ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ನ​ ಪ್ರತಿ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಸಾಧನೆ; ಚೇಸ್ ಮಾಸ್ಟರ್​ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತೇ ಸಲಾಂ

ಟಿ20 ವಿಶ್ವಕಪ್​ನ​ ಪ್ರತಿ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಸಾಧನೆ; ಚೇಸ್ ಮಾಸ್ಟರ್​ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತೇ ಸಲಾಂ

  • Virat Kohli : ಭಾರತದ ಸೂಪರ್​ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಪ್ರತಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ನೀಡಿರುವ ಪ್ರದರ್ಶನ ಹೇಗಿದೆ ಎಂಬುದರ ಕುರಿತು ವಿವರ ಇಲ್ಲಿದೆ.

ಟಿ20 ವಿಶ್ವಕಪ್​ನಲ್ಲಿ ಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಒಟ್ಟು 27 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 14 ಅರ್ಧಶತಕಗಳ ಸಹಿತ 1146 ರನ್ ಗಳಿಸಿದ್ದಾರೆ. 131.30ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿದ್ದಾರೆ. 103 ಬೌಂಡರಿ, 28 ಸಿಕ್ಸರ್ ಬಾರಿಸಿದ್ದಾರೆ. 
icon

(1 / 7)

ಹಾಗಾದರೆ ಕಿಂಗ್ ಕೊಹ್ಲಿ ಪ್ರತಿ ಟಿ20 ವಿಶ್ವಕಪ್​ ಆವೃತ್ತಿಯಲ್ಲೂ ಎಷ್ಟು ಸ್ಕೋರ್ ಮಾಡಿದ್ದಾರೆ, ಹೇಗೆಲ್ಲಾ ಪ್ರದರ್ಶನ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
icon

(2 / 7)

2012ರ ಟಿ20 ವಿಶ್ವಕಪ್​ನಲ್ಲಿ ವಿರಾಟ್ 185 ರನ್ ಸಿಡಿಸಿದ್ದರು. ಬ್ಯಾಟಿಂಗ್ ಸ್ಟ್ರೈಕ್​ರೇಟ್​ 122.51. ಬ್ಯಾಟಿಂಗ್ ಸರಾಸರಿ 46.25. ಆ ವರ್ಷ ಕೊಹ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ್ದರು.
icon

(3 / 7)

2014ರ ಟಿ20 ವಿಶ್ವಕಪ್​ನಲ್ಲಿ 106.33ರ ಬ್ಯಾಟಿಂಗ್ ಸರಾಸರಿ, 129ರ ಸ್ಟ್ರೈಕ್​ರೇಟ್​ನಲ್ಲಿ 4 ಅರ್ಧಶತಕ ಸಹಿತ 319 ರನ್ ಗಳಿಸಿ ತಂಡವನ್ನು ಫೈನಲ್​ಗೇರಿಸಿದ್ದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲೇ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.
icon

(4 / 7)

2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 273 ರನ್ ಗಳಿಸಿ ಭಾರತದ ಪ್ರಮುಖ ಸ್ಕೋರರ್​ ಆಗಿದ್ದ ವಿರಾಟ್ ಕೊಹ್ಲಿ, ಸ್ಟ್ರೈಕ್​ರೇಟ್ 146.77 ಆಗಿತ್ತು. 136.50ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದರು. ಮೂರು ಅರ್ಧಶತಕ ಸಿಡಿಸಿದ್ದರು.
icon

(5 / 7)

2021ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ 68 ರನ್ ಗಳಿಸಿದ್ದರು ವಿರಾಟ್. ಆದರೆ ಕಣಕ್ಕಿಳಿದಿದ್ದೇ ಕೆಲವೇ ಕೆಲವು ಪಂದ್ಯಗಳಲ್ಲಿ. ಒಂದು ಅರ್ಧಶತಕ ಸಿಡಿಸಿದ್ದರು.
icon

(6 / 7)

ಮರುವರ್ಷವೇ ನಡೆದ 2022ರ ಟಿ20 ವಿಶ್ವಕಪ್​ನಲ್ಲಿ 98.66ರ ಬ್ಯಾಟಿಂಗ್ ಸರಾಸರಿ ಮತ್ತು 136.40ರ ಸ್ಟ್ರೈಕ್​ರೇಟ್​ನಲ್ಲಿ 296 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದರು. 4 ಅರ್ಧಶತಕ ಸಿಡಿಸಿದ್ದರು.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು