IPL 2024: ಧೋನಿ ಬದಲಿಗೆ ಋತುರಾಜ್ ಗಾಯಕ್ವಾಡ್ ನಾಯಕನನ್ನಾಗಿ ನೇಮಿಸಿದ್ದು ಯಾಕೆ? ಸಿಎಸ್‌ಕೆ ಹೇಳಿದ್ದು ಹೀಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2024: ಧೋನಿ ಬದಲಿಗೆ ಋತುರಾಜ್ ಗಾಯಕ್ವಾಡ್ ನಾಯಕನನ್ನಾಗಿ ನೇಮಿಸಿದ್ದು ಯಾಕೆ? ಸಿಎಸ್‌ಕೆ ಹೇಳಿದ್ದು ಹೀಗೆ

IPL 2024: ಧೋನಿ ಬದಲಿಗೆ ಋತುರಾಜ್ ಗಾಯಕ್ವಾಡ್ ನಾಯಕನನ್ನಾಗಿ ನೇಮಿಸಿದ್ದು ಯಾಕೆ? ಸಿಎಸ್‌ಕೆ ಹೇಳಿದ್ದು ಹೀಗೆ

  • ಐಪಿಎಲ್‌ 2024ರ ಆವೃತ್ತಿಯಲ್ಲಿ ನೂತನ ನಾಯಕರ ಸಾಲಿಗೆ ಋತುರಾಜ್‌ ಗಾಯಕ್ವಾಡ್‌ ಸೇರ್ಪಡೆಗೊಂಡಿದ್ದಾರೆ. ಸಿಎಸ್‌ಕೆ ಹೊಸ ನಾಯಕನಾಗಿ ಋತುರಾಜ್‌ ನೇಮಕಗೊಂಡಿದ್ದಾರೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ದಿಗ್ಗಜ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು, ನಾಯಕತ್ವವನ್ನು ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್‌ 22ರ ಶುಕ್ರವಾರ ಮುಖಾಮುಖಿಯಾಗಲಿದೆ. ಉದ್ಘಾಟನಾ ಪಂದ್ಯಕ್ಕಿಂತ ಒಂದು ದಿನ ಮುಂಚಿತವಾಗಿ ಮಹತ್ವದ ಘೋಷಣೆ ಬಂದಿದೆ.
icon

(1 / 6)

(X)

ದಿಢೀರ್‌ ನಾಯಕತ್ವ ಬದಲಾವಣೆಗೆ ಕಾರಣವೇನು ಎಂದು ಅಭಿಮಾನಿಗಳು ಕುತೂಹಲದಲ್ಲಿದ್ದಾರೆ. ಈ ಕುರಿತು ಸಿಎಸ್‌ಕೆ ಫ್ರಾಂಚೈಸ್ ಮಾಹಿತಿ ನೀಡಿದೆ.
icon

(2 / 6)

(Chennai Super Kings)

ಫ್ರಾಂಚೈಸಿಯು ಋತುರಾಜ್ ಅವರನ್ನು ತಂಡದ ಅವಿಭಾಜ್ಯ ಅಂಗ ಎಂದು ಬಣ್ಣಿಸಿದೆ. 17ನೇ ಆವೃತ್ತಿಯ ವಿಶ್ವದ ಶ್ರೀಮಂತ ಟಿ20 ಲೀಗ್‌ ಆರಂಭಕ್ಕೂ ಮುನ್ನ ಭಾರತದ ಯುವ ಆರಂಭಿಕ ಬ್ಯಾಟರ್‌ಗೆ ಶುಭ ಹಾರೈಸಿದೆ.
icon

(3 / 6)

2024ರ ಐಪಿಎಲ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಋತುರಾಜ್ 2019ರಿಂದ ಸಿಎಸ್‌ಕೆ ಅವಿಭಾಜ್ಯ ಅಂಗವಾಗಿದ್ದಾರೆ. ಈವರೆಗೆ 52 ಪಂದ್ಯಗಳನ್ನು ಆಡಿದ್ದಾರೆ ಎಂದು ಸಿಎಸ್‌ಕೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
icon

(4 / 6)

ಭಾರತದ ಪರ ಆರು ಏಕದಿನ ಹಾಗೂ 19 ಟಿ20 ಪಂದ್ಯಗಳಲ್ಲಿ ಆಡಿರುವ ಗಾಯಕ್ವಾಡ್, 2020ರಲ್ಲಿ ಹಳದಿ ಆರ್ಮಿಗೆ ಪದಾರ್ಪಣೆ ಮಾಡಿದರು. ತಂಡದ ಯಶಸ್ವಿ ಆರಂಭಿಕನಾಗಿ 52 ಪಂದ್ಯಗಳಲ್ಲಿ ಆಡಿದ್ದಾರೆ. ಟೂರ್ನಿಯ ಕಳೆದ ಆವೃತ್ತಿಯಲ್ಲಿ 16 ಪಂದ್ಯಗಳಲ್ಲಿ 147.50ರ ಸ್ಟ್ರೈಕ್ ರೇಟ್‌ನಲ್ಲಿ 590 ರನ್ ಕಲೆ ಹಾಕಿದ್ದರು.
icon

(5 / 6)

ಅತ್ತ ದಿಗ್ಗಜ ಕ್ರಿಕೆಟಿಗ ಮಾಹಿ, 2020ರಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದರು. ಆದರೆ, ಐಪಿಎಲ್‌ನಲ್ಲಿ ನಾಯಕತ್ವದೊಂದಿಗೆ ತಂಡವನ್ನು ಮುನ್ನಡೆಸಿದ್ದರು. ಧೋನಿಯ ಬಳಿಕ ಸಿಎಸ್‌ಕೆ ಉತ್ತರಾಧಿಕಾರಿ ಯಾರು ಎಂಬುದು ಈ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಕಳೆದ ಬಾರಿ ಬೆನ್‌ ಸ್ಟೋಕ್ಸ್‌ ಖರೀದಿ ಬಳಿಕ ಅವರೇ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಭಾರತೀಯ ಯುವ ಆಟಗಾರನಿಗೆ ಮಹತ್ತರ ಜವಾಬ್ದಾರಿ ನೀಡಲಾಗಿದೆ.
icon

(6 / 6)

ಇತರ ಗ್ಯಾಲರಿಗಳು