ಬಲಿಷ್ಠ ಕೆಕೆಆರ್​​ಗೆ ರಾಜಸ್ಥಾನ​ ಸವಾಲು; ದೈತ್ಯರ ಕಾಳಗಕ್ಕೂ ಮುನ್ನ ಈ 10 ಅಂಶ ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಲಿಷ್ಠ ಕೆಕೆಆರ್​​ಗೆ ರಾಜಸ್ಥಾನ​ ಸವಾಲು; ದೈತ್ಯರ ಕಾಳಗಕ್ಕೂ ಮುನ್ನ ಈ 10 ಅಂಶ ತಿಳಿಯಿರಿ

ಬಲಿಷ್ಠ ಕೆಕೆಆರ್​​ಗೆ ರಾಜಸ್ಥಾನ​ ಸವಾಲು; ದೈತ್ಯರ ಕಾಳಗಕ್ಕೂ ಮುನ್ನ ಈ 10 ಅಂಶ ತಿಳಿಯಿರಿ

  • KKR vs RR, IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಕುರಿತ 10 ಅಂಶ ಇಲ್ಲಿದೆ.

ಉಭಯ ತಂಡಗಳ ಮೊದಲ ಪಂದ್ಯಗಳ ಫಲಿತಾಂಶ: ಕೋಲ್ಕತ್ತಾ ಮತ್ತು ರಾಜಸ್ಥಾನ್ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಮುಗ್ಗರಿಸಿವೆ. ಇದೀಗ ಗೆಲುವಿನ ಖಾತೆ ತೆರೆಯಲು ಕಸರತ್ತು ನಡೆಸುತ್ತಿವೆ. ಆರ್​ಸಿಬಿ ವಿರುದ್ಧ ಕೆಕೆಆರ್ ಸೋತಿದ್ದರೆ, ಎಸ್​ಆರ್​ಹೆಚ್ ಎದುರು ಆರ್​ಆರ್​ ಶರಣಾಗಿದೆ.
icon

(1 / 11)

ಪಂದ್ಯ ಎಲ್ಲಿ, ಯಾವಾಗ, ಎಷ್ಟೊತ್ತಿಗೆ?: ಕೆಕೆಆರ್​ vs ಆರ್​​ಆರ್ ನಡುವಿನ 6ನೇ ಐಪಿಎಲ್ ಪಂದ್ಯ ಮಾರ್ಚ್​ 26ರ ಸಂಜೆ 7.30ಕ್ಕೆ ನಡೆಯಲಿದೆ. ಟಾಸ್ ಪ್ರಕ್ರಿಯೆ ಸಂಜೆ 7ಕ್ಕೆ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.
icon

(2 / 11)

(PTI)

ಯಾರ ಮೇಲೆ ಹೆಚ್ಚು ನಿರೀಕ್ಷೆ?: ಕೆಕೆಆರ್ ಪರ ಅಜಿಂಕ್ಯ ರಹಾನೆ, ಸುನಿಲ್ ನರೈನ್ ಅವರಂತೆ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಸೇರಿ ಉಳಿದವರು ಲಯಕ್ಕೆ ಮರಳುವುದು ಅಗತ್ಯ. ಆರ್​​ಆರ್​ ಪರ ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್ ಬ್ಯಾಟಿಂಗ್​ನಲ್ಲಿ ಪವರ್​ ತೋರಿಸಿದ್ದಾರೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ತಮ್ಮ ಬ್ಯಾಟಿಂಗ್ ಮರುಕಳಿಸಬೇಕಿದೆ. ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್ ರಿದಮ್ ಕಂಡುಕೊಳ್ಳಬೇಕು. ಇವರ ಮೇಲೆ ನಿರೀಕ್ಷೆ ಹೆಚ್ಚು
icon

(3 / 11)

ಗಾಯಗೊಂಡ ಆಟಗಾರರು: ಸಂಜು ಸ್ಯಾಮ್ಸನ್​ ಗಾಯಗೊಂಡಿರುವುದು ಆರ್​ಆರ್​ ಚಿಂತೆಗೆ ಕಾರಣವಾಗಿದೆ. ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಮೈದಾನದಲ್ಲಿ ಅವರ ನಾಯಕತ್ವದ ಅನುಪಸ್ಥಿತಿ ಕಾಡುತ್ತಿದೆ. ಆನ್ರಿಚ್ ನೋಕಿಯಾ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಬೇಗ ರಿಕವರ್​ ಆಗಿ ಕೋಲ್ಕತ್ತಾದ ಬೌಲಿಂಗ್​ ವಿಭಾಗಕ್ಕೆ ಬಲ ತುಂಬಬೇಕಿದೆ.
icon

(4 / 11)

ಆಟಗಾರರ ವೈಫಲ್ಯದ ಚಿಂತೆ: ನೈಟ್ ರೈಡರ್ಸ್ ತಂಡದಲ್ಲಿ ಕ್ವಿಂಟನ್ ಡಿ ಕಾಕ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಸೆಲ್, ರಮಣ್ ದೀಪ್, ಸ್ಪೆನ್ಸರ್, ಹರ್ಷಿತ್, ವರುಣ್ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ರಾಯಲ್ಸ್ ತಂಡದಲ್ಲಿ ಯಶಸ್ವಿ, ಪರಾಗ್, ನಿತೀಶ್ ರಾಣಾ, ಆರ್ಚರ್, ಸಂದೀಪ್ ಶರ್ಮಾ ಕಳಪೆ ಪ್ರದರ್ಶನ ನೀಡಿರಲಿಲ್ಲ. ಇವರು ತಮ್ಮ ಹಳೆಯ ಖದರ್​ಗೆ ಮರಳಿದರೆ ಪಂದ್ಯದ ದಿಕ್ಕೇ ಬದಲಾಗಲಿದೆ.
icon

(5 / 11)

(Surjeet Yadav)

ತಂಡದ ಬಲ ಯಾರು: ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಕೋಲ್ಕತ್ತಾಗೆ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಇಬ್ಬರು ಸಹ ಬೌಲಿಂಗ್ ಮತ್ತು ಬ್ಯಾಟಿಂಗ್​ ಎರಡರಲ್ಲೂ ಕೊಡುಗೆ ನೀಡಿದರೆ, ಕೆಕೆಆರ್​ ಗೆಲುವು ಖಚಿತ. ಸಂಜು ಜೊತೆಗೆ ಯಶಸ್ವಿ ಜೈಸ್ವಾಲ್ ಮತ್ತು ಶಿಮ್ರಾನ್ ಹೆಟ್ಮೆಯರ್​ ಆರ್​ಆರ್​ ಬಲವಾಗಿದ್ದಾರೆ.
icon

(6 / 11)

(AP)

ಹೆಡ್​ ಟು ಹೆಡ್ ರೆಕಾರ್ಡ್: ಮುಖಾಮುಖಿ ದಾಖಲೆಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಐಪಿಎಲ್​ನಲ್ಲಿ ಒಟ್ಟು 30 ಪಂದ್ಯಗಳಲ್ಲಿ ಎರಡೂ ತಂಡಗಳು ಸೆಣಸಾಟ ನಡೆಸಿದ್ದು, ತಲಾ 14 ಗೆಲುವು, 14 ಸೋಲು ಕಂಡಿವೆ. 2 ಪಂದ್ಯಗಳು ಫಲಿತಾಂಶಗಳು ಇಲ್ಲದೆ ರದ್ದಾಗಿವೆ.
icon

(7 / 11)

(IndianPremierLeague - X)

ವೆದರ್ ರಿಪೋರ್ಟ್: ಕೆಕೆಆರ್‌ ಹಾಗೂ ರಾಯಲ್ಸ್‌ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆ ಇಲ್ಲ. ಪಂದ್ಯವು ಅಡೆತಡೆಯಿಲ್ಲದೆ ನಡೆಯುವ ಸಾಧ್ಯತೆ ಒದೆ,. ಯಬಹುದು. ಪಂದ್ಯದ ಸಮಯದಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ ಇರುವ ಮುನ್ಸೂಚನೆ ಇದೆ.
icon

(8 / 11)

ಪಿಚ್​ ರಿಪೋರ್ಟ್: ಗುವಾಹಟಿಯ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಬ್ಯಾಟಿಂಗ್ ಮಾಡಲು ಉತ್ತಮ ಪಿಚ್‌ ಆಗಿದೆ. ಇನ್ನಿಂಗ್ಸ್‌ ಆರಂಭದಲ್ಲಿ ವೇಗಿಗಳು ಸ್ವಲ್ಪ ಮೇಲುಗೈ ಸಾಧಿಸಲಿದ್ದಾರೆ. ಪಂದ್ಯ ಮುಂದುವರೆದಂತೆ ಬ್ಯಾಟಿಂಗ್‌ ಸುಲಭವಾಗುತ್ತದೆ.
icon

(9 / 11)

ಕೆಕೆಆರ್​ ಸಂಭಾವ್ಯ ತಂಡ: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಆಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಸ್ಪೆನ್ಸರ್ ಜಾನ್ಸನ್, ವರುಣ್ ಚಕ್ರವರ್ತಿ.
icon

(10 / 11)

ಆರ್​ಆರ್​ ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ.
icon

(11 / 11)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು