ಐಪಿಎಲ್ 2025ರಲ್ಲಿ ಇರಲ್ಲ ಬಾಂಗ್ಲಾದೇಶ ಆಟಗಾರರು; ಹರಾಜಿನಲ್ಲಿ ಒಬ್ಬರಿಗೂ ಬಿಡ್ ಮಾಡದ ಫ್ರಾಂಚೈಸಿಗಳು, ಕಾರಣವೇನು?
- ಐಪಿಎಲ್ 2025ರ ಮೆಗಾ ಹರಾಜು ಮುಕ್ತಾಯಗೊಂಡಿದೆ. ಒಟ್ಟು 1577 ಆಟಗಾರರ ಪೈಕಿ, 574 ಆಟಗಾರರನ್ನು ಹರಾಜಿನಲ್ಲಿ ವಿವಿಧ ಫ್ರಾಂಚೈಸಿಗಳು ಖರೀದಿ ಮಾಡಿವೆ. ಹರಾಜಿನಲ್ಲಿ ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದ 12 ಆಟಗಾರರಿದ್ದರು. ಆದರೆ ಈ ಬಾರಿ ಹರಾಜಿನಲ್ಲಿ ಬಾಂಗ್ಲಾದೇಶದ ಯಾವುದೇ ಕ್ರಿಕೆಟಿಗರನ್ನು ತಂಡಗಳು ಖರೀದಿ ಮಾಡಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ.
- ಐಪಿಎಲ್ 2025ರ ಮೆಗಾ ಹರಾಜು ಮುಕ್ತಾಯಗೊಂಡಿದೆ. ಒಟ್ಟು 1577 ಆಟಗಾರರ ಪೈಕಿ, 574 ಆಟಗಾರರನ್ನು ಹರಾಜಿನಲ್ಲಿ ವಿವಿಧ ಫ್ರಾಂಚೈಸಿಗಳು ಖರೀದಿ ಮಾಡಿವೆ. ಹರಾಜಿನಲ್ಲಿ ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದ 12 ಆಟಗಾರರಿದ್ದರು. ಆದರೆ ಈ ಬಾರಿ ಹರಾಜಿನಲ್ಲಿ ಬಾಂಗ್ಲಾದೇಶದ ಯಾವುದೇ ಕ್ರಿಕೆಟಿಗರನ್ನು ತಂಡಗಳು ಖರೀದಿ ಮಾಡಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ.
(1 / 6)
ಈ ಹಿಂದಿನ ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಹಲವು ಆಟಗಾರರು ಆಡಿದ್ದಾರೆ. ಅವರಲ್ಲಿ ಶಕೀಬ್ ಅಲ್ ಹಸನ್, ಮುಸ್ತಫಿಜುರ್ ರೆಹ್ಮಾನ್ ಪ್ರಮುಖರು. ಆದರೆ, ಈ ಬಾರಿಯ ಯಾವುದೇ ತಂಡವು ಬಾಂಗ್ಲಾದೇಶದ ಆಟಗಾರರನ್ನು ಬಿಡ್ ಮಾಡಲು ಮುಂದಾಗಲಿಲ್ಲ
(2 / 6)
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಲೀಗ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಈ ಕಾರಣದಿಂದ ಐಪಿಎಲ್ ತಂಡಗಳು ಅವರಿಗೆ ಬಿಡ್ ಮಾಡದಿರಬಹುದು. ಹರಾಜಿನ ಅಂತಿಮ ಪಟ್ಟಿಯಲ್ಲಿ 12 ಆಟಗಾರರಿದ್ದರು. ಅದರಲ್ಲಿ ಇಬ್ಬರು ಆಟಗಾರರು ಹರಾಜಿಗೆ ಒಳಗಾದರು. ಅವರೇ ಮುಸ್ತಾಫಿಜುರ್ ರೆಹಮಾನ್ ಮತ್ತು ರಿಷಾದ್ ಹುಸೇನ್. ಆದರೆ, ಇಬ್ಬರೂ ಮಾರಾಟವಾಗದೆ ಉಳಿದರು.(PTI)
(3 / 6)
ಹರಾಜಿನಲ್ಲಿ ಅಫ್ಘಾನಿಸ್ತಾನದಂತಹ ದೇಶಗಳ ಆಟಗಾರರಿಗೆ ಭಾರಿ ಬೇಡಿಕೆ ಕಂಡುಬಂತು. ಆದರೆ, ಬಾಂಗ್ಲಾದೇಶದ ಆಟಗಾರರು ಯಾಕಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಬಾಂಗ್ಲಾದೇಶದ ಆಟಗಾರರನ್ನು ಆಯ್ಕೆ ಮಾಡದಿರಲು ಮೊದಲ ಕಾರಣವೆಂದರೆ, ಪ್ರತಿಭೆಯ ಕೊರತೆ. ಎರಡನೆಯ ಕಾರಣವೆಂದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಎನ್ಒಸಿ (ನೋ ಆಬ್ಜೆಕ್ಷನ್ ಸರ್ಟಿಫಿಕೇಟ್) ನೀಡಲು ಹಿಂಜರಿಯುತ್ತಿದೆ. (AP)
(4 / 6)
ಇದರೊಂದಿಗೆ ಬಾಂಗ್ಲಾದೇಶವು ಸರಣಿಯನ್ನು ಐಪಿಎಲ್ ಮಧ್ಯದಲ್ಲಿ ಇಡುತ್ತದೆ. ಹೀಗಾಗಿ ಐಪಿಎಲ್ ಮಧ್ಯದಲ್ಲಿ ತನ್ನ ಆಟಗಾರರನ್ನು ದೇಶಕ್ಕೆ ಮರಳಿ ಕರೆಸಿಕೊಳ್ಳುತ್ತದೆ. ಕಾರಣದಿಂದಾಗಿಯೂ ಬಾಂಗ್ಲಾದೇಶದ ಕ್ರಿಕೆಟಿಗರನ್ನು ಆಯ್ಕೆ ಮಾಡದಿರಬಹುದು. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಉತ್ತಮ ಪ್ರದರ್ಶನ ನೀಡಿದ್ದ ಮುಸ್ತಾಫಿಜುರ್, ಐಪಿಎಲ್ ಅನ್ನು ಅರ್ಧದಲ್ಲೇ ತೊರೆದಿದ್ದರು.
(5 / 6)
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ಕಾರಣ ಹರಿದಾಡುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದಿಂದಾಗಿ, ಬಾಂಗ್ಲಾದೇಶಿ ಕ್ರಿಕೆಟಿಗರನ್ನು ಯಾರೂ ಖರೀದಿಸಿಲ್ಲ ಎನ್ನಲಾಗುತ್ತಿದೆ. ಆಟಗಾರರನ್ನು ಖರೀದಿಸದಂತೆ ತಂಡಗಳಿಗೆ ಬಿಸಿಸಿಐ ಸೂಚನೆ ನೀಡಿದೆ ಎಂದು ಬಾಂಗ್ಲಾದೇಶಿಗರು ಹೇಳುತ್ತಿದ್ದಾರೆ.
ಇತರ ಗ್ಯಾಲರಿಗಳು