ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೂಪರ್-8 ಪ್ರವೇಶಿಸಿದ ವೆಸ್ಟ್ ಇಂಡೀಸ್; ಕಿವೀಸ್ಗೆ ಲೀಗ್ನಿಂದಲೇ ಹೊರಬೀಳುವ ಆತಂಕ
- WI Beat NZ: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್, ಸಿ ಗುಂಪಿನಲ್ಲಿ ಮೊದಲ ತಂಡವಾಗಿ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ.
- WI Beat NZ: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್, ಸಿ ಗುಂಪಿನಲ್ಲಿ ಮೊದಲ ತಂಡವಾಗಿ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ.
(1 / 5)
ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 26ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 13 ರನ್ಗಳಿಂದ ಗೆದ್ದು ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಆದರೆ, ಸೋತ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.(PTI)
(2 / 5)
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಶೆರ್ಫಾನೆ ರುದರ್ಫೋರ್ಡ್ (68) ಏಕಾಂಗಿ ಹೋರಾಟ ನಡೆಸಿದರು. ಟ್ರೆಂಟ್ ಬೋಲ್ಟ್ 3, ಟಿಮ್ ಸೌಥಿ ಮತ್ತು ಲಾಕಿ ಫರ್ಗ್ಯುಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು.(PTI)
(3 / 5)
ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿತು. ಅಫ್ಘಾನಿಸ್ತಾನ ವಿರುದ್ಧದ ನಂತರ ವಿಂಡೀಸ್ ಎದುರು ಸಹ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಆರ್ಸಿಬಿ ಆಟಗಾರ ಅಲ್ಜಾರಿ ಜೋಸೆಫ್ 4 ವಿಕೆಟ್, ಗುಡಕೇಶ್ ಮೋಟಿ 3 ವಿಕೆಟ್ ಪಡೆದರು.(AP)
(4 / 5)
ವೆಸ್ಟ್ ಇಂಡೀಸ್ ಸತತ ಮೂರಕ್ಕೆ ಮೂರು ಗೆದ್ದು, ಸೂಪರ್ 8 ಹಂತಕ್ಕೆ ಪ್ರವೇಶಿಸಿತು. ಆದರೆ, ಕಿವೀಸ್ 2 ಪಂದ್ಯ ಸೋತು ಸಂಕಷ್ಟಕ್ಕೆ ಸಿಲುಕಿದೆ. ಸಿ ಗುಂಪಿನಲ್ಲಿ ಈಗಾಗಲೇ ಅಫ್ಘಾನಿಸ್ತಾನ ಎರಡೂ ಗೆದ್ದಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸಲು ಇನ್ನೊಂದು ಗೆಲುವು ಅಗತ್ಯ ಇದೆ.(AP)
ಇತರ ಗ್ಯಾಲರಿಗಳು