ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ
- Virat Kohli Record: ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 33 ರನ್ ಗಳಿಸುವ ಮೂಲಕ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Virat Kohli Record: ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 33 ರನ್ ಗಳಿಸುವ ಮೂಲಕ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 5)
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಮೇ 22ರ ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024 ಎಲಿಮಿನೇಟರ್ ಪಂದ್ಯದಲ್ಲಿ 33 ರನ್ ಗಳಿಸಿದ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
(2 / 5)
ಐಪಿಎಲ್ ಇತಿಹಾಸದಲ್ಲಿ 8000 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ. ಈ ಮೈಲಿಗಲ್ಲನ್ನು ತಲುಪಲು ಕೊಹ್ಲಿಗೆ 29 ರನ್ಗಳ ಅಗತ್ಯ ಇತ್ತು. 252 ಐಪಿಎಲ್ ಪಂದ್ಯಗಳ ಪೈಕಿ 244 ಇನ್ನಿಂಗ್ಸ್ಗಳಲ್ಲಿ 8000 ರನ್ ಗಡಿ ದಾಟಿದ್ದಾರೆ. ಈ ಆರ್ಸಿಬಿ ಸ್ಟಾರ್ ಆಟಗಾರ ಹೊರತುಪಡಿಸಿದರೆ, ವಿಶ್ವದ ಬೇರೆ ಯಾವುದೇ ಬ್ಯಾಟ್ಸ್ಮನ್ ಈ ದಾಖಲೆ ಮಾಡಲು ಸಾಧ್ಯವಾಗಿಲ್ಲ.
(3 / 5)
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂತರ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ 7000 ರನ್ ಗಡಿ ದಾಟಲು ಸಾಧ್ಯವಾಗಿಲ್ಲ. ಧವನ್ 222 ಐಪಿಎಲ್ ಪಂದ್ಯಗಳ ಪೈಕಿ 221 ಇನ್ನಿಂಗ್ಸ್ಗಳಲ್ಲಿ 6769 ರನ್ ಗಳಿಸಿದ್ದಾರೆ.
(4 / 5)
ಕೊಹ್ಲಿ ಮತ್ತು ಧವನ್ ನಂತರ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, 252 ಇನ್ನಿಂಗ್ಸ್ಗಳಲ್ಲಿ 6628 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 4ನೇ ಸ್ಥಾನದಲ್ಲಿದ್ದು, 184 ಇನ್ನಿಂಗ್ಸ್ಗಳಲ್ಲಿ 6565 ರನ್ ಕಲೆ ಹಾಕಿದ್ದಾರೆ. ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದು, 205 ಪಂದ್ಯಗಳಲ್ಲಿ 200 ಇನ್ನಿಂಗ್ಸ್ಗಳಲ್ಲಿ 5528 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು