MCG Crowd: ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಮೊದಲ ದಿನ; ದಾಖಲೆ ಬರೆದ ಪ್ರೇಕ್ಷಕರ ಹಾಜರಾತಿ
- ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಎಂಸಿಜಿಯಲ್ಲಿ ನಡೆಯಿತು. ಈ ಹೈ ವೋಲ್ಟೇಜ್ ಪರೀಕ್ಷೆಯ ಸುತ್ತ ಪ್ರೇಕ್ಷಕರ ಉತ್ಸಾಹವನ್ನು ಬಹಳ ಹಿಂದೆಯೇ ಗಮನಿಸಲಾಗಿದೆ. ಇಂದು ಪ್ರೇಕ್ಷಕರ ಸಂಖ್ಯೆ ಹೊಸ ದಾಖಲೆಯನ್ನು ನಿರ್ಮಿಸಿದೆ.
- ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಎಂಸಿಜಿಯಲ್ಲಿ ನಡೆಯಿತು. ಈ ಹೈ ವೋಲ್ಟೇಜ್ ಪರೀಕ್ಷೆಯ ಸುತ್ತ ಪ್ರೇಕ್ಷಕರ ಉತ್ಸಾಹವನ್ನು ಬಹಳ ಹಿಂದೆಯೇ ಗಮನಿಸಲಾಗಿದೆ. ಇಂದು ಪ್ರೇಕ್ಷಕರ ಸಂಖ್ಯೆ ಹೊಸ ದಾಖಲೆಯನ್ನು ನಿರ್ಮಿಸಿದೆ.
(1 / 6)
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ, ಪ್ರೇಕ್ಷಕರ ಹಾಜರಾತಿಯಲ್ಲಿ ವಿಶೇಷ ದಾಖಲೆ ನಿರ್ಮಿಸಿದೆ.
(2 / 6)
ಇಂಡೋ-ಆಸೀಸ್ ಕದನವನ್ನು ವೀಕ್ಷಿಸಲು ಮೈದಾನದಲ್ಲಿ 87,242 ಪ್ರೇಕ್ಷಕರು ಇದ್ದರು ಎಂದು ವರದಿಯಾಗಿದೆ. ಇದು ಕಳೆದ 5 ವರ್ಷಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂಬುದು ವಿಶೇಷ. ಮತ್ತೊಂದು ಮಾಹಿತಿ ಏನೆಂದರೆ ಇದು ಟೆಸ್ಟ್ ಕ್ರಿಕೆಟ್ಗೆ ಸಂಬಂಧಿಸಿದ ದಾಖಲೆ.
(3 / 6)
2019ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯವನ್ನು ಇದೇ ಎಂಸಿಜಿಯಲ್ಲಿ 80,000ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಕೊರೊನಾ ನಂತರ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿತ್ತು.
(4 / 6)
2020ರಲ್ಲಿ ಎಂಸಿಜಿಯಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಅನ್ನು ವೀಕ್ಷಿಸಿದ್ದು 27,615 ಪ್ರೇಕ್ಷಕರು ಮಾತ್ರ. ಪ್ರಸ್ತುತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಗರಿಷ್ಠ 90,000 ಪ್ರೇಕ್ಷಕರು ಪಂದ್ಯವನ್ನು ಒಟ್ಟಿಗೆ ವೀಕ್ಷಿಸಬಹುದಾಗಿದೆ.
(5 / 6)
ಕ್ರಿಸ್ಮಸ್ ಮರುದಿನ ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಎಲ್ಲಾ ಟಿಕೆಟ್ಗಳು ಎರಡು ವಾರಗಳ ಮುಂಚೆಯೇ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಅಷ್ಟೂ ಮಂದಿ ರೋಚಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾದರು.
(AFP)ಇತರ ಗ್ಯಾಲರಿಗಳು