Rishabh Pant: ವೇಗದ ಅರ್ಧಶತಕ ಸಿಡಿಸಿ ರಿಷಭ್ ಪಂತ್ ವಿಶ್ವದಾಖಲೆ, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rishabh Pant: ವೇಗದ ಅರ್ಧಶತಕ ಸಿಡಿಸಿ ರಿಷಭ್ ಪಂತ್ ವಿಶ್ವದಾಖಲೆ, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

Rishabh Pant: ವೇಗದ ಅರ್ಧಶತಕ ಸಿಡಿಸಿ ರಿಷಭ್ ಪಂತ್ ವಿಶ್ವದಾಖಲೆ, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

  • Rishabh Pant: ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​​​ನಲ್ಲಿ ವೇಗದ ಅರ್ಧಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಬ್ಯಾಟರ್​ ರಿಷಭ್ ಪಂತ್ ದಾಖಲೆ ನಿರ್ಮಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್​​ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
icon

(1 / 10)

ಭಾರತದ 2ನೇ ಇನ್ನಿಂಗ್ಸ್​​ನಲ್ಲಿ ರಿಷಭ್ ಪಂತ್ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಆಸ್ಟ್ರೇಲಿಯಾ ಬೌಲರ್​​ಗಳ ವಿರುದ್ಧ ಸವಾರಿ ಮಾಡಿದ ಪಂತ್​, ಅತಿ ವೇಗದ ಅರ್ಧಶತಕವನ್ನು ದಾಖಲಿಸಿದರು.
icon

(2 / 10)

ತೂಫಾನ್ ಬ್ಯಾಟಿಂಗ್ ನಡೆಸಿದ ಪಂತ್, ಕೇವಲ 29 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದರೊಂದಿಗೆ ಟೆಸ್ಟ್​​ ಕ್ರಿಕೆಟ್​ನಲ್ಲಿ 2ನೇ ಬಾರಿಗೆ ಅತಿ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.
icon

(3 / 10)

33 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 61 ರನ್ ಬಾರಿಸಿ ಔಟಾದ ಪಂತ್, ತಾನು ಅರ್ಧಶತಕ ಸಿಡಿಸಿದ ವೇಳೆ 29 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ ಚಚ್ಚಿದರು. ಅವರ ಬ್ಯಾಟಿಂಗ್ ಸ್ಟ್ರೈಕ್​ರೇಟ್ 184.85.
icon

(4 / 10)

ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಅರ್ಧಶತಕದ ಸಾರ್ವಕಾಲಿಕ ದಾಖಲೆ ಹೊಂದಿದ್ದಾರೆ. 29 ಎಸೆತಗಳಲ್ಲಿ ಈ ಸಾಧನೆ ಮಾಡಿದ ನಂತರ ಕಪಿಲ್ ದೇವ್ ದಾಖಲೆ ಮುರಿದರು.
icon

(5 / 10)

1982ರಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್​​ನಲ್ಲಿ ಕಪಿಲ್ ದೇವ್ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಈ ದಾಖಲೆ ಮೂರನೇ ಸ್ಥಾನಕ್ಕೆ ಕುಸಿದಿದೆ.
icon

(6 / 10)

(AFP)

ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಎಂಬ ದಾಖಲೆಯೂ ರಿಷಭ್ ಪಂತ್ ಹೆಸರಿನಲ್ಲಿದೆ. 2022ರಲ್ಲಿ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
icon

(7 / 10)

(AAP Image via REUTERS)

ವೇಗದ ಅರ್ಧಶತಕದೊಂದಿಗೆ ಟೆಸ್ಟ್​​​ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟೆಸ್ಟ್​​ನಲ್ಲಿ ಎರಡು ಬಾರಿ 30 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಏಕೈಕ ಕ್ರಿಕೆಟಿಗ ರಿಷಭ್ ಪಂತ್. ವಿಶ್ವದ ಯಾವೊಬ್ಬ ಕ್ರಿಕೆಟಿಗನೂ ಈ ಸಾಧನೆ ಮಾಡಿಲ್ಲ.
icon

(8 / 10)

(AP)

ಆದರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಒಟ್ಟಾರೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 5 ಪಂದ್ಯಗಳ 9 ಇನ್ನಿಂಗ್ಸ್​​ಗಳಲ್ಲಿ 28.33ರ ಬ್ಯಾಟಿಂಗ್ ಸರಾಸರಿಯಲ್ಲಿ ಪಂತ್ ಕಲೆ ಹಾಕಿರುವುದು 255 ರನ್ ಮಾತ್ರ.
icon

(9 / 10)

ಕ್ಷಣ ಕ್ಷಣದ ಕ್ರಿಕೆಟ್ ಸುದ್ದಿಗಳ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(10 / 10)

ಇತರ ಗ್ಯಾಲರಿಗಳು