ಟಿ20 ಕ್ರಿಕೆಟ್‌: ಹೊಸ ಚರಿತ್ರೆ ಸೃಷ್ಟಿಸಿದ ರಶೀದ್ ಖಾನ್; ಸಿಎಸ್​ಕೆ ಸ್ಟಾರ್ ಡ್ವೇನ್​ ಬ್ರಾವೋ ವಿಶ್ವದಾಖಲೆ ಧ್ವಂಸ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ಕ್ರಿಕೆಟ್‌: ಹೊಸ ಚರಿತ್ರೆ ಸೃಷ್ಟಿಸಿದ ರಶೀದ್ ಖಾನ್; ಸಿಎಸ್​ಕೆ ಸ್ಟಾರ್ ಡ್ವೇನ್​ ಬ್ರಾವೋ ವಿಶ್ವದಾಖಲೆ ಧ್ವಂಸ

ಟಿ20 ಕ್ರಿಕೆಟ್‌: ಹೊಸ ಚರಿತ್ರೆ ಸೃಷ್ಟಿಸಿದ ರಶೀದ್ ಖಾನ್; ಸಿಎಸ್​ಕೆ ಸ್ಟಾರ್ ಡ್ವೇನ್​ ಬ್ರಾವೋ ವಿಶ್ವದಾಖಲೆ ಧ್ವಂಸ

  • ಎಸ್​ಎ20 ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪರ್ಲ್ ರಾಯಲ್ಸ್ ವಿರುದ್ಧ ಎರಡು ವಿಕೆಟ್ ಉರುಳಿಸಿದ ಅಫ್ಘಾನಿಸ್ತಾನದ ಹಾಗೂ ಎಂಐ ಕೇಪ್​ಟೌನ್ ತಂಡ ಸ್ಪಿನ್ನರ್ ರಶೀದ್ ಖಾನ್ ಅವರು ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್ ಖಾನ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ದಿಗ್ಗಜ​ ಡ್ವೇನ್ ಬ್ರಾವೋ ಅವರ ಐತಿಹಾಸಿಕ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ ರಶೀದ್.
icon

(1 / 8)

ಸೌತ್ ಆಫ್ರಿಕಾ (ಎಸ್ಎ)-20 ಟೂರ್ನಿಯಲ್ಲಿ ಫೆಬ್ರವರಿ 4ರ ಮಂಗಳವಾರ ಜರುಗಿದ ಪರ್ಲ್ ರಾಯಲ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಐ ಕೇಪ್​ಟೌನ್​ ಪರ ಕಣಕ್ಕಿಳಿದಿದ್ದ ರಶೀದ್ ಖಾನ್ ಈ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
icon

(2 / 8)

ಮಹತ್ವದ ಪಂದ್ಯದಲ್ಲಿ 4 ಓವರ್​​ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದ ರಶೀದ್ ಖಾನ್ ಅವರು ದುನಿತ್ ವೆಲ್ಲಾಲಗೆ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಟಿ20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ.
icon

(3 / 8)

ದುನಿತ್ ವೆಲ್ಲಾಲಗೆ ಅವರ ವಿಕೆಟ್ ಪಡೆದ ಬೆನ್ನಲ್ಲೇ ಡ್ವೇನ್ ಬ್ರಾವೋ ಹೆಸರಿನಲ್ಲಿದ್ದ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ್ದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು ರಶೀದ್.
icon

(4 / 8)

ರಶೀದ್ ಈವರೆಗೂ 461 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 457 ಇನ್ನಿಂಗ್ಸ್​​ಗಳಲ್ಲಿ 633 ವಿಕೆಟ್ ಕಬಳಿಸಿರುವುದು. ರಶೀದ್ 4 ಬಾರಿ 5 ವಿಕೆಟ್​ಗಳ ಗೊಂಚಲು, 16 ಬಾರಿ 4 ವಿಕೆಟ್​ಗಳ ಗೊಂಚಲು ಕಿತ್ತಿದ್ದಾರೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನ 17 ರನ್​ಗೆ 6 ವಿಕೆಟ್ ಪಡೆದಿರುವುದು.
icon

(5 / 8)

ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯ ಪಟ್ಟಿಯಲ್ಲಿ ಸಿಎಸ್​ಕೆ ಸ್ಟಾರ್ ಡ್ವೇನ್ ಬ್ರಾವೋ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ರಾವೋ ತನ್ನ ವೃತ್ತಿಜೀವನದಲ್ಲಿ 582 ಟಿ20 ಪಂದ್ಯಗಳ 546 ಇನ್ನಿಂಗ್ಸ್​​ಗಳಲ್ಲಿ 631 ವಿಕೆಟ್​ ಪಡೆದಿದ್ದಾರೆ.
icon

(6 / 8)

ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅಫ್ಘಾನಿಸ್ತಾನ ಪರ 161 ವಿಕೆಟ್ ಪಡೆದಿದ್ದರೆ, ಐಪಿಎಲ್ ಸೇರಿ ಒಟ್ಟು 12 ಟಿ20 ಲೀಗ್​ಗಳಲ್ಲಿ ಕಣಕ್ಕಿಳಿದು 472 ವಿಕೆಟ್ (ಫೆಬ್ರವರಿ 4ರ ತನಕ) ಕಿತ್ತಿದ್ದಾರೆ. 10564 ಎಸೆತಗಳನ್ನು ಬೌಲ್ ಮಾಡಿದ್ದು, 11442 ರನ್ ಬಿಟ್ಟುಕೊಟ್ಟು 633 ವಿಕೆಟ್ ಕಿತ್ತಿದ್ದಾರೆ.
icon

(7 / 8)

ರಶೀದ್ ಖಾನ್ ಪ್ರಸ್ತುತ ನಡೆಯುತ್ತಿರುವ ಎಸ್ಎ 20 ನಲ್ಲಿ ಎಂಐ ಕೇಪ್ ಟೌನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಫೈನಲ್​ಗೆ ಕೊಂಡೊಯ್ದಿದ್ದಾರೆ. 9 ಇನ್ನಿಂಗ್ಸ್​​ಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು