ನಿವೃತ್ತಿಯಿಂದ ಹೊರಬಂದು ಟೆಸ್ಟ್ ತಂಡಕ್ಕೆ ಆಯ್ಕೆಯಾದ ವನಿಂದು ಹಸರಂಗ; ಎಸ್‌ಆರ್‌ಎಚ್ ತಂಡದ ಮೊದಲ 3 ಐಪಿಎಲ್ ಪಂದ್ಯಗಳಿಗೆ ಅಲಭ್ಯ
- ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಆರಂಭಿಕ ಮೂರು ಪಂದ್ಯಗಳನ್ನು ಆಲ್‌ರೌಂಡರ್ ವನಿಂದು ಹಸರಂಗ ಕಳೆದುಕೊಳ್ಳಲಿದ್ದಾರೆ. ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿರುವ ಲಂಕಾ ಆಟಗಾರ, ತಡವಾಗಿ ತಂಡಕ್ಕೆ ಮರಳಲಿದ್ದಾರೆ. ಮಾರ್ಚ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡಕ್ಕೆ ಆಯ್ಕೆಯಾಗಿರುವ ಹಸರಂಗ, ರಾಷ್ಟ್ರದ ಪರ ಆಡಬೇಕಿದೆ.

(1 / 6)
ಮಾರ್ಚ್ 22ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದ ಹಸರಂಗ, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. (AFP)
(2 / 6)
ಹಸರಂಗಾ ಶ್ರೀಲಂಕಾ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಸುದೀರ್ಘ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಆದರೂ, 26ರ ಹರೆಯದ ಶ್ರೀಲಂಕಾದ ಆಟಗಾರನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.(AFP)
(3 / 6)
ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಮಾರ್ಚ್ 22ರಿಂದ 26ರವರೆಗೆ ಸಿಲ್ಹೆಟ್‌ನಲ್ಲಿನಡೆಯಲಿದ್ದು, ಎರಡನೇ ಪಂದ್ಯ ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ಚಟ್ಟೋಗ್ರಾಮ್‌ನಲ್ಲಿ ನಡೆಯಲಿದೆ.(AFP)
(4 / 6)
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ವನಿಂದು ಹಸರಂಗ ಅವರನ್ನು ಎಸ್‌ಆರ್‌ಹೆಚ್ ತಂಡವು ಮೂಲ ಬೆಲೆ 1.5 ಕೋಟಿ ರೂಪಾಯಿಗೆ ಖರೀದಿಸಿದೆ. (AFP)
(5 / 6)
ಎಸ್‌ಆರ್‌ಏಚ್ ತಂಡವು ಮಾರ್ಚ್ 23ರಂದು ಕೋಲ್ಕತ್ತಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಲಿದೆ. ಮಾರ್ಚ್ 27ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಆ ಬಳಿಕ ಮಾರ್ಚ್ 31ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ಆಡಲಿದೆ.(AFP)
ಇತರ ಗ್ಯಾಲರಿಗಳು