WTC Point Table: ಬಾಂಗ್ಲಾದೇಶ ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾದ ಭಾರತ; ಹೀಗಿದೆ ಅಂಕಪಟ್ಟಿ-cricket news wtc standings after india vs bangladesh test world test championship point table ind vs ban jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Point Table: ಬಾಂಗ್ಲಾದೇಶ ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾದ ಭಾರತ; ಹೀಗಿದೆ ಅಂಕಪಟ್ಟಿ

WTC Point Table: ಬಾಂಗ್ಲಾದೇಶ ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾದ ಭಾರತ; ಹೀಗಿದೆ ಅಂಕಪಟ್ಟಿ

  • World Test Championship Point Table: ಕಾನ್ಪುರದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವ‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಮಳೆಯಿಂದಾಗಿ ಕಾನ್ಪುರ ಟೆಸ್ಟ್‌ ಪಂದ್ಯದಲ್ಲಿ ಬಹುತೇಕ ಎರಡೂವರೆ ದಿನಗಳಿಗಿಂತ ಹೆಚ್ಚು ಸಮಯ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಪಂದ್ಯ ಡ್ರಾಗೊಳ್ಳುವ ಚಿಂತೆಯಲ್ಲಿತ್ತು. ಏಕೆಂದರೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರೆ ವಿಶವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಗೆ ಸಂಪೂರ್ಣ 12 ಅಂಕಗಳ ಸೇರ್ಪಡೆಯಾಗುತ್ತಿತ್ತು. ಪೂರ್ಣ ಅಂಕಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಭಾರತವು ಡಬ್ಲ್ಯುಟಿಸಿ ಫೈನಲ್‌ಗೆ ಹೋಗುವಲ್ಲಿ ಒತ್ತಡಕ್ಕೆ ಒಳಗಾಗುತ್ತಿತ್ತು. ಆದರೆ, ಕೊನೆಯ ಎರಡು ದಿನಗಳಲ್ಲಿ ಅಬ್ಬರದಾಟ ಪ್ರದರ್ಶಿಸುವ ಮೂಲಕ ಮೂಲಕ ರೋಹಿತ್ ಶರ್ಮಾ ಗೆದ್ದು ಬೀಗಿದೆ. ಅಲ್ಲದೆ ಸರಣಿ ವಶಪಡಿಸಿಕೊಂಡಿದೆ.
icon

(1 / 9)

ಮಳೆಯಿಂದಾಗಿ ಕಾನ್ಪುರ ಟೆಸ್ಟ್‌ ಪಂದ್ಯದಲ್ಲಿ ಬಹುತೇಕ ಎರಡೂವರೆ ದಿನಗಳಿಗಿಂತ ಹೆಚ್ಚು ಸಮಯ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಪಂದ್ಯ ಡ್ರಾಗೊಳ್ಳುವ ಚಿಂತೆಯಲ್ಲಿತ್ತು. ಏಕೆಂದರೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರೆ ವಿಶವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಗೆ ಸಂಪೂರ್ಣ 12 ಅಂಕಗಳ ಸೇರ್ಪಡೆಯಾಗುತ್ತಿತ್ತು. ಪೂರ್ಣ ಅಂಕಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಭಾರತವು ಡಬ್ಲ್ಯುಟಿಸಿ ಫೈನಲ್‌ಗೆ ಹೋಗುವಲ್ಲಿ ಒತ್ತಡಕ್ಕೆ ಒಳಗಾಗುತ್ತಿತ್ತು. ಆದರೆ, ಕೊನೆಯ ಎರಡು ದಿನಗಳಲ್ಲಿ ಅಬ್ಬರದಾಟ ಪ್ರದರ್ಶಿಸುವ ಮೂಲಕ ಮೂಲಕ ರೋಹಿತ್ ಶರ್ಮಾ ಗೆದ್ದು ಬೀಗಿದೆ. ಅಲ್ಲದೆ ಸರಣಿ ವಶಪಡಿಸಿಕೊಂಡಿದೆ.(PTI)

ಕಾನ್ಪುರ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.  ಅಮೂಲ್ಯವಾದ 12 ಅಂಕಗಳನ್ನು ಸಂಗ್ರಹಿಸುವ ಮೂಲಕ, ಟೀಮ್ ಇಂಡಿಯಾ ಅಂತರ ಹೆಚ್ಚಿಸಿಕೊಂಡಿದೆ. ಭಾರತ ಪ್ರಸ್ತುತ 11 ಪಂದ್ಯಗಳಿಂದ 74.24ರ ದರದಲ್ಲಿ 98 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.
icon

(2 / 9)

ಕಾನ್ಪುರ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.  ಅಮೂಲ್ಯವಾದ 12 ಅಂಕಗಳನ್ನು ಸಂಗ್ರಹಿಸುವ ಮೂಲಕ, ಟೀಮ್ ಇಂಡಿಯಾ ಅಂತರ ಹೆಚ್ಚಿಸಿಕೊಂಡಿದೆ. ಭಾರತ ಪ್ರಸ್ತುತ 11 ಪಂದ್ಯಗಳಿಂದ 74.24ರ ದರದಲ್ಲಿ 98 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.(AFP)

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದಿಂದ ವೈಟ್‌ವಾಶ್ ಆದ ನಂತರ, ಬಾಂಗ್ಲಾದೇಶವು ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಗಣನೀಯವಾಗಿ ಕುಸಿದಿದೆ. ಎರಡು ಸ್ಥಾನಗಳನ್ನು ಕಳೆದುಕೊಂಡ ತಂಡ 5ರಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಬಾಂಗ್ಲಾದೇಶ 8 ಪಂದ್ಯಗಳಲ್ಲಿ 34.38ರ ಸರಾಸರಿಯಲ್ಲಿ 33 ಅಂಕಗಳನ್ನು ಗಳಿಸಿದೆ.
icon

(3 / 9)

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದಿಂದ ವೈಟ್‌ವಾಶ್ ಆದ ನಂತರ, ಬಾಂಗ್ಲಾದೇಶವು ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಗಣನೀಯವಾಗಿ ಕುಸಿದಿದೆ. ಎರಡು ಸ್ಥಾನಗಳನ್ನು ಕಳೆದುಕೊಂಡ ತಂಡ 5ರಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಬಾಂಗ್ಲಾದೇಶ 8 ಪಂದ್ಯಗಳಲ್ಲಿ 34.38ರ ಸರಾಸರಿಯಲ್ಲಿ 33 ಅಂಕಗಳನ್ನು ಗಳಿಸಿದೆ.(AP)

ಕಾನ್ಪುರ ಟೆಸ್ಟ್ ಫಲಿತಾಂಶವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಆಸೀಸ್ ಮೊದಲಿನಂತೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ ಒಟ್ಟು 90 ಅಂಕಗಳನ್ನು ಗಳಿಸಿದೆ. ಆಸೀಸ್ ಸಂಗ್ರಹಿಸಿದ ಅಂಕಗಳ ಶೇಕಡಾವಾರು ಪ್ರಮಾಣ 62.50 ಆಗಿದೆ. ಶ್ರೀಲಂಕಾ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸದ್ಯ ಶ್ರೀಲಂಕಾ 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ಅವರ ಪಾಯಿಂಟ್ ಶೇಕಡಾವಾರು 55.56 ಆಗಿದೆ.
icon

(4 / 9)

ಕಾನ್ಪುರ ಟೆಸ್ಟ್ ಫಲಿತಾಂಶವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಆಸೀಸ್ ಮೊದಲಿನಂತೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ ಒಟ್ಟು 90 ಅಂಕಗಳನ್ನು ಗಳಿಸಿದೆ. ಆಸೀಸ್ ಸಂಗ್ರಹಿಸಿದ ಅಂಕಗಳ ಶೇಕಡಾವಾರು ಪ್ರಮಾಣ 62.50 ಆಗಿದೆ. ಶ್ರೀಲಂಕಾ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸದ್ಯ ಶ್ರೀಲಂಕಾ 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ಅವರ ಪಾಯಿಂಟ್ ಶೇಕಡಾವಾರು 55.56 ಆಗಿದೆ.(ICC)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. 16 ಪಂದ್ಯಗಳಲ್ಲಿ ಬ್ರಿಟಿಷರು 42.19ರ ದರದಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ. ಇದೀಗ ಬಾಂಗ್ಲಾದೇಶ ಹಿಂದೆ ಬಿದ್ದಿದ್ದರಿಂದ ದಕ್ಷಿಣ ಆಫ್ರಿಕಾ ಲೀಗ್ ಟೇಬಲ್‌ನಲ್ಲಿ ಮೇಲೇರಿದೆ. 6 ಪಂದ್ಯಗಳಲ್ಲಿ ಶೇ.38.89ರ ಸರಾಸರಿಯಲ್ಲಿ 28 ಅಂಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾ ಲೀಗ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ. ಸದ್ಯ ಕಿವೀಸ್ ಆಡಿರುವ 8 ಪಂದ್ಯಗಳಲ್ಲಿ 37.50ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ.
icon

(5 / 9)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. 16 ಪಂದ್ಯಗಳಲ್ಲಿ ಬ್ರಿಟಿಷರು 42.19ರ ದರದಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ. ಇದೀಗ ಬಾಂಗ್ಲಾದೇಶ ಹಿಂದೆ ಬಿದ್ದಿದ್ದರಿಂದ ದಕ್ಷಿಣ ಆಫ್ರಿಕಾ ಲೀಗ್ ಟೇಬಲ್‌ನಲ್ಲಿ ಮೇಲೇರಿದೆ. 6 ಪಂದ್ಯಗಳಲ್ಲಿ ಶೇ.38.89ರ ಸರಾಸರಿಯಲ್ಲಿ 28 ಅಂಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾ ಲೀಗ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ. ಸದ್ಯ ಕಿವೀಸ್ ಆಡಿರುವ 8 ಪಂದ್ಯಗಳಲ್ಲಿ 37.50ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ.(AFP)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶದ ನಂತರ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ತಂಡ 7 ಪಂದ್ಯಗಳಲ್ಲಿ 19.05ರ ದರದಲ್ಲಿ ಒಟ್ಟು 16 ಅಂಕಗಳನ್ನು ಸಂಗ್ರಹಿಸಿದೆ.
icon

(6 / 9)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶದ ನಂತರ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ತಂಡ 7 ಪಂದ್ಯಗಳಲ್ಲಿ 19.05ರ ದರದಲ್ಲಿ ಒಟ್ಟು 16 ಅಂಕಗಳನ್ನು ಸಂಗ್ರಹಿಸಿದೆ.(AP)

ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅದು 9 ಪಂದ್ಯಗಳಲ್ಲಿ 18.52ರ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.
icon

(7 / 9)

ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅದು 9 ಪಂದ್ಯಗಳಲ್ಲಿ 18.52ರ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.(AFP)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ತಂಡಗಳ ಶ್ರೇಯಾಂಕವನ್ನು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಪ್ರತಿ ತಂಡಗಳು ಸಂಗ್ರಹಿಸಿದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಅಂಕಪಟ್ಟಿಯ ಅಗ್ರ ಎರಡು ಸ್ಥಾನಿಗಳು ಫೈನಲ್‌ಗೆ ಆಯ್ಕೆಯಾಗುತ್ತವೆ.
icon

(8 / 9)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ತಂಡಗಳ ಶ್ರೇಯಾಂಕವನ್ನು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಪ್ರತಿ ತಂಡಗಳು ಸಂಗ್ರಹಿಸಿದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಅಂಕಪಟ್ಟಿಯ ಅಗ್ರ ಎರಡು ಸ್ಥಾನಿಗಳು ಫೈನಲ್‌ಗೆ ಆಯ್ಕೆಯಾಗುತ್ತವೆ.(PTI)

ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ, 2-0 ಅಂತರದಲ್ಲಿ ಸರಣಿ ಗೆದ್ದು ಸಂಭ್ರಮಿಸಿತು. ಡ್ರಾ ಮಾಡುವ ಅವಕಾಶ ತನ್ನ ಮುಂದಿದ್ದರೂ ಬ್ಯಾಟರ್​​ಗಳ ವೈಫಲ್ಯದಿಂದ ದಿನದಾಟ ಮುಗಿಯುವ ಮುನ್ನವೇ ಬಾಂಗ್ಲಾದೇಶ ಶರಣಾಯಿತು.
icon

(9 / 9)

ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ, 2-0 ಅಂತರದಲ್ಲಿ ಸರಣಿ ಗೆದ್ದು ಸಂಭ್ರಮಿಸಿತು. ಡ್ರಾ ಮಾಡುವ ಅವಕಾಶ ತನ್ನ ಮುಂದಿದ್ದರೂ ಬ್ಯಾಟರ್​​ಗಳ ವೈಫಲ್ಯದಿಂದ ದಿನದಾಟ ಮುಗಿಯುವ ಮುನ್ನವೇ ಬಾಂಗ್ಲಾದೇಶ ಶರಣಾಯಿತು.(PTI)


ಇತರ ಗ್ಯಾಲರಿಗಳು