ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್: ಮುಂಬೈನಲ್ಲಿ ಅಭಿಮಾನಿಗಳ ಸಮುದ್ರದಲ್ಲಿ 11 ಮಂದಿಗೆ ಗಾಯ, ಆಸ್ಪ್ರತೆಗೆ ದಾಖಲು
- Team India’s Victory Parade: ಟೀಮ್ ಇಂಡಿಯಾ ಟಿ20 ವಿಜಯೋತ್ಸವದ ಮೆರವಣಿಗೆಯಲ್ಲಿ ಮರೀನ್ ಡ್ರೈವ್ ಮತ್ತು ದಕ್ಷಿಣ ಮುಂಬೈನ ಇತರ ಭಾಗಗಳಲ್ಲಿ ಜನದಟ್ಟಣೆಯಿಂದಾಗಿ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ.
- Team India’s Victory Parade: ಟೀಮ್ ಇಂಡಿಯಾ ಟಿ20 ವಿಜಯೋತ್ಸವದ ಮೆರವಣಿಗೆಯಲ್ಲಿ ಮರೀನ್ ಡ್ರೈವ್ ಮತ್ತು ದಕ್ಷಿಣ ಮುಂಬೈನ ಇತರ ಭಾಗಗಳಲ್ಲಿ ಜನದಟ್ಟಣೆಯಿಂದಾಗಿ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ.
(1 / 9)
ಮುಂಬೈನಲ್ಲಿ ನಡೆದ ಟಿ-20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಜಯೋತ್ಸವದ ಪರೇಡ್ನ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ನಂತರ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ.
(2 / 9)
ಗಾಯಗೊಂಡ ಅಭಿಮಾನಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಕೆಲವರು ತಲೆತಿರುಗಿ ಬಿದ್ದವರು. ಈ ಪೈಕಿ 9 ಮಂದಿಯನ್ನು ಸರ್ಕಾರಿ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.(PTI)
(3 / 9)
ವಿಪರೀತ ಜನಸಂದಣಿಯಿಂದ ಗಾಯಗಳ ಜೊತೆಗೆ ಉಸಿರಾಟದ ತೊಂದರೆಯನ್ನೂ ಅನುಭವಿಸಿದ್ದಾರೆ. ದಾಖಲಾದ ಎಲ್ಲಾ ವ್ಯಕ್ತಿಗಳು ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಜೆಜೆ ಗ್ರೂಪ್ ಆಫ್ ಆಸ್ಪತ್ರೆಗಳ ಡೀನ್ ದೃಢಪಡಿಸಿದ್ದಾರೆ.(AFP)
(4 / 9)
ಒಬ್ಬ ಅಭಿಮಾನಿಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಬಳಿಯ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಆರೈಕೆಯ ನಂತರ ಹೋಗಲು ಅನುಮತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(PTI)
(5 / 9)
ಮತ್ತೊಬ್ಬ ವ್ಯಕ್ತಿಯನ್ನು ದಕ್ಷಿಣ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ.(PTI)
(6 / 9)
ಜುಲೈ 4ರ ಗುರುವಾರ ಸಂಜೆ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಮರೀನ್ ಡ್ರೈವ್ಗೆ ಆಗಮಿಸಿದ್ದರು.(AFP)
(7 / 9)
ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಕಾರಣ ದೊಡ್ಡ ಮಟ್ಟದ ಭದ್ರತೆ ಒದಗಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಮರೀನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ವಿಸ್ತಾರವಾದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.(REUTERS)
(8 / 9)
ವಿಜಯೋತ್ಸವದ ಮೆರವಣಿಗೆಯಲ್ಲಿ ಪ್ರೇಕ್ಷಕರನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ತಮ್ಮ ಪೊಲೀಸ್ ವಿಭಾಗವನ್ನು ಶ್ಲಾಘಿಸಿದ್ದಾರೆ.(PTI)
ಇತರ ಗ್ಯಾಲರಿಗಳು