ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೀಗ್​ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು; ಇದು ಬಾಂಗ್ಲಾ ತಂಡ ಪಡೆಯುವುದಕ್ಕಿಂತ ಕಡಿಮೆ

ಲೀಗ್​ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು; ಇದು ಬಾಂಗ್ಲಾ ತಂಡ ಪಡೆಯುವುದಕ್ಕಿಂತ ಕಡಿಮೆ

  • T20 World Cup 2024 Prize Money: 2024ರ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡಕ್ಕಿಂತ ಹೆಚ್ಚಿನ ಬಹುಮಾನದ ಮೊತ್ತ ಪಡೆಯಲಿದೆ? ಅದ್ಹೇಗೆ? ಇಲ್ಲಿದೆ ವಿವರ.

ಟಿ20 ವಿಶ್ವಕಪ್ 2024 ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಪಾಕಿಸ್ತಾನವು ವಿಫಲವಾಯಿತು. ಯುಎಸ್​ಎ ಮತ್ತು ಭಾರತದ ವಿರುದ್ಧ ಸತತ 2 ಪಂದ್ಯಗಳನ್ನು ಸೋತ ನಂತರ ಬಾಬರ್ ಪಡೆ, ಸತತ 2 ಪಂದ್ಯಗಳನ್ನು ಗೆದ್ದುಕೊಂಡಿತು. ಕೆನಡಾ - ಐರ್ಲೆಂಡ್ ಮಣಿಸಿದರೂ ಪಾಕ್ 4 ಅಂಕ ಪಡೆಯಲಷ್ಟೆ ಸಾಧ್ಯವಾಯಿತು. ಭಾರತ 7 ಅಂಕ, ಅಮೆರಿಕ 5 ಅಂಕ ಪಡೆದು ಮೊದಲ 2 ಸ್ಥಾನ ಪಡೆದು ಎ ಗುಂಪಿನಿಂದ ಸೂಪರ್​-8 ಸುತ್ತಿಗೆ ಅರ್ಹತೆ ಪಡೆಯಿತು. ಮೊದಲ ಸುತ್ತಿನಲ್ಲೇ ಹೊರಗುಳಿದ ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್​ನಿಂದ ಎಷ್ಟು ಹಣ ಸಿಗಲಿದೆ? ಇಲ್ಲಿದೆ ವಿವರ.
icon

(1 / 5)

ಟಿ20 ವಿಶ್ವಕಪ್​​ನ 4 ಗುಂಪುಗಳಲ್ಲಿ ಪೈಕಿ ಪ್ರತಿ ಗುಂಪಿನಲ್ಲಿ 3ನೇ ಸ್ಥಾನ ಪಡೆದ ತಂಡಗಳು 9 ರಿಂದ 12ರೊಳಗೆ ಸ್ಥಾನ ಪಡೆಯಲಿವೆ. 9, 10, 11, 12ನೇ ಸ್ಥಾನಗಳು ಪಡೆಯುವ ತಂಡಗಳು ತಲಾ 2.05 ಕೋಟಿ ಬಹುಮಾನ ಪಡೆಯಲಿದ್ದು, ಪಾಕಿಸ್ತಾನ ಕೂಡ ಇವುಗಳಲ್ಲಿ ಒಂದು ಸ್ಥಾನ ಖಚಿತಪಡಿಸಿಕೊಂಡಿದೆ.
icon

(2 / 5)

ಎ ಗುಂಪಿನಲ್ಲಿ ಪಾಕಿಸ್ತಾನ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ 2.05 ಕೋಟಿ ಬಹುಮಾನ ಸಿಗಲಿದೆ. ಪಾಕ್ ಮಾತ್ರವಲ್ಲ, ಸ್ಕಾಟ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸಹ ಇಷ್ಟೇ ಮೊತ್ತದ ಬಹುಮಾನ ಪಡೆಯಲಿವೆ.
icon

(3 / 5)

ಇದಲ್ಲದೆ, ಲೀಗ್​ನಲ್ಲಿ ಗೆದ್ದ ಪ್ರತಿ ಪಂದ್ಯಕ್ಕೆ ಐಸಿಸಿ 31,154 ಡಾಲರ್ ಹೆಚ್ಚುವರಿ ಬಹುಮಾನವನ್ನು ಐಸಿಸಿ ನೀಡುತ್ತಿದೆ. ಭಾರತೀಯ ಕರೆನ್ಸಿಯ ಮೊತ್ತ ಸುಮಾರು 26 ಲಕ್ಷ ರೂಪಾಯಿ. ಇದನ್ನು ಮ್ಯಾಚ್ ವಿನ್ನಿಂಗ್ ಬೋನಸ್ ಎಂದು ಕರೆಯಬಹುದು. ಲೀಗ್​​ನಲ್ಲಿ ಪಾಕಿಸ್ತಾನ 2 ಪಂದ್ಯ ಗೆದ್ದಿದ್ದು, 52 ಲಕ್ಷ ಹೆಚ್ಚುವರಿ ಬಹುಮಾನ ಪಡೆಯಲಿದೆ.
icon

(4 / 5)

ಸೂಪರ್ 8 ಹಂತದಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಪ್ರತಿ ತಂಡಕ್ಕೆ 3.18 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಸೆಮಿಫೈನಲ್ ಸೋತ ಪ್ರತಿ ತಂಡಕ್ಕೆ 6.55 ಕೋಟಿ ಬಹುಮಾನ ಸಿಗಲಿದೆ. ಇನ್ನು ಚಾಂಪಿಯನ್ ತಂಡಕ್ಕೆ 20 ಕೋಟಿ ರೂಪಾಯಿ, ರನ್ನರ್​​ಅಪ್ 10.64 ಕೋಟಿ ರೂ. ಬಹುಮಾನ ಸಿಗಲಿದೆ. ಪ್ರಸ್ತುತ ಪಾಕಿಸ್ತಾನಕ್ಕೆ ಹೋಲಿಸಿದರೆ ಸೂಪರ್-8 ಪ್ರವೇಶಿಸಿರುವ ಬಾಂಗ್ಲಾ ತಂಡಕ್ಕೆ ಹೆಚ್ಚಿನ ಬಹುಮಾನ ಸಿಗಲಿದೆ ಎಂಬುದು ವಿಶೇಷ.
icon

(5 / 5)

ಇತರ ಗ್ಯಾಲರಿಗಳು