ಕನ್ನಡ ಸುದ್ದಿ  /  Photo Gallery  /  Cricket News Who Is Utkarsha Pawar Csk Batter Ruturaj Gaikwads Wife To Be Who Played Cricket For Maharashtra Prs

Ruturaj Gaikwad Marriage: ಮಹಿಳಾ ಕ್ರಿಕೆಟರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಋತುರಾಜ್​ ಗಾಯಕ್ವಾಡ್; ಉತ್ಕರ್ಷ ಪವಾರ್​ ಯಾರು?

  • ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್​ (Ruturaj Gaikwads) ತನ್ನ ದೀರ್ಘಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಹಾಗಾದರೆ ಯಾರು ಆಕೆ? ಈ ವರದಿಯಲ್ಲಿ ನೋಡೋಣ.

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಅದ್ಧೂರಿ ತೆರೆ ಬಿದ್ದಿದೆ. ಸಿಎಸ್​ಕೆ ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಅದ್ಭುತ ಗೆಲುವಿನ ಹಿಂದೆ ಪ್ರಮುಖ ಆಟಗಾರರ ಶ್ರಮ ಅಡಗಿದೆ. ಅದರಲ್ಲಿ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಕೂಡ ಒಬ್ಬರು. ಈ ಬಾರಿ 590 ರನ್​ ಸಿಡಿಸಿದ್ದರು.
icon

(1 / 6)

ಐಪಿಎಲ್​​​ ಮತ್ತು ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಅದ್ಭುತ ಪರ್ಫಾಮೆನ್ಸ್​ ನೀಡಿದ ಹಿನ್ನೆಲೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮೀಸಲು ಆಟಗಾರನಾಗಿ ಭಾರತದ ತಂಡಕ್ಕೆ ಸೇರಿಸಲಾಗಿತ್ತು. ಆದರೆ ಮದುವೆ ಕಾರಣ ಹಿಂದೆ ಸರಿದರು. ಗಾಯಕ್ವಾಡ್​ ಬದಲಿಗೆ ಮತ್ತೊಬ್ಬ ಆಟಗಾರ ಯಶಸ್ವಿ ಜೈಸ್ವಾಲ್​​ಗೆ ಅವಕಾಶ ನೀಡಲಾಗಿದೆ.
icon

(2 / 6)

ಹಾಲಿ ಆವೃತ್ತಿಯ ಐಪಿಎಲ್​ ಫೈನಲ್​​ ಗೆದ್ದ ಬಳಿಕ ಸಂಭ್ರಮದಲ್ಲಿ ಋತುರಾಜ್​ ಜೊತೆಗೆ ಯುವತಿಯೊಬ್ಬರು ಕಾಣಿಸಿಕೊಂಡರು. ಆದರೆ ನೋಡಿದವರೆಲ್ಲ ಆಕೆ ಯಾರೂ ಎಂದು ಗೊಂದಲಕ್ಕೆ ಒಳಗಾದವರೇ ಹೆಚ್ಚು. ಅವರೇ ಋತುರಾಜ್​ರನ್ನು ಮದುವೆಯಾಗುವ ಯುವತಿ. ಆಕೆ ಹೆಸರು ಉತ್ಕರ್ಷ ಪವಾರ್​.
icon

(3 / 6)

ನಾಳೆ (ಜೂನ್​​​ 3) ವೈವಾಹಿಕ ಜೀವನಕ್ಕೇ ಕಾಲಿಡಲಿದ್ದಾರೆ. ಆಕೆ ಯಾರಂತ ನೋಡುವುದಾದ್ರೆ ಋತುರಾಜ್ ದೀರ್ಘಕಾಲದ ಗೆಳತಿ ಹಾಗೂ ಕ್ರಿಕೆಟರ್. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ಕರ್ಷ ಐಪಿಎಲ್ ಫೈನಲ್‌ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸಿದ್ರು.
icon

(4 / 6)

ಮಹಾರಾಷ್ಟ್ರದ ಪುಣೆಯವರಾದ ಉತ್ಕರ್ಷ ಪವಾರ್ ಜನಿಸಿದ್ದು, ಅಕ್ಟೋಬರ್ 13, 1998ರಂದು. ದೇಶೀಯ ಕ್ರಿಕೆಟ್​​ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ 24 ವರ್ಷದ ಉತ್ಕರ್ಷ, ಉತ್ತಮ ಆಲ್​ರೌಂಡರ್. ಬಲಗೈ ಬ್ಯಾಟರ್, ಬಲಗೈ ಬೌಲರ್​.
icon

(5 / 6)

ಸದ್ಯ 18 ತಿಂಗಳುಗಳಿಂದ ಉತ್ಕರ್ಷ ಕ್ರಿಕೆಟ್​ನಿಂದ ದೂರವಿದ್ದಾರೆ. ಪ್ರಸ್ತುತ ಅವರು ಪುಣೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸಸ್‌ನಲ್ಲಿ (INFS) ಓದುತ್ತಿದ್ದಾರೆ ಎಂದು ವರದಿಯಾಗಿದೆ. ಜೂನ್ 3 ರಂದು ಗಾಯಕ್ವಾಡ್ ಮತ್ತು ಉತ್ಕರ್ಷ ಮದುವೆಯಾಗಲಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು