ಭಾರತ vs ಬಾಂಗ್ಲಾದೇಶ; ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಟಾಪ್ 5 ಆಟಗಾರರಿವರು
- ಟಿ20 ವಿಶ್ವಕಪ್ 2024ರ 47ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ಜೂನ್ 22ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯದಲ್ಲಿ ಅಬ್ಬರಿಸಬಲ್ಲ ಹಾಗೂ ಗಮನ ಸೆಳೆಯುವ ಆಟಗಾರರು ಯಾರು ಎಂಬುದನ್ನು ನೋಡೋಣ.
- ಟಿ20 ವಿಶ್ವಕಪ್ 2024ರ 47ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ಜೂನ್ 22ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯದಲ್ಲಿ ಅಬ್ಬರಿಸಬಲ್ಲ ಹಾಗೂ ಗಮನ ಸೆಳೆಯುವ ಆಟಗಾರರು ಯಾರು ಎಂಬುದನ್ನು ನೋಡೋಣ.
(1 / 7)
ಟಿ20 ವಿಶ್ವಕಪ್ 2024ರ 47ನೇ ಪಂದ್ಯವು ಜೂನ್ 22ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಅಬ್ಬರಿಸಬಲ್ಲ ಆಟಗಾರರು ಯಾರು ಎಂಬುದನ್ನು ನೋಡೋಣ.
(2 / 7)
ಈ ಪಂದ್ಯದಲ್ಲಿ ಎಲ್ಲರ ಕಣ್ಣು ಸೂರ್ಯಕುಮಾರ್ ಯಾದವ್ ಮೇಲೆ ನೆಟ್ಟಿದೆ. ಟಿ20 ಸ್ವರೂಪದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿರುವ ಸೂರ್ಯ, ಕಳೆದೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈವರೆಗೆ ನಾಲ್ಕು ಪಂದ್ಯಗಳಲ್ಲಿ 44 ರನ್ ಸರಾಸರಿಯಲ್ಲಿ 112 ರನ್ ಗಳಿಸಿದ್ದಾರೆ. (ಚಿತ್ರ: ಎಎನ್ಐ)
(3 / 7)
ರಿಷಭ್ ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ಅಬ್ಬರಿಸುತ್ತಿದ್ದಾರೆ. ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅವರು ಬಾಂಗ್ಲಾದೇಶ ವಿರುದ್ಧ 50 ರನ್ ಗಳಿಸಿದ್ದರು. ಈಗ ಈ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ಬ್ಯಾಟ್ ಮತ್ತು ವಿಕೆಟ್ ಹಿಂದೆ ಮ್ಯಾಜಿಕ್ ಮಾಡುವುದು ಬಹುತೇಕ ಖಚಿತವಾಗಿದೆ. (ಚಿತ್ರ: ಎಎನ್ಐ)
(4 / 7)
ಜಸ್ಪ್ರೀತ್ ಬುಮ್ರಾ ಪ್ರಸ್ತುತ ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಎದುರಾಳಿ ಬ್ಯಾಟರ್‌ಗಳಿಗೆ ಚೆಂಡಿನಿಂದ ಕಾಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ 4 ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿದ್ದಾರೆ. ನಿರ್ಣಾಯಕ ವಿಕೆಟ್ ಕಬಳಿಸಿದ್ದಾರೆ. (ಚಿತ್ರ: ಎಎಫ್ ಪಿ)
(5 / 7)
ಭಾರತದ ವಿರುದ್ಧ ಆಡುವಾಗ ಶಕೀಬ್ ಅಲ್ ಹಸನ್ ಯಾವಾಗಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈಗ ಬಾಂಗ್ಲಾದೇಶದ ಈ ಅನುಭವಿ ಆಲ್ರೌಂಡರ್ ತಮ್ಮ ಪ್ರದರ್ಶನದಿಂದ ಟೀಮ್ ಇಂಡಿಯಾದ ಮೇಲೆ ಹೇಗೆ ಒತ್ತಡ ಹೇರುತ್ತಾರೆ ಎಂಬುದನ್ನು ಕಾದು ನೋಡಬೇಕು. (ಫೋಟೋ: ಗೆಟ್ಟಿ ಇಮೇಜಸ್ ವಯಾ ಎಎಫ್ ಪಿ)
(6 / 7)
ಬಾಂಗ್ಲಾದೇಶದ ಅಭಿಮಾನಿಗಳು ತೌಹಿದ್ ಹ್ರಿದೋಯ್ ಮೇಲೆ ಕಣ್ಣಿಡಲಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅವರು ಐದು ಇನ್ನಿಂಗ್ಸ್‌ಗಳಲ್ಲಿ 42.4ರ ಸರಾಸರಿಯಲ್ಲಿ 135 ರನ್ ಗಳಿಸಿದ್ದಾರೆ. (ಚಿತ್ರ: ಎಎಫ್ ಪಿ)
ಇತರ ಗ್ಯಾಲರಿಗಳು