Sajeevan Sajana: ಕೊನೆಯ ಎಸೆತಕ್ಕೆ ಸಿಕ್ಸರ್ ಸಿಡಿಸಿ ಮುಂಬೈ ಇಂಡಿಯನ್ಸ್ ಗೆಲ್ಲಿಸಿದ ಸಜೀವನ್ ಸಜನಾ ಯಾರು?
- Sajeevan Sajana: ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಉದ್ಘಾಟನಾ ಪಂದ್ಯವೇ ರೋಚಕ ಅಂತ್ಯ ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಣರೋಚಕ ಸಾಧಿಸಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಸಜೀವನ್ ಸಜನಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಂಡವವನ್ನು 4 ವಿಕೆಟ್‌ಗಳ ಜಯದತ್ತ ಮುನ್ನಡೆಸಿದರು.
- Sajeevan Sajana: ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಉದ್ಘಾಟನಾ ಪಂದ್ಯವೇ ರೋಚಕ ಅಂತ್ಯ ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಣರೋಚಕ ಸಾಧಿಸಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಸಜೀವನ್ ಸಜನಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಂಡವವನ್ನು 4 ವಿಕೆಟ್‌ಗಳ ಜಯದತ್ತ ಮುನ್ನಡೆಸಿದರು.
(1 / 8)
ಫೆಬ್ರವರಿ 23ರಂದು ನಡೆದ ಡಬ್ಲ್ಯೂಪಿಎಲ್ 2ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ, ಮುಂಬೈ ಜಯ ಸಾಧಿಸಿದೆ. ಕೊನೆಯ 1 ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ, ಸಜನಾ ಸಿಕ್ಸ್ ಸಿಡಿಸುವ ಮೂಲಕ ಪಂದ್ಯದ ಹೀರೋಯಿನ್ ಆದರು. WPLಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶ್ವದಾದ್ಯಂತ ಸುದ್ದಿಯಾದರು.(PTI)
(2 / 8)
ತಾವಾಡಿದ ಮೊದಲ ಡಬ್ಲ್ಯೂಪಿಎಲ್ ಪಂದ್ಯದಲ್ಲೇ, ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸದ ಸಜನಾ, ಡೆಲ್ಲಿಗೆ ಮತ್ತೊಂದು ಸೋಲುಣಿಸಿದರು. ಸ್ಪಿನ್ನರ್ ಆಲಿಸ್ ಕ್ಯಾಪ್ಸೆ ಅವರ ಎಸೆತಕ್ಕೆ ಸ್ಟ್ರೈಕ್ ಬಿಟ್ಟು ಬಂದು ಬಂದು ಬ್ಯಾಟ್ ಬೀಸಿದ ಅವರು, ನೇರವಾಗಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು.(PTI)
(3 / 8)
ಸಜೀವನ್ ಸಜನಾ ಕೇರಳದ ವಯನಾಡಿನವರು. ಇಲ್ಲಿನ ಮನಂತವಾಡಿಯಲ್ಲಿ 1995ರ 4 ಜನವರಿಯಲ್ಲಿ ಜನಿಸಿದ ಸಜನಾ, ಬಡತನದಲ್ಲೇ ಬೆಳೆದ ಪ್ರತಿಭೆ. ತಮ್ಮ ಆಸಕ್ತಿಯ ಕ್ರಿಕೆಟ್ ಪಯಣದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು ಎದುರಿಸಿ, ಈ ಹಂತಕ್ಕೆ ಬೆಳೆದಿದ್ದಾರೆ.(PTI)
(4 / 8)
ಎಸ್ ಸಜನಾ ಆಲ್‌ರೌಂಡರ್ ಆಗಿದ್ದಾರೆ. ಅವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮತ್ತು ಬಲಗೈಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. (PTI)
(5 / 8)
ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪದಾರ್ಪಣೆ ಮಾಡುವುದಕ್ಕೂ ಮೊದಲು ಅವರು ಕೇರಳ, ದಕ್ಷಿಣ ವಲಯ ಮತ್ತು ಭಾರತ ಎ ತಂಡಗಳನ್ನು ಪ್ರತಿನಿಧಿಸಿದ್ದಾರೆ.(PTI)
(6 / 8)
ಭಾರತ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿ ಮಿನ್ನು ಮಣಿ ನಂತರ, ಡಬ್ಲ್ಯೂಪಿಎಲ್ ಪ್ರವೇಶಿಸಿದ ಕುರಿಚಿಯಾ ಬುಡಕಟ್ಟಿನ ಎರಡನೇ ಆಟಗಾರ್ತಿ ಸಜನಾ. 10 ಲಕ್ಷ ರೂಪಾಯಿ ಮೂಲ ಬೆಲೆಗೆ ಹರಾಜಿಗೆ ನಿಂತ ಸಜನಾ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಹರಾಜಿನಲ್ಲಿ 15 ಲಕ್ಷಕ್ಕೆ ತನ್ನ ಬಳಗ ಸೇರಿಸಿಕೊಂಡಿತ್ತು.(PTI)
(7 / 8)
2019ರಲ್ಲಿ ಕೇರಳದ 23 ವರ್ಷದೊಳಗಿನ ತಂಡವನ್ನು ಟಿ20 ಸೂಪರ್ ಲೀಗ್ ಪ್ರಶಸ್ತಿಗೆ ಮುನ್ನಡೆಸಿದ್ದ ಸಜನಾ, ತಮ್ಮ ಉನ್ನತ ಮಟ್ಟದ ಕ್ರಿಕೆಟ್ ಬದುಕನ್ನು ಯಶಸ್ವಿಯಾಗಿ ಆರಂಭಿಸಿದರು. (PTI)
ಇತರ ಗ್ಯಾಲರಿಗಳು