ಐಪಿಎಲ್ 2024: ವಿರಾಟ್‌ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲೋದು ಖಚಿತ; ಮತ್ತೊಂದು ಮುಕುಟ ನಿರೀಕ್ಷೆಯಲ್ಲಿ ಪರ್ಪಲ್ ಪಟೇಲ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024: ವಿರಾಟ್‌ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲೋದು ಖಚಿತ; ಮತ್ತೊಂದು ಮುಕುಟ ನಿರೀಕ್ಷೆಯಲ್ಲಿ ಪರ್ಪಲ್ ಪಟೇಲ್

ಐಪಿಎಲ್ 2024: ವಿರಾಟ್‌ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲೋದು ಖಚಿತ; ಮತ್ತೊಂದು ಮುಕುಟ ನಿರೀಕ್ಷೆಯಲ್ಲಿ ಪರ್ಪಲ್ ಪಟೇಲ್

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರಿಂದ ಈಗಾಗಲೇ ಹೊರಬಿದ್ದಿದೆ. ತಂಡ ಫೈನಲ್ ತಲುಪಲು ಸಾಧ್ಯವಾಗದಿದ್ದರೂ, ವಿರಾಟ್ ಕೊಹ್ಲಿ ಈ ಬಾರಿಯೂ ಆರೆಂಜ್ ಕ್ಯಾಪ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಇದು ಸಾಧ್ಯವಾದರೆ, ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಲಿದ್ದಾರೆ.

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸೋತು ಟೂರ್ನಿಯಿಂದ ನಿರ್ಗಮಿಸಿತು. ಇದೇ ವೇಳೆ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ಗೆ ಲಗ್ಗೆ ಹಾಕಿತು. ಫೈನಲ್‌ ಪಂದ್ಯಕ್ಕೆ ಇನ್ನೂ ಒಂದು ದಿನ ಉಳಿದಿರುವಂತೆಯೇ, ಆರೆಂಜ್ ಟೋಪಿ ಮತ್ತು ಪರ್ಪಲ್‌ ಕ್ಯಾಪ್‌ ರೇಸ್ ಚಿತ್ರಣವು ಬಹುತೇಕ ಸ್ಪಷ್ಟವಾಗಿದೆ.
icon

(1 / 8)

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸೋತು ಟೂರ್ನಿಯಿಂದ ನಿರ್ಗಮಿಸಿತು. ಇದೇ ವೇಳೆ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ಗೆ ಲಗ್ಗೆ ಹಾಕಿತು. ಫೈನಲ್‌ ಪಂದ್ಯಕ್ಕೆ ಇನ್ನೂ ಒಂದು ದಿನ ಉಳಿದಿರುವಂತೆಯೇ, ಆರೆಂಜ್ ಟೋಪಿ ಮತ್ತು ಪರ್ಪಲ್‌ ಕ್ಯಾಪ್‌ ರೇಸ್ ಚಿತ್ರಣವು ಬಹುತೇಕ ಸ್ಪಷ್ಟವಾಗಿದೆ.(PTI)

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಭಾರಿ ಮುಂದಿದ್ದಾರೆ. ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 741 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರ ಫೈನಲ್ ತಲುಪಲು ಸಾಧ್ಯವಾಗದಿದ್ದರೂ, ವಿರಾಟ್ ಕೊಹ್ಲಿಯೇ ಟೂರ್ನಿ ಇತಿಹಾಸದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲಲು ಸಜ್ಜಾಗಿದ್ದಾರೆ. ಇದು ಸಾಧ್ಯವಾದರೆ ಅವರು ಇತಿಹಾಸ ನಿರ್ಮಿಸಲಿದ್ದಾರೆ.
icon

(2 / 8)

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಭಾರಿ ಮುಂದಿದ್ದಾರೆ. ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 741 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರ ಫೈನಲ್ ತಲುಪಲು ಸಾಧ್ಯವಾಗದಿದ್ದರೂ, ವಿರಾಟ್ ಕೊಹ್ಲಿಯೇ ಟೂರ್ನಿ ಇತಿಹಾಸದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲಲು ಸಜ್ಜಾಗಿದ್ದಾರೆ. ಇದು ಸಾಧ್ಯವಾದರೆ ಅವರು ಇತಿಹಾಸ ನಿರ್ಮಿಸಲಿದ್ದಾರೆ.(AFP)

ವಿರಾಟ್ ಕೊಹ್ಲಿಗೆ ಸದ್ಯ ಪೈಪೋಟಿ ನೀಡುವವರು ಯಾರೂ ಇಲ್ಲ. ಹೀಗಾಗಿ ಫೈನಲ್‌ ಪಂದ್ಯಕ್ಕೂ ಮುನ್ನವೇ ಐಪಿಎಲ್ 2024ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ಸಿದ್ಧರಾಗಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಮೊದಲು ಯಾವ ಭಾರತೀಯನೂ ಈ ಸಾಧನೆ ಮಾಡಿಲ್ಲ.
icon

(3 / 8)

ವಿರಾಟ್ ಕೊಹ್ಲಿಗೆ ಸದ್ಯ ಪೈಪೋಟಿ ನೀಡುವವರು ಯಾರೂ ಇಲ್ಲ. ಹೀಗಾಗಿ ಫೈನಲ್‌ ಪಂದ್ಯಕ್ಕೂ ಮುನ್ನವೇ ಐಪಿಎಲ್ 2024ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ಸಿದ್ಧರಾಗಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಮೊದಲು ಯಾವ ಭಾರತೀಯನೂ ಈ ಸಾಧನೆ ಮಾಡಿಲ್ಲ.(AFP)

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭೀಕ ಆಟಗಾರ ಟ್ರಾವಿಸ್ ಹೆಡ್ ಮಾತ್ರ ವಿರಾಟ್ ಕೊಹ್ಲಿಗೆ ಪೈಪೋಟಿ ನೀಡಬಲ್ಲ ಆಟಗಾರ. ಫೈನಲ್‌ಗೆ ಲಗ್ಗೆ ಇಟ್ಟಿರುವ ತಂಡಗಳ ಪೈಕಿ ಹೆಡ್ ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತುಸು ಮುಂದಿದ್ದಾರೆ. ಆದರೆ ಅವರು ವಿರಾಟ್ ಕೊಹ್ಲಿಗಿಂತ ಇವರು ಬಹಳ ಹಿಂದಿದ್ದಾರೆ. ಟ್ರಾವಿಸ್ ಹೆಡ್ 567 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂತಿಮ ಪಂದ್ಯದಲ್ಲಿ ಅವರು ಬರೋಬ್ಬರಿ 175 ರನ್ ಗಳಿಸಿದರೆ ಆಡಿದರೆ ಮಾತ್ರ ಕಿಂಗ್‌ ಕೊಹ್ಲಿಯನ್ನು ಮೀರಿಸಲು ಸಾಧ್ಯ. ಇದು ಸಾಧ್ಯವಾದೀತೇ ಎಂಬುದನ್ನು ನೀವೇ ಲೆಕ್ಕ ಹಾಕಿ.
icon

(4 / 8)

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭೀಕ ಆಟಗಾರ ಟ್ರಾವಿಸ್ ಹೆಡ್ ಮಾತ್ರ ವಿರಾಟ್ ಕೊಹ್ಲಿಗೆ ಪೈಪೋಟಿ ನೀಡಬಲ್ಲ ಆಟಗಾರ. ಫೈನಲ್‌ಗೆ ಲಗ್ಗೆ ಇಟ್ಟಿರುವ ತಂಡಗಳ ಪೈಕಿ ಹೆಡ್ ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತುಸು ಮುಂದಿದ್ದಾರೆ. ಆದರೆ ಅವರು ವಿರಾಟ್ ಕೊಹ್ಲಿಗಿಂತ ಇವರು ಬಹಳ ಹಿಂದಿದ್ದಾರೆ. ಟ್ರಾವಿಸ್ ಹೆಡ್ 567 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂತಿಮ ಪಂದ್ಯದಲ್ಲಿ ಅವರು ಬರೋಬ್ಬರಿ 175 ರನ್ ಗಳಿಸಿದರೆ ಆಡಿದರೆ ಮಾತ್ರ ಕಿಂಗ್‌ ಕೊಹ್ಲಿಯನ್ನು ಮೀರಿಸಲು ಸಾಧ್ಯ. ಇದು ಸಾಧ್ಯವಾದೀತೇ ಎಂಬುದನ್ನು ನೀವೇ ಲೆಕ್ಕ ಹಾಕಿ.(AFP)

ಈ ಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 583 ರನ್ ಗಳಿಸಿದ್ದಾರೆ. ರಿಯಾನ್ ಪರಾಗ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 16 ಪಂದ್ಯಗಳಲ್ಲಿ 573 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ ಐದನೇ ಸ್ಥಾನದಲ್ಲಿದ್ದಾರೆ. 16 ಪಂದ್ಯಗಳ ಬಳಿಕ 531 ರನ್ ಗಳಿಸಿದ್ದಾರೆ. ಈ ಎಲ್ಲರೂ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
icon

(5 / 8)

ಈ ಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 583 ರನ್ ಗಳಿಸಿದ್ದಾರೆ. ರಿಯಾನ್ ಪರಾಗ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 16 ಪಂದ್ಯಗಳಲ್ಲಿ 573 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ ಐದನೇ ಸ್ಥಾನದಲ್ಲಿದ್ದಾರೆ. 16 ಪಂದ್ಯಗಳ ಬಳಿಕ 531 ರನ್ ಗಳಿಸಿದ್ದಾರೆ. ಈ ಎಲ್ಲರೂ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.(PTI)

ಆರೆಂಜ್ ಕ್ಯಾಪ್ ನಂತೆ, ಪರ್ಪಲ್ ಕ್ಯಾಪ್ ಚಿತ್ರಣ ಕೂಡಾ ಬಹುತೇಕ ಸ್ಪಷ್ಟವಾಗಿದೆ. ಐಪಿಎಲ್ 2024ರಲ್ಲಿ, ಹರ್ಷಲ್ ಪಟೇಲ್ 14 ಪಂದ್ಯಗಳಲ್ಲಿ 24 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಕದನದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನಿಗಿಂತ ಸುಮಾರು 4 ವಿಕೆಟ್ ಮುಂದಿರುವ ಪಟೇಲ್‌ ಅವರನ್ನು ಹಿಂದಿಕ್ಕುವುದು ಬಹುತೇಕ ಕಷ್ಟ.
icon

(6 / 8)

ಆರೆಂಜ್ ಕ್ಯಾಪ್ ನಂತೆ, ಪರ್ಪಲ್ ಕ್ಯಾಪ್ ಚಿತ್ರಣ ಕೂಡಾ ಬಹುತೇಕ ಸ್ಪಷ್ಟವಾಗಿದೆ. ಐಪಿಎಲ್ 2024ರಲ್ಲಿ, ಹರ್ಷಲ್ ಪಟೇಲ್ 14 ಪಂದ್ಯಗಳಲ್ಲಿ 24 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಕದನದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನಿಗಿಂತ ಸುಮಾರು 4 ವಿಕೆಟ್ ಮುಂದಿರುವ ಪಟೇಲ್‌ ಅವರನ್ನು ಹಿಂದಿಕ್ಕುವುದು ಬಹುತೇಕ ಕಷ್ಟ.(AFP)

ಜಸ್ಪ್ರೀತ್ ಬುಮ್ರಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳಲ್ಲಿ ಅವರು 20 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ನಂತರ ಕೋಲ್ಕತಾ ನೈಟ್ ರೈಡರ್ಸ್‌ ಸ್ಪಿನ್ನರ್ ವರುಣ್ ಚಕ್ರವರ್ತಿ‌ ಮೂರನೇ ಸ್ಥಾನದಲ್ಲಿ ಇದ್ದಾರೆ. 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಫೈನಲ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದರೆ, ವರುಣ್ ಚಕ್ರವರ್ತಿ ಪರ್ಪಲ್ ಕ್ಯಾಪ್ ಗೆಲ್ಲಬಹುದು. ಆದರೆ, ಇದು ಕೂಡಾ ಅಷ್ಟೊಂದು ಸುಲಭವಲ್ಲ
icon

(7 / 8)

ಜಸ್ಪ್ರೀತ್ ಬುಮ್ರಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳಲ್ಲಿ ಅವರು 20 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ನಂತರ ಕೋಲ್ಕತಾ ನೈಟ್ ರೈಡರ್ಸ್‌ ಸ್ಪಿನ್ನರ್ ವರುಣ್ ಚಕ್ರವರ್ತಿ‌ ಮೂರನೇ ಸ್ಥಾನದಲ್ಲಿ ಇದ್ದಾರೆ. 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಫೈನಲ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದರೆ, ವರುಣ್ ಚಕ್ರವರ್ತಿ ಪರ್ಪಲ್ ಕ್ಯಾಪ್ ಗೆಲ್ಲಬಹುದು. ಆದರೆ, ಇದು ಕೂಡಾ ಅಷ್ಟೊಂದು ಸುಲಭವಲ್ಲ(KKR - X)

ಪರ್ಪಲ್ ಕ್ಯಾಪ್ ಗೆಲ್ಲುವ ರೇಸ್‌ನಲ್ಲಿ ಇನ್ನೊಬ್ಬ ಬೌಲರ್ ಇದ್ದಾರೆ. ಅವರು ಟಿ ನಟರಾಜನ್. 13 ಪಂದ್ಯಗಳಲ್ಲಿ 19 ವಿಕೆಟ್‌ ಪಡೆಯುವುದರೊಂದಿಗೆ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಫೈನಲ್‌ನಲ್ಲಿ ನಟರಾಜನ್ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದರೆ, ಅವರು ಪರ್ಪಲ್ ಕ್ಯಾಪ್ ಪಡೆಯುತ್ತಾರೆ. ಇನ್ನು ಆವೇಶ್ ಕಾನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 16 ಪಂದ್ಯಗಳಲ್ಲಿ ಅವರು 19 ವಿಕೆಟ್ ಪಡೆದಿದ್ದಾರೆ.
icon

(8 / 8)

ಪರ್ಪಲ್ ಕ್ಯಾಪ್ ಗೆಲ್ಲುವ ರೇಸ್‌ನಲ್ಲಿ ಇನ್ನೊಬ್ಬ ಬೌಲರ್ ಇದ್ದಾರೆ. ಅವರು ಟಿ ನಟರಾಜನ್. 13 ಪಂದ್ಯಗಳಲ್ಲಿ 19 ವಿಕೆಟ್‌ ಪಡೆಯುವುದರೊಂದಿಗೆ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಫೈನಲ್‌ನಲ್ಲಿ ನಟರಾಜನ್ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದರೆ, ಅವರು ಪರ್ಪಲ್ ಕ್ಯಾಪ್ ಪಡೆಯುತ್ತಾರೆ. ಇನ್ನು ಆವೇಶ್ ಕಾನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 16 ಪಂದ್ಯಗಳಲ್ಲಿ ಅವರು 19 ವಿಕೆಟ್ ಪಡೆದಿದ್ದಾರೆ.(PTI)


ಇತರ ಗ್ಯಾಲರಿಗಳು