ಒಂದು ಟೂರ್ನಿ, 2 ಬಾರಿ ಡಕೌಟ್, ಕಳಪೆ ಸರಾಸರಿ; ಟಿ20 ವಿಶ್ವಕಪ್‌ನಲ್ಲಿ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ
- ಟಿ20 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ತೀರಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು ವಿಶ್ವಕಪ್‌ನಲ್ಲಿ ಆಡುತ್ತಿರುವ ವಿರಾಟ್, ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಶೂನ್ಯ ರನ್‌ಗೆ ಔಟಾದ ವಿರಾಟ್ ಅನಗತ್ಯ ದಾಖಲೆಯೊಂದರಲ್ಲಿ ಸ್ಥಾನ ಪಡೆದಿದ್ದಾರೆ.
- ಟಿ20 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ತೀರಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು ವಿಶ್ವಕಪ್‌ನಲ್ಲಿ ಆಡುತ್ತಿರುವ ವಿರಾಟ್, ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಶೂನ್ಯ ರನ್‌ಗೆ ಔಟಾದ ವಿರಾಟ್ ಅನಗತ್ಯ ದಾಖಲೆಯೊಂದರಲ್ಲಿ ಸ್ಥಾನ ಪಡೆದಿದ್ದಾರೆ.
(1 / 6)
2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡುತ್ತಿಲ್ಲ. ಭಾರತದ ಸ್ಟಾರ್ ಕ್ರಿಕೆಟಿಗ ಆಸ್ಟ್ರೇಲಿಯಾ ವಿರುದ್ಧ ಡಕ್ ಔಟ್ ಆಗಿದ್ದಾರೆ. ಟೂರ್ನಿಯಲ್ಲಿ ಇದು ಎರಡನೇ ಬಾರಿಗೆ ವಿರಾಟ್ ಶೂನ್ಯ ಸಂಪಾದನೆ ಮಾಡಿದ್ದಾರೆ. ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತೀಯ ಆರಂಭಿಕರ ಪೈಕಿ (ಕನಿಷ್ಠ ಐದು ಇನ್ನಿಂಗ್ಸ್) ಆಡಿ ಕಳಪೆ ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
(X)(2 / 6)
ಟಿ20 ವಿಶ್ವಕಪ್‌ನಲ್ಲಿ ಈ ಬಾರಿ ಆರಂಭಿಕನಾಗಿ ಆಡುತ್ತಿರುವ ವಿರಾಟ್ ಆರು ಪಂದ್ಯಗಳಲ್ಲಿ ಒಟ್ಟು 66 ರನ್ ಮಾತ್ರ ಗಳಿಸಿದ್ದಾರೆ. ಅವರು ಐರ್ಲೆಂಡ್ ವಿರುದ್ಧ ಒಂದು ರನ್ ಗಳಿಸಿದ್ದರು. ಆ ಬಳಿಕ ಪಾಕಿಸ್ತಾನದ ವಿರುದ್ಧ 4 ರನ್ ಗಳಿಸಿದರು. ಯುನೈಟೆಡ್ ಸ್ಟೇಟ್ಸ್ ವಿರುದ್ಧ ಖಾತೆ ತೆರೆಯದೆ ಔಟಾದರೆ, ಅಫ್ಘಾನಿಸ್ತಾನ ವಿರುದ್ಧ ಎರಡಂಕಿ ಮೊತ್ತ 24 ರನ್ ಗಳಿಸಿದರು. ಆ ಬಳಿಕ ಬಾಂಗ್ಲಾದೇಶ ವಿರುದ್ಧ 37 ರನ್ ಗಳಿಸಿದರು. ಇಂದು ಆಸ್ಟ್ರೇಲಿಯಾ ವಿರುದ್ಧ ಖಾತೆ ತೆರೆಯದೆ ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು.
(X)(3 / 6)
2024ರ ವಿಶ್ವಕಪ್‌ನಲ್ಲಿ ವಿರಾಟ್ ಅವರ ಸರಾಸರಿ 11ರಷ್ಟಿದೆ. ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಈವರೆಗೆ ಗೌತಮ್ ಗಂಭೀರ್ ಭಾರತೀಯ ಆರಂಭಿಕರ ಪೈಕಿ (ಕನಿಷ್ಠ ಐದು ಇನ್ನಿಂಗ್ಸ್) ಅತ್ಯಂತ ಕೆಟ್ಟ ಸರಾಸರಿ ಹೊಂದಿದ್ದರು. 2012ರ ವಿಶ್ವಕಪ್‌ನಲ್ಲಿ ಗಂಭೀರ್ 16ರ ಸರಾಸರಿ ಹೊಂದಿದ್ದರು. ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. 2016ರ ವಿಶ್ವಕಪ್‌ನಲ್ಲಿ ಅವರ ಸರಾಸರಿ 17.6ರಷ್ಟಿತ್ತು.
(X)(4 / 6)
ಈ ಕಳಪೆ ದಾಖಲೆಯಿಂದ ಹೊರಬರಲು ವಿರಾಟ್‌ಗೆ ಇನ್ನೂ ಅವಕಾಶವಿದೆ. ಭಾರತವು ಟಿ20 ವಿಶ್ವಕಪ್ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತ. ಸೆಮಿಫೈನಲ್‌ನಲ್ಲಿ ಅವರು ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಈ ಕಳಪೆ ದಾಖಲೆಯಿಂದ ಹೊರಬರಬಹುದು.
(5 / 6)
ಜೋಶ್ ಹೇಜಲ್ವುಡ್ ಎಸೆತದಲ್ಲಿ ವಿರಾಟ್ ಟಿಮ್ ಡೇವಿಡ್‌ಗೆ ಕ್ಯಾಚ್ ನೀಡಿ ಔಟಾದರು. ವಿರಾಟ್ ಐದು ಎಸೆತಗಳನ್ನು ಎದುರಿಸಿ ಡಕ್ ಔಟ್ ಆದರು.
(PTI)(6 / 6)
ಪ್ರಸಕ್ತ ಆವೃತ್ತಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿರುದ್ಧ ಭಾರತ ಪಂದ್ಯದಲ್ಲಿ T20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಗೋಲ್ಡನ್ ಡಕ್ ಆಗಿದ್ದರು. ಇಂದು 5 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಕೊಹ್ಲಿ ಮತ್ತು ನೆಹ್ರಾ ಮಾತ್ರ ಎರಡು ಬಾರಿ ಡಕೌಟ್ ಆದ ಕಳಪೆ ದಾಖಲೆ ನಿರ್ಮಿಸಿದ್ದಾರೆ. ಭಾರತದ ಮಾಜಿ ವೇಗಿ ನೆಹ್ರಾ 2010ರ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಡಕ್ ಔಟ್ ಆಗಿದ್ದರು.
(Surjeet Yadav)ಇತರ ಗ್ಯಾಲರಿಗಳು