ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಬೃಹತ್ ಅಂತರದ ಗೆಲುವು; ಆಸ್ಟ್ರೇಲಿಯಾ, ಪಾಕಿಸ್ತಾನ ಹಿಂದಿಕ್ಕಿದ ಭಾರತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಬೃಹತ್ ಅಂತರದ ಗೆಲುವು; ಆಸ್ಟ್ರೇಲಿಯಾ, ಪಾಕಿಸ್ತಾನ ಹಿಂದಿಕ್ಕಿದ ಭಾರತ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಬೃಹತ್ ಅಂತರದ ಗೆಲುವು; ಆಸ್ಟ್ರೇಲಿಯಾ, ಪಾಕಿಸ್ತಾನ ಹಿಂದಿಕ್ಕಿದ ಭಾರತ

  • ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ 100 ರನ್‌ಗಳ ಜಯ ಸಾಧಿಸಿತು. ಉಭಯ ತಂಡಗಳ ಇನ್ನಿಂಗ್ಸ್‌ನಲ್ಲಿ 368 ರನ್ ಒಟ್ಟಾದವು. ಇದು ಜಿಂಬಾಬ್ವೆ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಸ್ಕೋರ್. ಭಾರತ 234 ರನ್ ಗಳಿಸಿದರೆ, ಜಿಂಬಾಬ್ವೆ 134 ರನ್ ಮಾತ್ರ ಪೇರಿಸಿತು. ಗೆಲುವಿನೊಂದಿಗೆ ಭಾರತ ವಿಶೇಷ ದಾಖಲೆ ಬರೆಯಿತು.

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 13 ರನ್‌ಗಳ ಸೋಲನುಭವಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್‌ ಮಾಡಿದ ಟೀಮ್ ಇಂಡಿಯಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿತು. ಹರಾರೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 100 ರನ್‌ಗಳ ಬೃಹತ್ ಅಂತರದಿಂದ‌ ಗೆದ್ದ ಭಾರತ ವಿಶೇಷ ದಾಖಲೆ ಬರೆಯಿತು.
icon

(1 / 5)

ಟಿ20 ಕ್ರಿಕೆಟ್‌ನಲ್ಲಿ ಭಾರತ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆದ್ದಿರುವುದು ಇದು ಐದನೇ ಬಾರಿ. ಆ ಮೂಲಕ ಟೀಮ್‌ ಇಂಡಿಯಾ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮೀರಿಸಿದೆ. ಈ ಎರಡು ತಂಡಗಳು ತಲಾ 4 ಬಾರಿ ಟಿ20ಯಲ್ಲಿ 100ಕ್ಕಿಂತ ಹೆಚ್ಚು ರನ್‌ಗಳಿಂದ ಗೆದ್ದಿವೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿವೆ. ಇವೆರಡೂ ತಲಾ ಮೂರು ಬಾರಿ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆದ್ದಿದೆ.
icon

(2 / 5)

ಜಿಂಬಾಬ್ವೆ ಮತ್ತೊಮ್ಮೆ ಟಿ20ಯಲ್ಲಿ ಅತಿ ಹೆಚ್ಚು ಅಂತರದ ಸೋಲಿನ ದಾಖಲೆಯನ್ನು ನಿರ್ಮಿಸಿದೆ. ಜಿಂಬಾಬ್ವೆ 100 ರನ್ ಗಳಿಂದ ಸೋತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2018ರಲ್ಲಿ ಹರಾರೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ 100 ರನ್ ಗಳಿಂದ ಸೋತಿತ್ತು. ಭಾರತದ ವಿರುದ್ಧ ತಂಡ ಸೋತ ಬೃಹತ್‌ ಇಂತರ ಇದು. 2011ರಲ್ಲಿ ಹರಾರೆಯಲ್ಲಿ ಪಾಕಿಸ್ತಾನ ವಿರುದ್ಧ 85 ರನ್ ಹಾಗೂ 2012ರಲ್ಲಿ ಹಂಬಂಟೋಟದಲ್ಲಿ 82 ರನ್ ಗಳಿಂದ ಸೋತಿತ್ತು.
icon

(3 / 5)

ಸದ್ಯ ಸರಣಿಯ ಎರಡನೇ ಪಂದ್ಯದಲ್ಲಿ ಎರಡೂ ತಂಡಗಳ ಇನ್ನಿಂಗ್ಸ್‌ನಲ್ಲಿ 368 ರನ್ ದಾಖಲಾಯ್ತು. ಇದು ಜಿಂಬಾಬ್ವೆ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಭಾರತ 234 ರನ್ ಗಳಿದರೆ ಜಿಂಬಾಬ್ವೆ 134 ರನ್ ಗಳಿಸಿತು.
icon

(4 / 5)

ಸದ್ಯ ಸರಣಿಯ ಎರಡನೇ ಪಂದ್ಯದಲ್ಲಿ ಎರಡೂ ತಂಡಗಳ ಇನ್ನಿಂಗ್ಸ್‌ನಲ್ಲಿ 368 ರನ್ ದಾಖಲಾಯ್ತು. ಇದು ಜಿಂಬಾಬ್ವೆ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಭಾರತ 234 ರನ್ ಗಳಿದರೆ ಜಿಂಬಾಬ್ವೆ 134 ರನ್ ಗಳಿಸಿತು.(AFP)

ಪಂದ್ಯದಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ 47 ಎಸೆತಗಳಲ್ಲಿ 100 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಗಳಿಸಿದರೆ, ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಅಂತಿಮವಾಗಿ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 100 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ
icon

(5 / 5)

ಪಂದ್ಯದಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ 47 ಎಸೆತಗಳಲ್ಲಿ 100 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಗಳಿಸಿದರೆ, ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಅಂತಿಮವಾಗಿ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 100 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ(PTI)

ಇತರ ಗ್ಯಾಲರಿಗಳು