾಂಡ್‌ ಮೂಲಕ ಬಟ್ಟೆ ಉದ್ಯಮ ನಡೆಸುವ ಲಿಟಲ್​ ಮಾಸ್ಟರ್​​​, 2019ರಲ್ಲಿ ಟ್ರೂ ಬ್ಲೂ ಅನ್ನು ಯುಎಸ್ ಮತ್ತು ಇಂಗ್ಲೆಂಡ್‌ನಲ್ಲಿ ಕೂಡ ವಿಸ್ತರಿಸಿದ್ದರು.
icon

(4 / 6)

ಅಲ್ಲದೆ, ಆಹಾರ ಉದ್ಯಮದಲ್ಲೂ ಸಚಿನ್​ ಕಾಲಿಟ್ಟಿದ್ದಾರೆ. ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ರೆಸ್ಟೋರೆಂಟ್​ಗಳನ್ನು ಹೊಂದಿದ್ದಾರೆ. ಮನರಂಜನೆ, ತಂತ್ರಜ್ಞಾನ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಸಚಿನ್ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಬಂಗಲೆಯ ಹೊಂದಿದ್ದಾರೆ. ಅದರ ಅಂದಾಜು ವೆಚ್ಚ 100 ಕೋಟಿ. 2000ರಲ್ಲಿ 39 ಕೋಟಿ ಈ ಬಂಗಲೆಯನ್ನು ಖರೀದಿಸಿದ್ದರು.
icon

(5 / 6)

ಇಂಗ್ಲೆಂಡ್‌ನ ಲಂಡನ್‌ನಲ್ಲೂ ಸಚಿನ್ ಅವರಿಗೆ ಸ್ವಂತ ಮನೆಯಿದೆ. ಲೆಕ್ಕವಿಲ್ಲದಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸಚಿನ್‌ 20 ಕೋಟಿಗೂ ಹೆಚ್ಚು ಮೌಲ್ಯದ 10 ಕಾರುಗಳಿವೆ. ಇಷ್ಟೊಂದು ಶ್ರೀಮಂತನಾಗಿರುವ ಸಚಿನ್‌ ತಿಂಗಳಿಗೆ 4 ಕೋಟಿ ಆದಾಯ ಗಳಿಸುತ್ತಾರೆ. ಅಂದರೆ ದಿನಕ್ಕೆ 13.33 ಲಕ್ಷ ಸಂಪಾದಿಸುತ್ತಾರೆ. ಪ್ರತಿ ನಿಮಿಷಕ್ಕೆ 55 ರಿಂದ 56 ಸಾವಿರ ಸಂಪಾದಿಸುತ್ತಾರೆ.
icon

(6 / 6)

ಇತರ ಗ್ಯಾಲರಿಗಳು