ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಅರ್ಧಶತಕದೊಂದಿಗೆ ಹಲವು ದಾಖಲೆ ನಿರ್ಮಾಣ
- ಟಿ20 ವಿಶ್ವಕಪ್ 2024ರಲ್ಲಿ ಇದುವರೆಗೂ ಕಳಪೆ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಆ ಮೂಲಕ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ವಿರಾಟ್ ಏಕಾಂಗಿ ಹೋರಾಟ ನಡೆಸಿದರು. ಆ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
- ಟಿ20 ವಿಶ್ವಕಪ್ 2024ರಲ್ಲಿ ಇದುವರೆಗೂ ಕಳಪೆ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಆ ಮೂಲಕ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ವಿರಾಟ್ ಏಕಾಂಗಿ ಹೋರಾಟ ನಡೆಸಿದರು. ಆ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
(1 / 7)
ಟೂರ್ನಿಯಲ್ಲಿ ಇದುವರೆಗೂ 7 ಇನ್ನಿಂಗ್ಸ್‌ಗಳಲ್ಲಿ 75 ರನ್ ಮಾತ್ರ ಗಳಿಸಿದ್ದ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 76 ರನ್ ಸಿಡಿಸಿದ್ದಾರೆ. ಆ ಮೂಲಕ ಅನಿವಾರ್ಯ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಭಾರತದ ಪರ ಇದು ಅವರ ಗರಿಷ್ಠ ಮೊತ್ತವಾಗಿದೆ.
(PTI)(2 / 7)
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಅಂತ್ಯದ ಬಳಿಕ ವಿರಾಟ್ ಫಾರ್ಮ್ ಕುರಿತು ಮಾತನಾಡಿದ್ದ ಭಾರತದ ನಾಯಕ ರೋಹಿತ್ ಶರ್ಮಾ, ಅವರು ಫೈನಲ್ ಪಂದ್ಯಕ್ಕಾಗಿ ತಮ್ಮ ಆಟವನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಅದರಂತೆಯೇ ವಿರಾಟ್ ಸಿಡಿದಿದ್ದಾರೆ.
(REUTERS)(3 / 7)
ಭಾರತ ತಂಡವು 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಆಕರ್ಷಕ ಜೊತೆಯಾಟವಾಡಿದರು. ಇವರ ಆಟದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
(BCCI- X)(4 / 7)
ಕೊಹ್ಲಿ ಇನ್ನಿಂಗ್ಸ್ ಓಪನಿಂಗ್ ಮಾಡುವ ಬಗ್ಗೆ ಟೂರ್ನಿಯುದ್ದಕ್ಕೂ ಚರ್ಚೆಯ ಬಿರುಗಾಳಿ ಎದ್ದಿತ್ತು. ಫೈನಲ್ ದಿನದಂದು ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಪಂದ್ಯದಲ್ಲಿ ಒಟ್ಟು 59 ಎಸೆತ ಎದುರಿಸಿದ ವಿರಾಟ್, 76 ರನ್ ಕಲೆ ಹಾಕಿದರು. ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಸಿಡಿಸಿದ ಕೊಹ್ಲಿ, 2 ಆಕರ್ಷಕ ಸಿಕ್ಸರ್ ಸಿಡಿಸಿದರು.
(AFP)(5 / 7)
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇದು ವಿರಾಟ್ ಅವರ ಎರಡನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಶ್ರೀಲಂಕಾ ವಿರುದ್ಧದ 2014ರ ಫೈನಲ್ ಪಂದ್ಯದಲ್ಲಿ ಅವರು 77 ರನ್ ಸಿಡಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ಸೋತಿತ್ತು.
(BCCI-X)(6 / 7)
ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಆಟಗಾರನೊಬ್ಬ ಗಳಿಸಿದ ಐದನೇ ಗರಿಷ್ಠ ಮೊತ್ತ ಮೊತ್ತವಾಗಿದೆ. ಪೈನಲ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೇನ್ ವಿಲಿಯಮ್ಸನ್ (85) ಹೆಸರಲ್ಲಿದೆ.
(REUTERS)ಇತರ ಗ್ಯಾಲರಿಗಳು