Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು

Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು

  • Cricketers Expensive House: ಕ್ರಿಕೆಟ್​ ಅಥವಾ ಅದರ ಹೊರತಾಗಿ ನೂರಾರು ಕೋಟಿ ದುಡಿಯುವ ಭಾರತದ ತಾರಾ ಕ್ರಿಕೆಟಿಗರು ಇರುವುದು ಅರಮನೆಯನ್ನೇ ನಾಚಿಸುವಂತಹ ಭವ್ಯ ಬಂಗೆಗಳಲ್ಲಿ. ಹಾಗಿದ್ದರೆ ಕ್ರಿಕೆಟಿಗರು ಇರುವ ಮನೆಯ ವೆಚ್ಚವೆಷ್ಟು? ಎಲ್ಲಿವೆ, ಹೇಗಿವೆ ಎಂಬುದನ್ನು ಈ ಮುಂದೆ ನೋಡೋಣ.

ಭಾರತದ ಕ್ರಿಕೆಟಿಗರು, ಅತಿದೊಡ್ಡ ಸೂಪರ್​ಸ್ಟಾರ್​ಗಳು. ಒಂದು ಕಾಲದಲ್ಲಿ ಏನೂ ಇಲ್ಲದವರು ಇಂದು ಸಾಮ್ರಾಜ್ಯ ನಿರ್ಮಿಸಿದ್ದಾರೆ. ಕ್ರಿಕೆಟ್​ ಅಥವಾ ಅದರ ಹೊರತಾಗಿ ನೂರಾರು ಕೋಟಿ ದುಡಿಯುವ ಈ ತಾರಾ ಕ್ರಿಕೆಟಿಗರು ಇರುವುದು ಅರಮನೆಯನ್ನೇ ನಾಚಿಸುವಂತಹ ಭವ್ಯ ಬಂಗೆಗಳಲ್ಲಿ. ಹಾಗಿದ್ದರೆ ಕ್ರಿಕೆಟಿಗರು ಇರುವ ಮನೆಯ ವೆಚ್ಚವೆಷ್ಟು? ಎಲ್ಲಿವೆ, ಹೇಗಿವೆ ಎಂಬುದನ್ನು ಈ ಮುಂದೆ ನೋಡೋಣ.
icon

(1 / 11)

1. ಎಂಎಸ್​ ಧೋನಿ: ಮಾಹಿ ಅವರ ಮನೆ ಭವ್ಯ ಬಂಗಲೆ. ಇದು ರಾಂಚಿಯಲ್ಲಿರುವ ಅವರ 7 ಎಕರೆ ತೋಟದ ಮನೆಯಲ್ಲಿದೆ. ಈ ಐಷಾರಾಮಿಯ ಮನೆಯ ಮೌಲ್ಯವು 100 ಕೋಟಿ ಎಂದು ಅಂದಾಜು ಮಾಡಲಾಗಿದೆ. ಈ ಬಂಗಲೆಯಲ್ಲಿ ಈಜುಕೊಳ, ಉದ್ಯಾನ, ಒಳ ಕ್ರೀಡಾಂಗಣ, ಜಿಮ್ನಾಷಿಯಂ, ಮನೆಯ ಒಳಗೆ ಹಸಿರು ಥೀಮ್ ಫಾರ್ಕ್, ಕಾರು-ಬೈಕ್ ನಿಲ್ಲಿಸಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.. ಸೇರಿದಂತೆ ಹಲವು ವಿಶೇಷತೆಗಳವೆ. ಭಿನ್ನ, ವೈವಿದ್ಯಮಯವಾಗಿರುವ ಈ ಮನೆಗೆ ಕೈಲಾಸಪತಿ ಎಂದು ಹೆಸರಿಡಲಾಗಿದೆ.
icon

(2 / 11)

2. ವಿರಾಟ್ ಕೊಹ್ಲಿ: 2016ರಲ್ಲಿ ವಿರಾಟ್ ಕೊಹ್ಲಿ ಮುಂಬೈನ ಸಿ-ವಿಂಗ್​​​ನ ಮಹಡಿಯ ಓಂಕಾರ್-1973 ಟವರ್ಸ್​​ನಲ್ಲಿ 34 ಕೋಟಿ ನೀಡಿ ಹೊಸ ಮನೆ ಖರೀದಿಸಿದ್ದರು. ಅದಾಗಿಯೂ ಕಿಂಗ್ ಕೊಹ್ಲಿ, ಹರಿಯಾಣದ ಗುರುಗ್ರಾಮದಲ್ಲಿ ಸೊಗಸಾದ ಬಂಗಲೆಯೊಂದನ್ನು ನಿರ್ಮಿಸಿದ್ದಾರೆ. 10 ಸಾವಿರ ಚದರ ಅಡಿಯಲ್ಲಿ ಈ ಭವ್ಯ ಬಂಗಲೆ ನಿರ್ಮಾಣವಾಗಿದೆ. ಇದರ ವೆಚ್ಚ 80 ಕೋಟಿ ಎಂದು ಅಂದಾಜಿಸಲಾಗಿದೆ. ಈಜುಕೊಳ, ಡ್ರಾಯಿಂಗ್​ ರೂಮ್ ಸೇರಿದಂತೆ ವಿವಿಧ ಕೋಣೆಗಳು ಇವೆ. ಇದು ಕೇವಲ ಮನೆಯಲ್ಲ ಸ್ವರ್ಗ.
icon

(3 / 11)

3. ಯುವರಾಜ್ ಸಿಂಗ್: ಆಲ್​ರೌಂಡರ್​ ಯುವಿ ಮುಂಬೈನಲ್ಲಿ ವಾಸಿಸುತ್ತಿದ್ದು, ವರ್ಲಿಯಲ್ಲಿರುವ 16 ಸಾವಿರ ಚದರ ಅಡಿ ಅಪಾರ್ಟ್​ಮೆಂಟ್​ನಲ್ಲಿ ಎರಡು ಫ್ಲಾಟ್​ಗಳ ಸಂಯೋಜನೆಯಾಗಿದೆ. 2013ರಲ್ಲಿ 64 ಕೋಟಿಗೆ ಖರೀದಿಸಿದ್ದರು. ವಿರಾಟ್​  ಓಂಕಾರ್-1973 ಟವರ್ಸ್​​ನಲ್ಲಿ 35ನೇ ಮಹಡಿಯಲ್ಲಿದ್ದರೆ, ಯುವರಾಜ್​ ಸಿಂಗ್​ 29ನೇ ಮಹಡಿಯಲ್ಲಿದ್ದಾರೆ. ಐಷಾರಾಮಿ ಬಂಗಲೆಯು ಎಲ್ಲವನ್ನೂ ಒಳಗೊಂಡಿದ್ದು, ಅರೇಬಿಯನ್​ ಸಮುದ್ರದ ವೀವ್ಸ್​ ಅದ್ಭುತವಾಗಿ ಕಾಣುತ್ತದೆ.
icon

(4 / 11)

 4. ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್​ ಸಚಿನ್ ಅವರ ಮನೆಯು ಮುಂಬೈನ ಬಾಂದ್ರಾದಲ್ಲಿದೆ. ಈ ಅದ್ಧೂರಿ ಮನೆಯ ವಿಶಾಲವು 6000 ಚದರ ಅಡಿಯಲ್ಲಿದೆ. ಅರಮನೆಯನ್ನೇ ನಾಚಿಸುವಷ್ಟು ಅದ್ಭುತವಾದ ಈ ಬಂಗಲೆಯನ್ನು 2007ರಲ್ಲಿ ಖರೀದಿಸಿದ್ದರು. ಮೊದಲು ಪಾರ್ಸಿ ಕುಟುಂಬಕ್ಕೆ ಸೇರಿದವರು ಈ ಬಂಗಲೆ ನಿರ್ಮಿಸಿದರು. 1926ರಲ್ಲಿ ನಿರ್ಮಿಸಲಾಗಿದೆ. 2007ರಲ್ಲಿ ಖರೀದಿಸಿದರೂ ಐಷರಾಮಿ ಮನೆಯಾಗಿ ಸಿದ್ಧಪಡಿಸಿಲು ನಾಲ್ಕು ವರ್ಷಗಳ ಕಾಲ ಸಮಯ ತೆಗೆದುಕೊಂಡಿತು. 2011ರಲ್ಲಿ ಇಡೀ ಕುಟುಂಬವು ಸ್ಥಳಾಂತರಗೊಂಡಿತು. 38 ಕೋಟಿಗೆ ಖರೀದಿಸಿದ್ದರು.
icon

(5 / 11)

5. ರೋಹಿತ್​ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಅಹುಜಾ ಟವರ್ಸ್​​ನಲ್ಲಿರುವ 6000 ಚದರ ಅಡಿ ಅಪಾರ್ಟ್​ಮೆಂಟ್​ ಇದಾಗಿದೆ. 2015ರಲ್ಲಿ ರಿತಿಕಾ ಸಜ್ಜೇಶ್ ಅವರನ್ನು ಮದುವೆಯಾದಾಗ ಈ ಅಪಾರ್ಟ್​ಮೆಂಟ್​ ಖರೀದಿಸಿದ್ದರು. ಇದು ಆಟೋಮೇಷನ್ ವ್ಯವಸ್ಥೆ ಹೊಂದಿದೆ. ಅಂದರೆ, ವಾಯ್ಸ್​ ಕಮಾಂಡ್ ಮತ್ತು ಟಚ್​ ಪ್ಯಾನಲ್ ಮೂಲಕ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಈ ಅಹುಜಾ ಟವರ್ಸ್ 53 ಅಂತಸ್ತಿನ ಕಟ್ಟಡವಾಗಿದ್ದು, 5 ಸ್ಟಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದೆ.
icon

(6 / 11)

6. ಸುನಿಲ್ ಗವಾಸ್ಕರ್: 2017ರಲ್ಲಿ ಉತ್ತರ ಗೋವಾದ ಅಸ್ಸಾಗಾಂವ್​​ನಲ್ಲಿ ವಿಸ್ತಾರವಾದ 5000 ಚದರ ಅಡಿ ವಿಲ್ಲಾವನ್ನು ಗವಾಸ್ಕರ್ ಖರೀದಿಸಿದ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ವಿಲ್ಲಾವು ಪುರಾತನ ಪಿಠೋಪಕರಣಗಳು,    ಆಧುನಿಕ ಉಪಕರಣಗಳು ಇವೆ. ಮನೆಯ ಹೊರ ಭಾಗದಲ್ಲಿ ಹುಲ್ಲು ಹಾಸಿನಿಂದ ಆವೃತವಾಗಿದೆ. ಈ ಐಷಾರಾಮಿ ವಿಲ್ಲಾದ ಬೆಲೆ 20 ಕೋಟಿ ಎಂಬುದು ವಿಶೇಷ.
icon

(7 / 11)

7. ಸುರೇಶ್ ರೈನಾ: ಘಾಜಿಯಾಬಾದ್​ನ ರಾಜ್​ ನಗರದಲ್ಲಿರುವ ಅರಮನೆಗೆ ಹೋಲುವ ಭವ್ಯ ಬಂಗಲೆ ಹೊಂದಿರುವ ಸುರೇಶ್ ರೈನಾ, ಭಿನ್ನ, ವಿಭಿನ್ನವಾಗಿ ಕಟ್ಟಿಸಿದ್ದಾರೆ. ಈ ಐಷಾರಾಮಿ ಕಟ್ಟಡ 18 ಕೋಟಿ ವೆಚ್ಚದ್ದು. ಮನೆಯ ಹೊರ ಭಾಗದಲ್ಲಿ ಹಚ್ಚ ಹರಿಸಿನಿಂದ ಕೂಡಿದೆ. ಎಲ್ಲವೂ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ಮನೆಯು ಕಾಟೇಜ್​ ತರಹದ್ದು ಆಗಿದೆ.
icon

(8 / 11)

8. ಸೌರವ್ ಗಂಗೂಲಿ: ಕೋಲ್ಕತ್ತಾ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರು ಬೆಹಲ್ಲಾದಲ್ಲಿರುವ ಭವ್ಯವಾದ ಅರಮನೆಯು ಅತಿದೊಡ್ಡ ಖಾಸಗಿ ಮಹಲ್​ಗಳಲ್ಲಿ ಒಂದು. ಇದರ ಅಂದಾಜು ಬೆಲೆ 10 ಕೋಟಿ. ಮೂರು ತಲೆ ಮಾರಿನವರು ಅಂದರೆ, 45 ವರ್ಷಗಳಿಂದಲೂ ಗಂಗೂಲಿ ಅವರ ಈ ಮನೆಯಲ್ಲಿ ಕುಟುಂಬ ನೆಲೆಸಿದೆ. ಗಂಗೂಲಿ ಅವರ ಬಹುಮಾನಗಳು, ಟ್ರೋಫಿಗಳು ಹಾಗೂ ಇತರೆ ಸ್ಮರಣಿಕೆಗಳನ್ನು ಪ್ರದರ್ಶಿಸುವ ಕೋಣೆಯನ್ನು ಅವರ ತಂದೆ ಚಂಡಿದಾಸ್ ಅವರೇ ವಿನ್ಯಾಸಗೊಳಿಸಿದ್ದಾರೆ.
icon

(9 / 11)

9. ರವೀಂದ್ರ ಜಡೇಜಾ: ಜಾಮ್​​ನಗರದ ಜಡ್ಡು, 4 ಅಂತಸ್ತಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ರಾಜಮನೆತನದ ವೈಭವದಿಂದ ಕೂಡಿರುವ ಈ ಮನೆಯಲ್ಲಿ ವಿಂಟೇಜ್​ ಉಪಕರಣಗಳೇ ಹೆಚ್ಚು. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಅತ್ಯಂತ ದುಬಾರಿ ಬೆಲೆಯದ್ದೇ ಆಗಿವೆ ಎಂಬುದು ವಿಶೇಷ. ರಾಜನ ಅರಮನೆಯ ನೋಟ ಬೀರುವ ಈ ಬಂಗಲೆಯ ವೆಚ್ಚು ಸುಮಾರು 10 ಕೋಟಿ ಎಂದು ಅಂದಾಜು ಮಾಡಲಾಗಿದೆ. ವಿಶೇಷವಾಗಿ ಅವರ ಮನೆಯ ಬಾಗಿಲು ಪ್ರಮುಖ ಆಕರ್ಷಣೆ.
icon

(10 / 11)

10. ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ: ಪಾಂಡ್ಯ ಸಹೋದರರದ್ದು ದುಬಾರಿ ಪೆಂಟ್​ಹೌಸ್. 6000 ಚದರ ಅಡಿ ವಿನ್ಯಾಸದ ಪೆಂಟ್​ಹೌಸ್, ಗುಜರಾತ್​​ನ ವಡೋದರಾದಲ್ಲಿರುವ ದೀಪವಳಿ ಪುರದಲ್ಲಿದೆ. ಕಟ್ಟದ ಕೊನೆಯ ಮಹಡಿ ಇದಾಗಿದ್ದು, 4 ಐಷಾರಾಮಿ ಫ್ಲಾಟ್​​ಗಳನ್ನು ಸಂಯೋಜಿಸಿ ನಿರ್ಮಿಸಲಾಗಿದೆ. ಪ್ರತಿಯೊಬ್ಬರ ಅಭಿರುಚಿಗೆ ಹೋಲುವಂತೆ ನಿರ್ಮಿಸಲಾಗಿದೆ. ಜಿಮ್, ಬಾಲ್ಕನಿ ಗಾರ್ಡನ್, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಹಲವು ಇವೆ.
icon

(11 / 11)

ಇತರ ಗ್ಯಾಲರಿಗಳು