WPL 2024: ಡೆಲ್ಲಿ ವಿರುದ್ಧ ಸೋತು ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ; ಹೀಗಿದೆ ಡಬ್ಲ್ಯೂಪಿಎಲ್ ಅಂಕಪಟ್ಟಿ
- ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್‌ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ತಂಡವು (RCB vs DC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ ಆರ್‌ಸಿಬಿ ತಂಡವು ಎರಡನೇ ಸ್ಥಾನಕ್ಕೆ ಜಾರಿದೆ. ಡಬ್ಲ್ಯೂಪಿಎಲ್ 2024ರ ಆವೃತ್ತಿಯ ಅಂಕಪಟ್ಟಿ ಇಲ್ಲಿದೆ.

(1 / 5)
ಆರ್‌ಸಿಬಿ ವಿರುದ್ಧ 25 ರನ್ ಅಂತರದಿಂದ ಗೆದ್ದ ಮೆಗ್ ಲ್ಯಾನಿಂಗ್ ಪಡೆಯು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ತಂಡವು ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿದ್ದು, ನೆಟ್ ರನ್ ರೇಟ್ (+1.271) ಲೆಕ್ಕಾಚಾರದಲ್ಲಿ ಮೊದಲ ಸ್ಥಾನಕ್ಕೇರಿದೆ.
(PTI)(2 / 5)
ಡೆಲ್ಲಿ ವಿರುದ್ಧ ಸೋತ ಬೆಂಗಳೂರು ತಂಡವು, ನೆಟ್ ರನ್ ರೇಟ್ (+0.705) ಕುಸಿತದಿಂದಾಗಿ ಎರಡನೇ ಸ್ಥಾನಕ್ಕೆ ಜಾರಿದೆ. ಸ್ಮೃತಿ ಮಂಧಾನ ಪಡೆ ಕೂಡಾ ಡೆಲ್ಲಿಯಂತೆ 2 ಪಂದ್ಯ ಗೆದ್ದು ಒಂದರಲ್ಲಿ ಸೋತಿದೆ. ಆದರೆ ನೆಟ್ ರನ್ ರೇಟ್ ಕಡಿಮೆ ಇದೆ.
(PTI)(3 / 5)
ಅತ್ತ ಡೆಲ್ಲಿ ಮತ್ತು ಬೆಂಗಳೂರು ತಂಡದಂತೆ ಮೂರರಲ್ಲಿ ಎರಡು ಪಂದ್ಯ ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು, 4 ಅಂಕ ಹೊಂದಿದೆ. ಆದರೆ ಕಡಿಮೆ ನೆಟ್ ರನ್ ರೇಟ್ (-0.182) ನಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ.
(PTI)ಇತರ ಗ್ಯಾಲರಿಗಳು