ಐಪಿಎಲ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್; ರಿಯಾನ್ ಪರಾಗ್ ಹೊಸ ದಾಖಲೆ; ಈ ಸಾಧನೆ ಮಾಡಿದ ಇತರ ಆಟಗಾರರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್; ರಿಯಾನ್ ಪರಾಗ್ ಹೊಸ ದಾಖಲೆ; ಈ ಸಾಧನೆ ಮಾಡಿದ ಇತರ ಆಟಗಾರರಿವರು

ಐಪಿಎಲ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್; ರಿಯಾನ್ ಪರಾಗ್ ಹೊಸ ದಾಖಲೆ; ಈ ಸಾಧನೆ ಮಾಡಿದ ಇತರ ಆಟಗಾರರಿವರು

ಐಪಿಎಲ್‌ನಲ್ಲಿ ದಾಖಲೆಗಳು ಹೊಸದೇನಲ್ಲ. ದಿನಕ್ಕೊಂದು ರೆಕಾರ್ಡ್‌ ಆಗುತ್ತವೆ. ಟೂರ್ನಿಯ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ ಬಾರಿಸಿದ ಸಾಧನೆ ಐದು ಬಾರಿ ಆಗಿದೆ. ಕೆಕೆಆರ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಿನ ಐಪಿಎಲ್ ಪಂದ್ಯದಲ್ಲಿ ರಿಯಾನ್ ಪರಾಗ್ 5 ಸಿಕ್ಸರ್‌ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ರಿಯಾನ್ ಪರಾಗ್: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಓವರ್‌ನಲ್ಲಿ ಪರಾಗ್ ಈ ಸಾಧನೆ ಮಾಡಿದ್ದಾರೆ.
icon

(1 / 6)

(AP)

13ನೇ ಓವರ್‌ನ ಮೊದಲ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಸಿಂಗಲ್ ತೆಗೆದುಕೊಂಡರು. ಆ ನಂತರದ 5 ಎಸೆತಗಳನ್ನು ಎದುರಿಸಿದ ಪರಾಗ್‌, ಸತತ ಐದು ಎಸೆತಗಳನ್ನು ಗಾಳಿಯಲ್ಲಿ ಹಾರಿಸಿದರು. ಮೊಯೀನ್ ಒಟ್ಟು 32 ರನ್ ಬಿಟ್ಟುಕೊಟ್ಟರು, ಇದರಲ್ಲಿ ಒಂದು ವೈಡ್ ಕೂಡ ಸೇರಿತ್ತು. ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ 95 ರನ್ ಗಳಿಸಿದರು.
icon

(2 / 6)

(AFP)

ಕ್ರಿಸ್ ಗೇಲ್: ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಆಟಗಾರ ಕ್ರಿಸ್ ಗೇಲ್. 2012 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ್ದ ಗೇಲ್‌, ಪುಣೆ ವಾರಿಯರ್ಸ್ ಇಂಡಿಯಾ ಬೌಲರ್ ರಾಹುಲ್ ಶರ್ಮಾ ಎಸೆದ ಓವರ್‌ನಲ್ಲಿ ಗೇಲ್ ಐದು ಸಿಕ್ಸರ್‌ಗಳನ್ನು ಬಾರಿಸಿದರು.
icon

(3 / 6)

(PTI)

ರಾಹುಲ್ ತೆವಾಟಿಯಾ: ರಾಹುಲ್ ತೆವಾಟಿಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2020ರಲ್ಲಿ ಶೆಲ್ಡನ್ ಕಾಟ್ರೆಲ್ ಅವರ ಓವರ್‌ನಲ್ಲಿ ಅವರು ಐದು ಸಿಕ್ಸರ್‌ಗಳನ್ನು ಬಾರಿಸಿದರು. ಆ ಸಮಯದಲ್ಲಿ ಕಾಟ್ರೆಲ್ ಪಂಜಾಬ್ ಫ್ರಾಂಚೈಸಿಯಲ್ಲಿದ್ದರು. ತೆವಾಟಿಯಾ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದರು.
icon

(4 / 6)

(X)

ರವೀಂದ್ರ ಜಡೇಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ಯಾಶಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ 2021ರಲ್ಲಿ ಆರ್‌ಸಿಬಿಯ ಹರ್ಷಲ್ ಪಟೇಲ್ ಅವರ ಓವರ್‌ನಲ್ಲಿ ಈ ಅದ್ಭುತ ಸಾಧನೆ ಮಾಡಿದರು.
icon

(5 / 6)

(IPL)

ರಿಂಕು ಸಿಂಗ್: ಕೆಕೆಆರ್ ಬ್ಯಾಟರ್‌ ರಿಂಕು ಸಿಂಗ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಗುಜರಾತ್‌ ಟೈಟನ್ಸ್‌ ತಂಡದಲ್ಲಿದ್ದ ಯಶ್ ದಯಾಳ್ ಅವರ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ರಾತ್ರೋರಾತ್ರಿ ಸ್ಟಾರ್ ಆದರು. ಅವರು ಗುಜರಾತ್ ಟೈಟಾನ್ಸ್ ವಿರುದ್ಧ ತಂಡವನ್ನು ಅದ್ಭುತ ಗೆಲುವಿನತ್ತ ಕೊಂಡೊಯ್ದರು.
icon

(6 / 6)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು