ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಹ್ಲಿ ಇಷ್ಟವಾಗೋಕೆ ಈ ಅಗ್ರೆಷನ್‌ ಸಾಕಲ್ವೇ;‌ ಐಪಿಎಲ್‌ 2024ರಲ್ಲಿ ಕಿಂಗ್‌ ಕೊಹ್ಲಿಯ ಬೆಸ್ಟ್ ಫೋಟೋಸ್‌

ಕೊಹ್ಲಿ ಇಷ್ಟವಾಗೋಕೆ ಈ ಅಗ್ರೆಷನ್‌ ಸಾಕಲ್ವೇ;‌ ಐಪಿಎಲ್‌ 2024ರಲ್ಲಿ ಕಿಂಗ್‌ ಕೊಹ್ಲಿಯ ಬೆಸ್ಟ್ ಫೋಟೋಸ್‌

  • ವಿರಾಟ್‌ ಕೊಹ್ಲಿ ಆಟ ನೆನಪಾದಾಗ ಅವರ ಅಗ್ರೆಷನ್‌ ಕಣ್ಣ ಮುಂದೆ ಬಾರದೆ ಇರದು. ಕಿಂಗ್‌ ಕೊಹ್ಲಿಗೆ ಅವರ ಅಗ್ರೆಷನೇ ಭೂಷಣ. ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ದಿಗ್ಗಜನಿಗೆ ಫ್ಯಾನ್ಸ್‌ ಸಂಖ್ಯೆ ದುಪ್ಪಟ್ಟಾಗಲು ಅವರ ಆಟಿಟ್ಯೂಡ್‌ ಪ್ರಮುಖ ಕಾರಣ. 2024ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಹೊರಬಿದ್ದಿದೆ. ಆದರೆ, ಟೂರ್ನಿಯಲ್ಲಿ ವಿರಾಟ್‌ ಅಗ್ರೆಷನ್‌ ಮಾತ್ರ ಅಮೋಘ.

ಐಪಿಎಲ್‌ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಸೋತರೂ, ಟೂರ್ನಿಯುದ್ದಕ್ಕೂ ವಿರಾಟ್‌ ಕೊಹ್ಲಿ ಪ್ರದರ್ಶನವು ಅಭಿಮಾನಿಗಳ ಮನಗೆದ್ದಿತು. ಮೈದಾನದಲ್ಲಿ ಪಾದರಸದಂತೆ ಚಂಚಲವಾಗಿ ಓಡಾಡುವ ವಿರಾಟ್‌, ಅಷ್ಟೇ ಅಗ್ರೆಸಿವ್‌ ಕೂಡಾ. 
icon

(1 / 8)

ಐಪಿಎಲ್‌ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಸೋತರೂ, ಟೂರ್ನಿಯುದ್ದಕ್ಕೂ ವಿರಾಟ್‌ ಕೊಹ್ಲಿ ಪ್ರದರ್ಶನವು ಅಭಿಮಾನಿಗಳ ಮನಗೆದ್ದಿತು. ಮೈದಾನದಲ್ಲಿ ಪಾದರಸದಂತೆ ಚಂಚಲವಾಗಿ ಓಡಾಡುವ ವಿರಾಟ್‌, ಅಷ್ಟೇ ಅಗ್ರೆಸಿವ್‌ ಕೂಡಾ. (AFP)

ವಿರಾಟ್‌ ಆಟ ಒಕೆ. ಆದರೆ ಅವರ ಅಗ್ರೆಷನ್‌ ಇಷ್ಟ ಆಗಲ್ಲ ಎನ್ನುವ ಜನರಿದ್ದಾರೆ. ಆದರೆ, ನಮಗೆ ವಿರಾಟ್‌ ಕೊಹ್ಲಿಯಲ್ಲಿ ಅವರ ಅಗ್ರೆಷನೇ ತುಂಬಾ ಇಷ್ಟ ಎನ್ನುವ ಅಭಿಮಾನಿಗಳೇ ಹೆಚ್ಚು.
icon

(2 / 8)

ವಿರಾಟ್‌ ಆಟ ಒಕೆ. ಆದರೆ ಅವರ ಅಗ್ರೆಷನ್‌ ಇಷ್ಟ ಆಗಲ್ಲ ಎನ್ನುವ ಜನರಿದ್ದಾರೆ. ಆದರೆ, ನಮಗೆ ವಿರಾಟ್‌ ಕೊಹ್ಲಿಯಲ್ಲಿ ಅವರ ಅಗ್ರೆಷನೇ ತುಂಬಾ ಇಷ್ಟ ಎನ್ನುವ ಅಭಿಮಾನಿಗಳೇ ಹೆಚ್ಚು.(AFP)

ತಂಡದ ಯಾವುದೇ ಬೌಲರ್‌ ವಿಕೆಟ್‌ ಪಡೆದಾಗ, ಯಾರೇ ಆದರೂ ಶತಕ ಸಿಡಿಸಿದಾಗ ವಿರಾಟ್‌ ಅವರಷ್ಟು ಸಂಭ್ರಮಿಸುವವರು ಬೇರಾರೂ ಇಲ್ಲ. ಇದು ಮೈದಾನದಲ್ಲಿ ತಂಡ ಜೋಶ್‌ ಹೆಚ್ಚಿಸುತ್ತೆ.
icon

(3 / 8)

ತಂಡದ ಯಾವುದೇ ಬೌಲರ್‌ ವಿಕೆಟ್‌ ಪಡೆದಾಗ, ಯಾರೇ ಆದರೂ ಶತಕ ಸಿಡಿಸಿದಾಗ ವಿರಾಟ್‌ ಅವರಷ್ಟು ಸಂಭ್ರಮಿಸುವವರು ಬೇರಾರೂ ಇಲ್ಲ. ಇದು ಮೈದಾನದಲ್ಲಿ ತಂಡ ಜೋಶ್‌ ಹೆಚ್ಚಿಸುತ್ತೆ.(ANI)

ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿರು ವಿರಾಟ್, ಮೈದಾನದಲ್ಲಿ ಸಪ್ಪಗಿದ್ದರೆ ಆ ಪಂದ್ಯವೇ ಸಪ್ಪಗಿರುತ್ತೆ. ಅದೇ ವಿರಾಟ್‌ ಆರ್ಭಟ ಒಮ್ಮೆ ಶುರುವಾದರೆ ಸಾಕು ಪಂದ್ಯದ ಜೋಶ್‌ ದುಪ್ಪಟ್ಟಾಗುತ್ತದೆ.
icon

(4 / 8)

ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿರು ವಿರಾಟ್, ಮೈದಾನದಲ್ಲಿ ಸಪ್ಪಗಿದ್ದರೆ ಆ ಪಂದ್ಯವೇ ಸಪ್ಪಗಿರುತ್ತೆ. ಅದೇ ವಿರಾಟ್‌ ಆರ್ಭಟ ಒಮ್ಮೆ ಶುರುವಾದರೆ ಸಾಕು ಪಂದ್ಯದ ಜೋಶ್‌ ದುಪ್ಪಟ್ಟಾಗುತ್ತದೆ.(PTI)

ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. 15 ಪಂದ್ಯಗಳಲ್ಲಿ ಆಡಿ ಬರೋಬ್ಬರಿ 741 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 
icon

(5 / 8)

ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. 15 ಪಂದ್ಯಗಳಲ್ಲಿ ಆಡಿ ಬರೋಬ್ಬರಿ 741 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. (AP)

ಐಪಿಎಲ್‌ 2024ರ ಆವೃತ್ತಿಗೆ ಆರ್‌ಸಿಬಿ ವಿದಾಯ ಹೇಳಿದೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಎಲಿಮನೇಟರ್‌ ಪಂದ್ಯದಲ್ಲಿ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸತತ 17ನೇ ಆವೃತ್ತಿಯಲ್ಲಿಯೂ ಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ, ಟೂರ್ನಿಯ ದ್ವಿತಿಯಾರ್ಧದಲ್ಲಿ ತಂಡ ತೋರಿದ್‌ ಕಂಬ್ಯಾಕ್‌ ಅಮೋಘವಾಗಿತ್ತು.
icon

(6 / 8)

ಐಪಿಎಲ್‌ 2024ರ ಆವೃತ್ತಿಗೆ ಆರ್‌ಸಿಬಿ ವಿದಾಯ ಹೇಳಿದೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಎಲಿಮನೇಟರ್‌ ಪಂದ್ಯದಲ್ಲಿ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸತತ 17ನೇ ಆವೃತ್ತಿಯಲ್ಲಿಯೂ ಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ, ಟೂರ್ನಿಯ ದ್ವಿತಿಯಾರ್ಧದಲ್ಲಿ ತಂಡ ತೋರಿದ್‌ ಕಂಬ್ಯಾಕ್‌ ಅಮೋಘವಾಗಿತ್ತು.(PTI)

ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಸಿಡಿದಿದ್ದಾರೆ. ಒಂದು ಶತಕ ಹಾಗೂ 5 ಅರ್ಧಶಥಕ ಸಿಡಿಸಿದ್ದಾರೆ.
icon

(7 / 8)

ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಸಿಡಿದಿದ್ದಾರೆ. ಒಂದು ಶತಕ ಹಾಗೂ 5 ಅರ್ಧಶಥಕ ಸಿಡಿಸಿದ್ದಾರೆ.(ANI)

ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ, ಮುಂದಿನ ಆವೃತ್ತಿಗೂ ತಂಡದಲ್ಲೇ ಉಳಿಯುವುದು ಬಹುತೇಕ ಖಚಿತ. ಐಪಿಎಲ್‌ 2025ಕ್ಕೂ ಮುಂಚಿತವಾಗಿ ಅವರನ್ನು ತಂಡವು ರಿಟೈನ್‌ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
icon

(8 / 8)

ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ, ಮುಂದಿನ ಆವೃತ್ತಿಗೂ ತಂಡದಲ್ಲೇ ಉಳಿಯುವುದು ಬಹುತೇಕ ಖಚಿತ. ಐಪಿಎಲ್‌ 2025ಕ್ಕೂ ಮುಂಚಿತವಾಗಿ ಅವರನ್ನು ತಂಡವು ರಿಟೈನ್‌ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.(ANI)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು